
ಮೂಲತಃ ತೀರ್ಥಹಳ್ಳಿ ತಾಲೂಕಿನ ಕೊಣಂದೂರು ಸಮೀಪದ ಮಂಗಳ ಗ್ರಾಮದ ಶ್ರೀ ಅಣ್ಣಪ್ಪ ಗೌಡ್ರು ಮತ್ತು ಶ್ರೀಮತಿ ಕಮಲಮ್ಮ ಅವರ ಸುಪುತ್ರ ಎಂಎ ನಟರಾಜ್ ಅವರು ಪಿಎಸ್ಐ ಮೂಲಕ ಪೋಲಿಸ್ ಇಲಾಖೆಗೆ ಸೇರಿ ಶೃಂಗೇರಿ,ಸಾಗರ,ದಾವಣಗೆರೆ ಚಿತ್ರದುರ್ಗ,ಬೆಂಗಳೂರು ಸುರತ್ಕಲ್, ಮಂಗಳೂರಿನಲ್ಲಿ ಪೋಲಿಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಸಾರ್ವಜನಿಕ ಮೆಚ್ಚುಗೆಯ ಪಾತ್ರರಾಗಿದ್ದು, ಇಲಾಖೆಯ ಪ್ರಶಂಸೆಗೂ ಕಾರಣರಾಗಿದ್ದಾರೆ.
ಎಂ ಎ ನಟರಾಜ್ ಅವರು ಶೃಂಗೇರಿ ಸಮೀಪದ ಮೆಣಸಿನಹಾಡ್ಯದಲ್ಲಿ ನಡೆದ ನಕ್ಸಲ್ ನಾಯಕ ಸಾಕೆತ್ ರಾಜನ್ ಎನ್ಕೌಂಟರ್ ಮಾಡಿದ ಒಂದು ತಂಡದ ಮುಖ್ಯಸ್ಥರಾಗಿದ್ದರು ಎನ್ನುವುದು ಸಹ ತೀರ್ಥಹಳ್ಳಿ ಜನತೆಗೆ ಅತ್ಯಂತ ಪ್ರಶಂಸನೀಯ ವಿಚಾರ,
ಪ್ರಸ್ತುತ ಹೆಚ್ಚುವರಿ ಪೊಲೀಸ್ ಅಧೀಕ್ಷರಾಗಿ, ಬಳ್ಳಾರಿ ಜಿಲ್ಲೆಗೆ ನಿಯೋಜನೆ ಗೊಂಡಿದ್ದು ಮುಂದಿನ ಅವರ ವೃತ್ತಿ ಜೀವನ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇವೆ…
ರಘುರಾಜ್ ಹೆಚ್. ಕೆ…9449553305…