
ಸೊರಬ:- ಸೊರಬ ತಾಲ್ಲೂಕು ಕೆರೆಹಳ್ಳಿ ಗ್ರಾಮದಲ್ಲಿ ಆಕಸ್ಮಿಕವಾಗಿ ಪಾಳುಬಾವಿಗೆ ಬಿದ್ದ ಎಮ್ಮೆಯನ್ನು ಅಗ್ನಿಶಾಮಕ ಠಾಣೆ ಸಿಬ್ಬಂದಿ ರಕ್ಷಿಸಿರುವ ಘಟನೆ ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಕೆರೆಹಳ್ಳಿ ಗ್ರಾಮದ ಗಜೇಂದ್ರಗೌಡ ಎಂಬುವವರಿಗೆ ಸೇರಿದ ಎಮ್ಮೆ ಮೇಯಲು ತೆರಳಿದಾಗ ಆಕಸ್ಮಿಕವಾಗಿ ಗ್ರಾಮದ ಅರಣ್ಯಪ್ರದೇಶದ ಸುಮಾರು 35 ಅಡಿ ಆಳದ ಪಾಳು ಬಾವಿಗೆ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಎಮ್ಮೆಯನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.
ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಕೆ. ಮಹಾಬಲೇಶ್ವರ, ಸಿಬ್ಬಂದಿ ಮಹೇಶ್ ಮಡಿವಾಳ, ಪ್ರಸನ್ನಕುಮಾರ್, ಬಿ.ವಿ. ಮಂಜುನಾಥ್, ಗಿರೀಶ್, ಗೃಹರಕ್ಷಕ ದಳದ ಬಿ.ಎನ್. ಗಣಪತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ರಘುರಾಜ್ ಹೆಚ್.ಕೆ…9449553305…