
ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಬೈಕ್ ಪ್ರಕರಣ ವರದಿಯಾಗಿದ್ದರಿಂದ ಲಕ್ಷ್ಮಿ ಪ್ರಸಾದ್ (ಐಪಿಎಸ್ ) ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ವಿಕ್ರಂ ಅಮಟೆ, ಹೆಚ್ಚುವರಿ ಪೊಲೀಸ್ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ರವರು ಬೈಕ್ ಕಳ್ಳತನ ಪ್ರಕರಣ ಪತ್ತೆ ಹಚ್ಚಲು ಅದೇಶಿಸಿದ ಮೇರೆಗೆ ,
ರೋಹನ್ ಜಗದೀಶ್ (ಐಪಿಎಸ್ ) ಸಹಾಯಕ ಪೊಲೀಸ್ ಅಧೀಕ್ಷಕರು, ಸಹಾಯಕ ಪೊಲೀಸ್ ಸಾಗರ ಉಪ ವಿಭಾಗ ಸಾಗರ ಮತ್ತು ಕಾರ್ಗಲ್ ಸರ್ಕಲ್ ಇನ್ಸ್ಪೆಕ್ಟರ್, ಪ್ರಭಾರ ಸಾಗರ ನಗರ ಪೊಲೀಸ್ ಠಾಣೆ ಕೃಷ್ಣಪ್ಪ ಕೆ. ವಿ. ರವರ ಮಾರ್ಗದರ್ಶನದಲ್ಲಿ ಕಾರ್ಗಲ್ ಪೊಲೀಸ್ ಠಾಣಾ ಪೊಲೀಸ್ ಪಿ. ಎಸ್. ಐ. ತಿರುಮಲೇಶ್ ಮತ್ತು ಸಾಗರ ನಗರ ಪೊಲೀಸ್ ಠಾಣಾ ಪಿ. ಎಸ್. ಐ. ಟಿ. ಡಿ. ಸಾಗರ್ಕರ್ ರವರ ನೇತೃತ್ವದಲ್ಲಿ ಸಾಗರ ಪೊಲೀಸ್ ಅಪರಾಧ ಸಿಬ್ಬಂದಿಗಳಾದ ಎಚ್. ಸಿ. ರತ್ನಾಕರ್, ಸಿ. ಪಿ. ಸಿ. ಗಳಾದ ಶ್ರೀ ಸಂತೋಷ ನಾಯ್ಕ್, ಶ್ರೀಧರ್, ಯೋಗೇಶ್, ಲೋಕೇಶ್, ಮೈಲಾರಿ, ಭರತ್ ಕುಮಾರ್, ವಿಶ್ವನಾಥ್, ಮಂಜುನಾಥ್ ರವರನ್ನು ಒಳಗೊಂಡ ಪೊಲೀಸ್ ತಂಡ ,
ದಿನಾಂಕ 28/06/2022 ರ ಬೆಳಗಿನ ಜಾವ ಸಾಗರ ಪಟ್ಟಣದಲ್ಲಿ ಆರೋಪಿತರಾದ ( ಎ 1)ಸಮೀರ್ @ ಸೈಕ್ @ ಪ್ಯಾಟ್ರನ್ ತಂದೆ ಹಕಿಬ್ ಉಲ್ಲಾ 23 ವರ್ಷ, ಮುಸ್ಲಿಂ ಜಾತಿ, ಬೆಂಗಳೂರಿನಲ್ಲಿ ಸಿಗರೇಟ್ ಕಂಪನಿಯಲ್ಲಿ ಕೆಲಸ, 4 ನೇ ಟ್ಯಾಂಕ್ ಮೊಹಲ್ಲಾ, ಶಿವಮೊಗ್ಗ ಸ್ವಂತ ಮನೆ, ಎದುರು ಅಂಜನಾಪುರ ಶಿಕಾರಿಪುರ ತಾಲ್ಲೂಕು ಶಿವಮೊಗ್ಗ ಜಿಲ್ಲೆ – ಎ (2) ಮಹ್ಮದ್ ಖಾದ್ರಿ @ ಸುಹೇಲ್ @ ಮಾಕಿ @ ಪಠನ್, ತಂದೆ ಹುಸೇನ್ ಸಾಬ್ 19 ವರ್ಷ, ಮುಸ್ಲಿಂ ಜಾತಿ, ಕಾರ್ ಮೆಕ್ಯಾನಿಕ್ ಕೆಲಸ, (ನವುಲೇಯಲ್ಲಿರುವ ಎಕ್ಸ್ಪೋರ್ಟ್ ಗ್ಯಾರೇಜ್ ನಲ್ಲಿ ಕೆಲಸ ) ವಾಸ ಶಾಂತಿ ನಗರ ಲಾಸ್ಟ ಬಸ್ ನಿಲ್ದಾಣ ಹತ್ತಿರ ಬೇಕರಿ ಪಕ್ಕ ಕ್ಯಾಂಟೀನ್ ಶಿವಮೊಗ್ಗ – ಎ (3) ಜುನೈದ್ ಖಾನ್ @ ಡಾನ್ ತಂದೆ ಆಜೀಜ್ ಪಾಶ, 20 ವರ್ಷ, ಮುಸ್ಲಿಂ ಜಾತಿ, ಕೆಲಸ ಡ್ರೈವಿಂಗ್ ಕೆಲಸ, ವಾಸ 5 ನೇ ತಿರುವು, ಟ್ಯಾಂಕ್ ಮೊಹಲ್ಲಾ, ಶಿವಮೊಗ್ಗ ನಗರ, ರವರನ್ನು ಸಾಗರ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ,
ಆರೋಪಿತರು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣ, ಭದ್ರಾವತಿ, ಹರಿಹರ, ದಾವಣಗೆರೆ, ಹಾಸನ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಗಳನ್ನೂ ಕಳ್ಳತನ ಮಾಡಿದ್ದಾಗಿ ಹೇಳಿಕೆ ನೀಡಿದ್ದರಿಂದ ಆರೋಪಿತರನ್ನು ದಸ್ತಗಿರಿ ಮಾಡಿ ಸುಮಾರು 08,20,000/- ಮೌಲ್ಯದ ವಿವಿಧ ಕಂಪನಿಯ 06 ಬೈಕ್ ಅಮಾನತ್ತು ಪಡಿಸಿಕೊಂಡು ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರೂಪಡಿಸಲಾಯಿತು. ಬೈಕ್ ಕಳ್ಳರನ್ನು ಬಂಧಿಸಿ ಯಶಸ್ವಿಯಾದ ತಂಡಕ್ಕೆ ಲಕ್ಷ್ಮಿ ಪ್ರಸಾದ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ವಿಕ್ರಂ ಅಮಟೆ, ಹೆಚ್ಚುವರಿ ಪೊಲೀಸ್ ಪೊಲೀಸ್ ಅಧೀಕ್ಷಕರು, ರೋಹನ್ ಜಗದೀಶ್ (ಐಪಿಎಸ್ ) ಮಾನ್ಯ ಸಹಾಯಕ ಪೊಲೀಸ್ ಅಧೀಕ್ಷಕರು ರವರು ಅಭಿನಂದನೆ ಸಲ್ಲಿಸಿರುತ್ತಾರೆ.
ಓಂಕಾರ ಎಸ್. ವಿ. ತಾಳಗುಪ್ಪ….
#####################################
ರಘುರಾಜ್ ಹೆಚ್.ಕೆ…9449553305….