
….ಪ್ರಧಾನಿ ಮೋದಿ ಭೇಟಿ ಮರುದಿನವೇ ಹಾಳಾದ ರಸ್ತೆ…
ಬೆಂಗಳೂರು: ಮೊನ್ನೆ ಅಂದರೆ ದಿನಾಂಕ 21/ 22 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಮೈಸೂರು-ಬೆಂಗಳೂರು ಪ್ರವಾಸವನ್ನು ಕೈಗೊಂಡಿದ್ದರು. ಈ ಸಮಯದಲ್ಲಿ ಪ್ರಧಾನಿ ಮೋದಿ ಬರುತ್ತಾರೆ ಎನ್ನುವ ಆತುರದಲ್ಲಿ ಸುಮಾರು 23 ಕೋಟಿಯ ವೆಚ್ಚದಲ್ಲಿ ಬೆಂಗಳೂರಿನಲ್ಲಿ ರಸ್ತೆ ಕಾಮಗಾರಿ ಹಮ್ಮಿಕೊಂಡಿದ್ದು. ಆ ಕಾಮಗಾರಿಯನ್ನು ಕಳಪೆ ಕಾಮಗಾರಿ ಮಾಡಿ ಕೇವಲ 6 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಉಳಿದ 17 ಕೋಟಿಯನ್ನು ಇಂಜಿನಿಯರ್ ಗಳು ಲೂಟಿ ಹೊಡೆದಿದ್ದರು. ಇದರ ಬಗ್ಗೆ ಪತ್ರಿಕೆ ಚಿತ್ರ ಸಮೇತ ವರದಿ ಮಾಡಿತ್ತು. ಹಾಗೆ ಸಂಬಂಧಪಟ್ಟ ಅಧಿಕಾರಿಗಳ, ಸಚಿವರ ,ಮುಖ್ಯಮಂತ್ರಿಗಳ ,ಗಮನಕ್ಕೂ ತರಲಾಗಿತ್ತು.
ವರದಿಯ ನಂತರ ಎಚ್ಚೆತ್ತ ಇಂಜಿನಿಯರ್ ಗಳಿಂದ ರಸ್ತೆಗೆ ತೇಪೆ ಹಚ್ಚುವ ಕೆಲಸ:
ಪತ್ರಿಕಾ ವರದಿ ಚಿತ್ರಸಮೇತ ಬಂದ ನಂತರ ಎಚ್ಚೆತ್ತುಕೊಂಡ ಇಂಜಿನಿಯರ್ ಗಳು ಗುಂಡಿ ಬಿದ್ದ ರಸ್ತೆಗೆ ತೇಪೆ ಹಚ್ಚುವ ಕೆಲಸವನ್ನು ಮಾಡಿದ್ದಾರೆ.
ಗುಂಡಿಬಿದ್ದ ರಸ್ತೆಗೆ ತೇಪೆ ಹಚ್ಚಿದ ಇಂಜಿನಿಯರ್ ಗಳು ಅದರ ಚಿತ್ರ ಈ ಕೆಳಗಿನಂತಿದೆ:::

ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ:
ಪತ್ರಿಕಾ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಕಳಪೆ ಕಾಮಗಾರಿಯನ್ನು ಮಾಡಿದ ಇಂಜಿನಿಯರ್ ಗಳಾದ ಆರ್.ಆರ್.ನಗರ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಂ.ಟಿ.ಬಾಲಾಜಿ, ಆರ್.ಆರ್.ನಗರದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಹೆಚ್.ಜೆ.ರವಿ, ಆರ್.ಆರ್.ನಗರ ಅಸಿಸ್ಟೆಂಟ್ ಎಂಜಿನಿಯರ್ ಐ.ಕೆ.ವಿಶ್ವಾಸ್ಗೆ ನೋಟಿಸ್ ನೀಡಿದೆ.
ಮರಿಯಪ್ಪನ ಪಾಳ್ಯದ ಮುಖ್ಯರಸ್ತೆಯಲ್ಲಿ ರಿಪೇರಿ ಮಾಡಲಾಗಿತ್ತು. ಪ್ರಧಾನಿ ಬಂದು ಹೋದ ಮಾರನೇ ದಿನವೇ ರಸ್ತೆ ಕುಸಿದಿದ್ದು, ಈ ಹಿನ್ನೆಲೆ BBMP ರೋಡ್ ಇನ್ಫ್ರಾಸ್ಟ್ರಕ್ಚರ್ ಚೀಫ್ ಎಂಜಿನಿಯರ್ರಿಂದ ಶೋಕಾಸ್ ನೋಟಿಸ್ ನೀಡಲಾಗಿದೆ.
ಒಟ್ಟಿನಲ್ಲಿ ಪ್ರಧಾನಿ ಮೋದಿ ಬರುವಿಕೆ ಹಿನ್ನೆಲೆಯಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಆತುರದಲ್ಲಿ ರಸ್ತೆ ಕಳಪೆ ಕಾಮಗಾರಿಯಿಂದ ಮಾಡಿದ್ದು . ಕೋಟ್ಯಾಂತರ ಹಣವನ್ನು ಲೂಟಿ ಮಾಡಿದ್ದಾರೆ. ಇಂಥವರ ವಿರುದ್ಧ ಬರೀ ನೋಟಿಸ್ ನೀಡಿದರೆ ಸಾಲದು ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಆ ಮೂಲಕ ಇತರರಿಗೂ ಇದು ಎಚ್ಚರಿಕೆಯ ಗಂಟೆಯಾಗಬೇಕು. ಎನ್ನುವುದು ಪತ್ರಿಕೆಯ ಆಶಯ…
ರಘುರಾಜ್ ಹೆಚ್.ಕೆ…9449553305….