ಬೆಂಗಳೂರು : ಅಂತರ ಜಿಲ್ಲೆ ಸರ್ವಧರ್ಮ ಕವಿಗೋಷ್ಠಿಯನ್ನು ಜಾಗೃತಿ ಟ್ರಸ್ಟ್ ಜುಲೈ 23ಮತ್ತು24 ರಂದು ಧರ್ಮಸ್ಥಳದ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಿದೆ.
ಕಾರ್ಯಕ್ರಮವು ನಡೆಯಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಆಸಕ್ತ ಕವಿಗಳು ಹೆಸರು ನೋಂದಾಯಿಸಿಕೊಂಡು ಭಾಗವಹಿಸಲು ಅವಕಾಶವಿದೆ.
ಜಾಗೃತಿ ಟ್ರಸ್ಟ್ ಸುಮಾರು 20 ವರ್ಷಗಳಿಂದ ನಾಡು ನುಡಿಗೆ ಸಂಬಂಧಿಸಿದ ಹತ್ತು ಹಲವು ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ.
ಧರ್ಮಸ್ಥಳದಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಭಾಗವಹಿಸುವವರಿಗೆ ಪ್ರಯಾಣಕ್ಕಾಗಿ ಬಸ್ಸಿನ ವ್ಯವಸ್ಥೆ ಮತ್ತು ವಸತಿ ವ್ಯವಸ್ಥೆ ಮಾಡಲಾಗುವುದು. ಅದರ ಖರ್ಚುವೆಚ್ಚವನ್ನು ಭಾಗವಹಿಸುವ ಕವಿಗಳು ಭರಿಸಬೇಕಾಗುತ್ತದೆ. ಭಾಷಾ ಸಾಮರಸ್ಯವನ್ನು ಬೆಸೆಯುವ ಈ ಕಾರ್ಯಕ್ರಮದ ವೇಳೆ ಸ್ಥಳ ವೀಕ್ಷಣೆಯ ವ್ಯವಸ್ಥೆಯನ್ನೂ ಮಾಡಲಾಗುವುದು. ಆಸಕ್ತರು ಜುಲೈ 15ರ ಒಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಲು ಕೋರಲಾಗಿದೆ.
ಜಾಗೃತಿ ಟ್ರಸ್ಟ್ನ ಅಧ್ಯಕ್ಷರಾದ ಬಿ. ನಾಗೇಶ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ. ಹೆಚ್ಚನ ವಿವರಗಳಿಗೆ ಮತ್ತು ಹೆಸರು ನೋಂದಾಯಿಸಲು ದೂರವಾಣಿ ಸಂಖ್ಯೆ :9590939909ಗೆ ಕರೆ ಮಾಡಬಹುದು ಎಂದು ಜಾಗೃತಿ ಟ್ರಸ್ಟ್ ನ ಪ್ರಕಟಣೆ ತಿಳಿಸಿದೆ.
ರಘುರಾಜ್ ಹೆಚ್.ಕೆ…9449553305….