ತೀರ್ಥಹಳ್ಳಿ : ತಾಲೂಕಿನ ಮಾದರಿ ಶಾಲೆ ಎನಿಸಿಕೊಂಡಿರುವ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಶಾಲೆಯು,
ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 100% ರಷ್ಟು ಫಲಿತಾಂಶ ದಾಖಲು ಮಾಡಿದ್ದು. ಪೋಷಕರಲ್ಲಿ, ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ಸಂತಸ ಮೂಡಿದೆ.

ಒಟ್ಟು 19 ವಿದ್ಯಾರ್ಥಿಗಳು 100/100 ಅಂಕಗಳಿಸಿ ಶಾಲೆಗೆ ಹೆಮ್ಮೆ ತಂದಿದ್ದಾರೆ…
ಸತತ ನಾಲ್ಕನೇ ಬಾರಿ ದಾಖಲೆ ಬರೆದ ಶಾಲೆ:
ಸತತವಾಗಿ ನಾಲ್ಕನೇ ಬಾರಿ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ಶಾಲೆ ದಾಖಲೆ ಬರೆದಿದೆ. ಇದರ ಹಿಂದೆ ಶಾಲೆಯ ಮುಖ್ಯ ಶಿಕ್ಷಕರಾದ ಮಂಜು ಬಾಬು ಅವರ ಶ್ರಮ ಅಧಿಕವಾಗಿದೆ. ಹಾಗೆ ಶಾಲೆಯ ಸಿಬ್ಬಂದಿಗಳು, ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ,ಅಧ್ಯಕ್ಷರುಗಳು ಪೋಷಕರು, ಸ್ಥಳೀಯ ಮುಖಂಡರು ,ಸಾರ್ವಜನಿಕರು, ಎಲ್ಲರ ಸಹಕಾರದೊಂದಿಗೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಸರ್ಕಾರಿ ಶಾಲೆ ಬೆಳೆದು ನಿಲ್ಲುತ್ತಿರುವುದು ಸಂತೋಷದ ಸಂಗತಿ…
ಸಾಧನೆಗೆ ಕಾರಣರಾದ ಎಲ್ಲಾ ಮಕ್ಕಳಿಗೂ, ಶಿಕ್ಷಕರಿಗೂ, ಎಸ್ ಡಿ ಎಂ ಸಿ ಯವರಿಗೂ, & ಪೋಷಕರಿಗೂ ಸಹಕಾರ ನೀಡಿದ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸಿದ ಟೀಮ್ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ….
ರಘುರಾಜ್ ಹೆಚ್. ಕೆ…9449553305….
..