Home ರಾಜ್ಯಶಿವಮೊಗ್ಗದಲ್ಲಿ ತ್ರಿಪಕ್ಷಗಳ ರೋಡ್ ಶೋ ಮತಗಳ ಬೇಟೆಗೆ ಕಸರತ್ತು ..!! ಮತದಾರರ ಒಲವು ಯಾವ ಕಡೆ..?!

ಶಿವಮೊಗ್ಗದಲ್ಲಿ ತ್ರಿಪಕ್ಷಗಳ ರೋಡ್ ಶೋ ಮತಗಳ ಬೇಟೆಗೆ ಕಸರತ್ತು ..!! ಮತದಾರರ ಒಲವು ಯಾವ ಕಡೆ..?!

by EDITOR NEWS WARRIORS
0 comments

ಶಿವಮೊಗ್ಗ: ನಗರದಲ್ಲಿ ಇಂದು ಬಿಜೆಪಿ, ಕಾಂಗ್ರೆಸ್, ಜಾತ್ಯತೀತ ಜನತಾದಳ ಸೇರಿದಂತೆ ಮೂರು ಪಕ್ಷದ ಅಭ್ಯರ್ಥಿಗಳು ರೋಡ್ ಶೋ ಮೂಲಕ ನಗರದಾದ್ಯಂತ ಸಂಚರಿಸಿ ಮತದಾರರ ಗಮನ ಸೆಳೆಯಲು ಯತ್ನಿಸಿದರು.

ಬಿಜೆಪಿಯಿಂದ ಸ್ಪರ್ಧಿಸಿರುವ ಚನ್ನಬಸಪ್ಪ( ಚೆನ್ನಿ) ಪರವಾಗಿ ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹಾಗೂ ಅವರ ಪುತ್ರ ಕೆಇ ಕಾಂತೇಶ್ ಅಪಾರ ಜನಸ್ತೋಮದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಗಮನಸೆಳೆದರು.

ಜಾತ್ಯಾತೀತ ಜನತಾದಳದ ಅಭ್ಯರ್ಥಿ ಆಯನೂರ್ ಮಂಜುನಾಥ್ ಪರವಾಗಿ ಸಹ್ಯಾದ್ರಿ ಕಾಲೇಜಿನಿಂದ ಹೊರಟ ರೋಡ್ ಶೋ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾತ್ಯಾತೀತ ಜನತಾದಳದ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಮತದಾರರ ಗಮನ ಸೆಳೆದರು. ಈ ಸಮಯದಲ್ಲಿ ಇವರಿಗೆ ಮಾಜಿ ಶಾಸಕರಾದ ಕೆಬಿ ಪ್ರಸನ್ನ ಕುಮಾರ್ ಹಾಗೂ ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಶ್ರೀಕಾಂತ್ ಹಾಗೂ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ವಲಸೆ ಹೋಗಿರುವ ಹಲವು ಕಾಂಗ್ರೆಸ್ ನಾಯಕರುಗಳು ಬಿಜೆಪಿ ನಾಯಕರುಗಳು ಜೊತೆಯಾಗಿ ಮತಯಾಚಿಸಿದರು.

ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಹೆಚ್, ಸಿ ಯೋಗಿಶ್ ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸುವುದರ ಮೂಲಕ ಮತದಾನವನ್ನು ಯಾಚಿಸಿದರು ಇವರಿಗೆ ಕಾಂಗ್ರೆಸ್ನ ನ ಹಾಲಿ ಮಹಾನಗರ ಪಾಲಿಕೆಯ ಸದಸ್ಯರುಗಳು, ಕಾಂಗ್ರೆಸ್ನ ನ ಯುವ ಮುಖಂಡರುಗಳು, ಸ್ನೇಹಿತರು, ಬಂಧುಗಳು, ಜೊತೆಯಾದರು..

ಈ ಮೂರು ಪಕ್ಷಗಳು ರೋಡ್ ಶೋ ನಡೆಸುವುದರ ಮೂಲಕ ಮತದಾರರ ಗಮನ ಸೆಳೆದರು ಆದರೆ ಮತದಾರ ಯಾರಿಗೆ ತನ್ನ ಅಮೂಲ್ಯವಾದ ಮತವನ್ನು ನೀಡುತ್ತಾನೆ ಎನ್ನುವುದು ಇದೇ ತಿಂಗಳ 10ನೇ ತಾರೀಖು ಅಂದರೆ ಬುಧವಾರ ಗೊತ್ತಾಗುತ್ತದೆ.

ಕೇವಲ ಒಂದು ದಿನ ಮತದಾನಕ್ಕೆ ಉಳಿದ ಈ ಸಮಯದಲ್ಲಿ ಶಿವಮೊಗ್ಗ ನಗರದ ಪ್ರಜ್ಞಾವಂತ ನಾಗರಿಕರು ತಮ್ಮ ಮುಂದಿನ ಉಜ್ವಲ ಭವಿಷ್ಯಕ್ಕಾಗಿ, ಶಿವಮೊಗ್ಗದ ಸಮಗ್ರ ಅಭಿವೃದ್ಧಿಗಾಗಿ, ಮೂರನೇ ವ್ಯಕ್ತಿಗಳ ಸಹಾಯವಿಲ್ಲದೆ ನೇರವಾಗಿ ಸಂಪರ್ಕಕ್ಕೆ ಸಿಗುವ ನಾಯಕನಿಗಾಗಿ ಉತ್ತಮ ಎಲ್ಲರೊಂದಿಗೂ ಬೆರೆತು ಎಲ್ಲರ ಸಂಪರ್ಕಕ್ಕೂ ಸಿಗುವ ಪ್ರತಿನಿಧಿಯನ್ನು ಆಯ್ಕೆ ಮಾಡಿ ಕಳಿಸುತ್ತಾರೆ ಎನ್ನುವ ನಂಬಿಕೆ ಪತ್ರಿಕೆಯದ್ದು…

ರಘುರಾಜ್ ಹೆಚ್.ಕೆ…9449553305…

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...