
ತೀರ್ಥಹಳ್ಳಿ : ರಾಜ್ಯ ಸರ್ಕಾರದ ಪ್ರಾಥಮಿಕ & ಪ್ರೌಢ ಶಿಕ್ಷಣ ಇಲಾಖೆಯ ಮಾಜಿ ಸಚಿವರು, ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕರು ಆದ,
ಕಿಮ್ಮನೆ ರತ್ನಾಕರ್ .ಇಂದು ಸಂಜೆ 4 ಗಂಟೆಯ ಸಮಯದಲ್ಲಿ ಗುಡ್ಡೇಕೇರಿ ಪ್ರೌಢಶಾಲೆಗೆ ಆಕಸ್ಮಿಕವಾಗಿ ಭೇಟಿ ನೀಡಿದರು,
ನಂತರ ಮಕ್ಕಳು, ಶಿಕ್ಷಕರ ಜೊತೆಗೆ ಮಾತಾನಾಡಿ, ಮಕ್ಕಳಿಗೆ ಕಲಿಕೆಯ ಬಗ್ಗೆ ಕಿವಿ ಮಾತು ಹೇಳಿ ಅವರ ಭವಿಷ್ಯಕ್ಕೆ ಶುಭ ಹಾರೈಸಿದರು.
ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಸಮಗ್ರ ಅಭಿವೃದ್ಧಿಯ ಬದಲಾವಣೆ, ರಾಜ್ಯದ ಅನೇಕ ಶಾಲೆಗಳಿಗೆ ಮಾದರಿಯಾಗಿದ್ದು ಹೀಗೆ ಮುಂದುವರೆಯಲಿ ಎಂದು ಹಾರೈಸಿದರು..ಈ ವರ್ಷ ಎಸ್ ಎಸ್ ಎಲ್ ಸಿ 100 % ಫಲಿತಾಂಶ ಗಳಿಸಿದ್ದಕ್ಕಾಗಿ ಎಲ್ಲಾ ಮಕ್ಕಳಿಗೂ, ಶಿಕ್ಷಕರಿಗೂ ಅಭಿನಂದನೆಗಳನ್ನು ತಿಳಿಸಿ ಪ್ರಶಂಸೆಯನ್ನು ತಿಳಿಸಿದರು..
ಮಾಜಿ ಸಚಿವರಿಗೆ ಶಾಲಾ ಕ್ಯಾಲೆಂಡರ್ ಪುಸ್ತಕ ನೀಡಿ ಗೌರವ :
ಶಾಲೆಯ ಪರವಾಗಿ, ಶಾಲಾ ಕ್ಯಾಲೆಂಡರ್ & ಪುಸ್ತಕ ನೀಡಿ ಗೌರವ ಸಲ್ಲಿಸಲಾಯಿತು..
ಈ ಸಮಯದಲ್ಲಿ ಕೆಸ್ತೂರು ಮಂಜುನಾಥ್, ಹಸಿರುಮನೆ ಮಹಾಬಲೇಶ್, ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ, ಎಲ್ಲಾ ಶಿಕ್ಷಕರು ಹಾಜರಿದ್ದರು..
ಮಗುವಿನ ನೆನಪಿನ ಶಕ್ತಿ ನೋಡಿ ಮುಖ ವಿಸ್ಮಿತರಾದ ಮಾಜಿ ಸಚಿವರು :
ಕೊನೆಯಲ್ಲಿ ಮಕ್ಕಳ ಪರವಾಗಿ ಮಾತಾನಾಡಿದ ಶಮಂತ್ ಎನ್ನುವ 8 ನೇ ತರಗತಿಯ ಹುಡುಗ, ಕಿಮ್ಮನೆ ರತ್ನಾಕರ್ ಅವರನ್ನು ಕುರಿತು ನೀವು ನಮ್ಮ ಅಜ್ಜ ಸತ್ತಾಗ ನಮ್ಮ ಮನೆಗೆ ಬಂದು, ನಮಗೆ ಹಣದ ಸಹಾಯ ಮಾಡಿದ್ದೀರಿ ನಾನು ಆ ಸಮಯದಲ್ಲಿ 5 ನೇ ತರಗತಿ ಓದುತ್ತಿದ್ದೆ ಎಂದಾಗ.. ಕಿಮ್ಮನೆ ಅವರು ಸೇರಿದಂತೆ, ಇಡೀ ಸಭೆಯ ಮೂಕ ವಿಸ್ಮಯ ವಾಯಿತು, ನಂತರ ಕಿಮ್ಮನೆಯವರು ಆ ಮಗುವಿನ ನೆನಪಿನ ಶಕ್ತಿ & ಸ್ಮರಣೆಯನ್ನು ಪ್ರಶಂಸಿಸದರು..
ಕೊನೆಯಲ್ಲಿ ಮಕ್ಕಳು ಸುತ್ತುವರೆದು ಗೌರವ ವಂದನೆಗಳನ್ನು ಸಲ್ಲಿಸಿದರು….
ರಘುರಾಜ್ ಹೆಚ್.ಕೆ…9449553305….