
ತುಮರಿ(ಕಾರ್ಗಲ್ ):- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್ ಪೊಲೀಸ್ ಠಾಣಾ ಸರಹದ್ದು ಬ್ಯಾಕೋಡು ಉಪ ಠಾಣಾ ವ್ಯಾಪ್ತಿಯ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಲ್ಲು ತೂರಾಟ ಮಾಡಿ ಆಸ್ಪತ್ರೆಯ ಆಸ್ತಿಗೆ ತೀವ್ರ ಹಾನಿಯು0ಟು ಮಾಡಿದ ಬಗ್ಗೆ ದೂರು ದಾಖಲಾಗಿತ್ತು.
ದೂರನ್ನೂ ಗಂಭೀರವಾಗಿ ಪರಿಗಣಿಸಿದ ಸಾಗರ ತಾಲ್ಲೂಕು DYSP ರೋಹನ್ ಜಗದೀಶ್ (ಐಪಿಎಸ್ ) ಹಾಗೂ ಕಾರ್ಗಲ್ ಪೊಲೀಸ್ ಠಾಣಾ ಸಿಪಿಐ ಕೃಷ್ಣಪ್ಪ ರವರ ಮಾರ್ಗದರ್ಶನದಲ್ಲಿ ಆರೋಪಿ ಪತ್ತೆ ಮಾಡಲೇ ಬೇಕೆಂದು ಪಣ ತೊಟ್ಟ ಕಾರ್ಗಲ್ ಪೊಲೀಸ್ ಇನ್ಸ್ಪೆಕ್ಟರ್ ತಿರುಮಲೇಶ್ ರವರು ಹಾಗೂ ಸಹ ಪೊಲೀಸ್ ಸಿಬ್ಬಂದಿಗಳಾದ ASI ಕರಿಬಸಪ್ಪ, Hc ಮಂಜ ನಾಯ್ಕ್ , HC ದಿನೇಶ್ , Pc ಸುನಿಲ್, Pc ಪ್ರವೀಣ್ ರವರ ಹಗಲು ರಾತ್ರಿ ಪರಿಶ್ರಮದಿಂದ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಲ್ಲು ತೂರಾಟ ಮಾಡಿದ ಆರೋಪಿಯನ್ನೂ ದೂರು ದಾಖಲಾದ 24 ಗಂಟೆಯಲ್ಲಿ ಬಂಧಿಸಿದ್ದಾರೆ.
ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಲ್ಲು ತೂರಾಟ ಮಾಡಿದ ಬಗ್ಗೆ ಪತ್ತೆ ಹಚ್ಚುವಂತೆ ದೂರು ದಾಖಲಾದ 24 ಗಂಟೆಯೊಳಗೆ ಆರೋಪಿಯನ್ನೂ ಬಂಧಿಸಿರುವ ಕಾರ್ಗಲ್ ಪೊಲೀಸ್ ಇನ್ಸ್ಪೆಕ್ಟರ್ ತಿರುಮಲೇಶ್ ಹಾಗೂ ಸಹ ಪೊಲೀಸ್ ಸಹ ಸಿಬ್ಬಂದಿಗಳ ಕರ್ತವ್ಯಕ್ಕೆ ಸಾಗರ DYSP ರೋಹನ್ ಜಗದೀಶ್ (ಐಪಿಎಸ್ ) ಹಾಗೂ ಕಾರ್ಗಲ್ ಪೊಲೀಸ್ ಕೃಷ್ಣಪ್ಪ (ಸಿಪಿಐ ) ರವರು ಅಭಿನಂದಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿಯ ಕರ್ತವ್ಯ ವೈದ್ಯರ ಮೇಲೆ ನಿರಂತರ ಹಲ್ಲೆ ಪ್ರಕರಣಗಳು ಮಿತಿಮೀರುತ್ತಿದ್ದೂ ಇದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳು ಪ್ರಾಣಭಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರಿ ಆಸ್ಪತ್ರೆಯ ಆಸ್ತಿಗಳಿಗೆ ತೀವ್ರ ಹಾನಿ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವೈದ್ಯಕೀಯ ಸಚಿವರುಗಳು ಸರ್ಕಾರಿ ಆಸ್ಪತ್ರೆಗಳಿಗೆ ಸಿ. ಸಿ. ಕ್ಯಾಮೆರಾ (C. C. CAMERA ) ಗಳನ್ನೂ ಅಳವಡಿಸಲು ವಿಶೇಷ ಅನುದಾನವನ್ನೂ ಸರ್ಕಾರದಿಂದ ಮಂಜೂರು ಮಾಡಿ ತ್ವರಿತಗತಿಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಸಿ. ಸಿ. ಕ್ಯಾಮರಾ (C. C. CAMERA) ಗಳನ್ನೂ ಅಳವಡಿಸಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು.
ಓಂಕಾರ ಎಸ್. ವಿ. ತಾಳಗುಪ್ಪ…
####################################
ರಘುರಾಜ್ ಹೆಚ್.ಕೆ…9449553305….