
190ರ ಊಟ ಆರೋಗ್ಯ ರಕ್ಷಾ ಸಮಿತಿಯ ಗಮನಕ್ಕೆ ಬಾರದೇ ಟೆಂಡರ್ ಕರೆದಿರುವುದರ ಹಿಂದೆ ಯಾರ ಕೈವಾಡವಿದೆ ಎಂದು ತನಿಖೆಯಾಗಬೇಕು-ಐ.ಎನ್. ಸುರೇಶ್’ಬಾಬು…..
ಸಾಗರ : – ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಅಡ್ಮಿಷನ್ ಆದ ರೋಗಿಗಳಿಗೆ ಬಿಪಿಎಲ್ ಪಡಿತರ ರೋಗಿಗಳಿಗೆ ನೀಡುವ ಅಸ್ಪತ್ರೆಯಲ್ಲೇ ಸಿದ್ದಪಡಿಸಿ ನೀಡುವ ಪಥ್ಯಾಹಾರ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ. ಬೆಳಿಗ್ಗೆ ಕಾಫಿ, 200ಗ್ರಾಂ ಬ್ರೆಡ್
ಮಧ್ಯಾಹ್ನ ಅನ್ನ, ಸಾಂಬಾರು, ಬಾಳೆಹಣ್ಣು, ಪಲ್ಯ, ಕೋಳಿಮೊಟ್ಟೆಯ ವೆಚ್ಚ ಹೆಚ್ಚುವರಿಯೇ? ಕಳೆದ ಬಾರಿಯ ಟೆಂಡರ್ ಮತ್ತು ಈ ಬಾರಿ ಹಿಡಿದಿರುವ ಟೆಂಡರ್’ನಲ್ಲಿ ಭಾರೀ ಗೋಲ್’ಮಾಲ್ ನಡದಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಅವರು ಇಂದು ಸಾಗರ ಹೋಟೇಲ್ ವೃತ್ತದಲ್ಲಿ ಉಪ ವಿಭಾಗೀಯ ಆಸ್ಪತ್ರೆಯ ಆಡಳಿತದಲ್ಲಿ ಬಡ ರೋಗಿಗಳಿಗೆ ನೀಡುವ ಊಟ ಮತ್ತು ಉಪಹಾರ ನೀಡುವ ಟೆಂಡರ್’ನಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿರುವುದನ್ನು ಖಂಡಿಸಿ ಕಾಂಗ್ರೇಸ್ ಪಕ್ಷ ನಡೆಸಿದ ಪ್ರತಿಭಟನೆಯಲ್ಲಿ ಅವರು ಹೀಗೆ ಹೇಳಿದರು. ನಾನು ದೂರದೃಷ್ಡಿ ಇಟ್ಟುಕೊಂಡು ಸಾಗರದಲ್ಲಿ ಆಸ್ಪತ್ರೆಯನ್ನು ಸುಸಜ್ಜಿತವಾಗಿ ಕಟ್ಡಿಸಿದ್ದೇನೆ. ಈಗಿನ ಶಾಸಕ ಆಸ್ಪತ್ರೆಯ ಬಗ್ಗೆ ಕಾಳಜಿ ವಹಿಸದೇ ಲೋಪ ಮಾಡುತ್ತಿದ್ದರೆಂದು ಹೇಳಿದರು. ಕಾಂಗ್ರೇಸ್ ನಗರ ಅಧ್ಯಕ್ಷ ಐ.ಎನ್. ಸುರೇಶ್’ಬಾಬು ಬ್ರಹ್ಮಾಂಡ ಭ್ರಷ್ಟಾಚಾರ ಆಸ್ಪತ್ರೆಯಲ್ಲಿ ನಡೆದಿದೆ. ಆಡಳಿತಾಧಿಕಾರಿ ಸೇರಿ ಅರೋಗ್ಯ ರಕ್ಷಾ ಸಮಿತಿ ಸಹ ಶಾಮೀಲಾಗಿದೆ. ಮೌನಕ್ಕೆ ಶರಣಾದ ಶಾಸಕರಾದ ಹರತಾಳು ಹಾಲಪ್ಪ ಈ ಕೂಡಲೇ ಸೂಕ್ತ ತನಿಖೆ ನಡೆಸಲು ಸರಕಾರದ ಮಟ್ಟದಲ್ಲಿ ಮಾತನಾಡಬೇಕೆಂದರು.
ಹೋಟೇಲ್’ನಲ್ಲಿ ಊಟದ ದರ 60/-, ಆಸ್ಪತ್ರೆಯಲ್ಲಿ 190ರ ಊಟ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾಕುಮಾರಿ ಮಾತನಾಡಿ, ಬಿಜೆಪಿ ಅಧಿಕಾರ ಅನ್ನುವುದು ಹೊಡೆಯುವ ದಂಧೆಯಾಗಿದೆ. ಈ ರೀತಿ ಮಾಡುವುದು ಜನದ್ರೋಹಿ ಕೆಲಸ ಈ ಟೆಂಡರ್ ಕೂಡಲೇ ರದ್ದಾಗಬೇಕೆಂದು ಹೇಳಿದರು.
ಪ್ರತಿಭಟನೆಯಲ್ಲಿ ಮಧುಮಾಲತಿ, ಇಂದಿರಾ ಸೈಯ್ಯದ್ ತಾಹೀರ್, ಸಂತೋಷ್ ಸದ್ಗುರು, ಸದ್ದಾಂ ಹುಸೇನ್, ಅಜೀಂ, ಕೆ. ಸಿದ್ದಪ್ಪ, ಮರಿಯಾ ಲೀಮಾ, ಸುಮಂಗಲ ರಾಮಕೃಷ್ಣ, ಮಹಾಬಲ ಕೌತಿ, ನಾಗರಾಜ ಗುಡ್ಡೇಮನೆ, ಆರ್ಥರ್ ಗೋಮ್ಸ್, ಕಿರಣ್ ದೊಡ್ಮನೆ, ಅಶೋಕ್ ಬೇಳೂರು, ಯಶವಂತ ಫಣಿ, ಮತ್ತು ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಓಂಕಾರ ಎಸ್. ವಿ. ತಾಳಗುಪ್ಪ….
#####################################
ರಘುರಾಜ್ ಹೆಚ್.ಕೆ…9449553305….