Monday, May 5, 2025
Google search engine
Homeಶಿವಮೊಗ್ಗಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವುದು ನಮ್ಮೆಲ್ಲರ ಆಶಯವಾಗಿರಲಿ ತೀರ್ಥಹಳ್ಳಿಯ ನೂತನ ತಹಶಿಲ್ದಾರ್ ಅಮೃತ್...

ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವುದು ನಮ್ಮೆಲ್ಲರ ಆಶಯವಾಗಿರಲಿ ತೀರ್ಥಹಳ್ಳಿಯ ನೂತನ ತಹಶಿಲ್ದಾರ್ ಅಮೃತ್ ಅತ್ರೇಶ್ –!!


ಕೋವಿಡ್ ಸಂಕಷ್ಟ ಸಮಯದಲ್ಲಿ ವೈದ್ಯರು,ವೈದ್ಯ ಸಿಬ್ಬಂದಿಗಳ ಜೊತೆಗೆ ಎಲ್ಲಾ ಇಲಾಖೆಗಳ ಸೌಹಾರ್ಧಯುತ ಕಾರ್ಯ ನಿರ್ವಹಣೆ ನಿಜಕ್ಕೂ ಶ್ಲಾಘನೀಯ. ಇಲ್ಲಿ ವೈದ್ಯರು ,ವಿವಿಧ ಸಾಧಕ ನೌಕರರನ್ನು ,ನಿವೃತ್ತರನ್ನು ಗೌರವಿಸುತ್ತಿರುವುದು ಬಹಳ ಒಳ್ಳೆಯ ಕಾರ್ಯ. ಇಲ್ಲಿ ಭಾಗವಹಿಸಿರುವುದರಿಂದ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳ ಪರಿಚಯವಾಗಲು ಸಹಕಾರಿಯಾಗಿದೆ. ಇಲ್ಲಿ ಎಲ್ಲಾ ಸನ್ಮಾನಿತರ ಜೊತೆಗೆ ನಮ್ಮ ತಾಲ್ಲೂಕು ಸಂಘಟನೆಯನ್ನು ಅಭಿನಂದಿಸುವುದಾಗಿ ತೀರ್ಥಹಳ್ಳಿ ತಾಲ್ಲೂಕಿನ ನೂತನ ತಹಶಿಲ್ದಾರ್ ಅಮೃತ್ ಅತ್ರೇಶ ನುಡಿದರು.ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ತಾಲ್ಲೂಕು ಶಾಖೆಯ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ, ಸಾಧಕ ನೌಕರರಿಗೆ ಮತ್ತು ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

 ಮುಂದುವರೆದು, ನಾನು ದೂರದ ಬಯಲು ಸೀಮೆಯವನಾದರೂ ಮಾನಸಿಕವಾಗಿ ಇಲ್ಲಿಗೆ ಹತ್ತಿರದವನು. ಇಲ್ಲಿನ ಪ್ರಕೃತಿ ಪರಿಸರದ ಜೊತೆಗೆ ಕವಿಗಳು,ಸಾಹಿತಿಗಳು ನನಗಿಷ್ಟ. ಹೋಗುವೆನು ನಾ ಹೋಗುವೆನು ನಾ ನನ್ನ ಒಲುವೆಯ ಗೂಡಿಗೆ ಹಾಡು ಕೇಳಿದಾಗ ರೋಮಾಂಚನವಾಗಿತ್ತು.ಈ ನಾಡನ್ನು ಕಾಣುವ ಕುತೂಹಲ ಹುಟ್ಟಿಸಿತ್ತು. ಈಗ ಇಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಸಿಕ್ಕಿದೆ. ಎಲ್ಲರೂ  ಒಗ್ಗೂಡಿ ಉತ್ತಮ ಕಾರ್ಯ ಮಾಡೋಣ. ಇದಕ್ಕೆ ಎಲ್ಲರ ಸಹಕಾರ ಬೇಕಿದೆ. ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವುದು ನಮ್ಮೆಲ್ಲರ ಆಶಯವಾಗಿರಲಿ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಘದ ಅಧ್ಯಕ್ಷ ಟಿ ವಿ ಸತೀಶ, ಕಣ್ಣಿನಿಂದ ಮರೆಯಾದೊಡನೆ  ಮನಸ್ಸಿನಿಂದಲೂ ಮರೆಯಾಗುವವರೆ ಹೆಚ್ಚು. ಕೆಲವರು ಮಾತ್ರ ಮನಸ್ಸಿನೊಳಗೆ ಶಾಶ್ವತವಾಗಿ ಉಳಿದು ಬಿಡುತ್ತಾರೆ‌. ನೆನಪುಗಳಲ್ಲಿ ಉಳಿಸುವ ಶಕ್ತಿ ಇರುವುದು ವ್ಯಕ್ತಿತ್ವಕ್ಕೇ ಹೊರತು ಹುದ್ದೆಗಲ್ಲ. ಕರ್ತವ್ಯ ನಿರ್ವಹಣೆ ಜೊತೆಗೆ ಇತರರೊಡನೆ ವರ್ತಿಸುವ ರೀತಿ,ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ತೋರುವ ಆಸಕ್ತಿ ಅಂತಹ ವ್ಯಕ್ತಿತ್ವವನ್ನು ರೂಪಿಸುತ್ತದೆ. ಸಂಘಟನಾ ಕಾರ್ಯಗಳು ಅದಕ್ಕೆ ಒಳ್ಳೆಯ ಅವಕಾಶಗಳನ್ನು ಒದಗಿಸುತ್ತದೆ. ಇದರ ಮಹತ್ವ ಅರಿತವರು ಪಾಲ್ಗೊಂಡು ಸಂತಸ ಪಡುತ್ತಾರೆ.ಅರಿಯದವರು ಎಂತಹ ಹುದ್ದೆಯಲ್ಲಿದ್ದರೂ ಕುರ್ಚಿಗಷ್ಟೇ ಸೀಮಿತಗೊಂಡು ಸದ್ದಿಲ್ಲದಂತೆ ಕಳೆದು ಹೋಗುತ್ತಾರೆ. ಸಮಾಜವನ್ನು ಒಂದಿಷ್ಟು ಆಸಕ್ತಿಯಿಂದ ಗಮನಿಸಿದಾಗ ಇದರ ಅರಿವಾಗುತ್ತದೆ. ಬಹುತೇಕರಿಗೆ ಇಂತಹ ಅರಿವು ಸಕಾಲದಲ್ಲಿ ಮೂಡದಿರುವುದು ದುರದೃಷ್ಟಕರ ಎಂದರು.
 ನಮ್ಮ ಸಂಘಟನೆ ಕೇವಲ ನಮ್ಮ ಸವಲತ್ತುಗಳ ಈಡೇರಿಕೆಗಾಗಿ ಸೀಮಿತವಾಗಿರದೆ ನೌಕರರ ಮತ್ತು ಸಮಾಜದ ನಡುವಿನ ಒಳಿತನ್ನು ಗುರುತಿಸಿ ಪುಟ್ಟ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಸಕಾರಾತ್ಮಕ ಸಂಗತಿಗಳೆಡೆಗೆ ಪ್ರೇರೇಪಿಸುವ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಅನೇಕ ಸಹೃದಯಿಗಳು ಈ ಕಾರ್ಯಕ್ಕೆ ಪಾಲ್ಗೊಂಡು ಸಹಕರಿಸುತಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಸಂಸ್ಥೆಗಳ ವೈದ್ಯಾಧಿಕಾರಿಗಳಾದ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಟರಾಜ್, ಪ್ರಾ.ಆ.ಕೇಂದ್ರ ಹುಂಚದಕಟ್ಟೆಯ ಡಾ. ಶೋಭಾದೇವಿ. ಸ.ಆ.ಕೇಂದ್ರ ಕನ್ನಂಗಿಯ ಡಾ.ರುಬಿಯ, ಪ್ರಾ.ಆ.ಕೇಂದ್ರ ಆರಗದ ಡಾ.ತೇಜಸ್ವಿ, ಪ್ರಾ.ಆ.ಕೇಂದ್ರ ಕೋಣಂದೂರಿನ ಡಾ.ಮಂಜುನಾಥ್, ಪ್ರಾ.ಅ.ಕೇಂದ್ರ ಅರಳಸುರಳಿಯ ಡಾ.ಶರತ್, ಆಯುಷ್ ವೈದ್ಯಾಧಿಕಾರಿಗಳಾದ ಬಾಲಸ್ವಾಸ್ತ್ಯ ಕಾರ್ಯಕ್ರಮದ ಡಾ. ವಿಶ್ವಾಸ್, ಸರ್ಕಾರಿ ಆಯುರ್ವೇದ ಆಸ್ಪತ್ರೆ ಹೊದಲದ ಡಾ. ಗಣೇಶ್ ಕಾಮತ್, ಸಾಲೂರಿನ ಡಾ.ರವಿಶಂಕರ್ ಉಡುಪರವರನ್ನು ತಾಲ್ಲೂಕಿನ ಎಲ್ಲಾ ಸಹೃದಯಿ ವೈದ್ಯ ಬಂಧುಗಳ ಪರವಾಗಿ ಹಾರ್ದಿಕವಾಗಿ ಅಭಿನಂದಿಸಿ ಗೌರವಿಸಲಾಯಿತು.

ಪ್ಲಾರೆನ್ಸ್ ನೈಂಟಿಂಗೇಲ್ ಪ್ರಶಸ್ತಿ ಪುರಸ್ಕೃತ ಶ್ರೀ ಜೆ ಸಿ ಆಸ್ಪತ್ರೆಯ ಶುಶ್ರೂಷಣಾಧಿಕಾರಿ ಪ್ರಮೀಳ, ಮುಖ್ಯ ಮಂತ್ರಿಗಳ ಪ್ರಶಸ್ತಿ ಪುರಸ್ಕೃತ ಅರಣ್ಯ ಇಲಾಖೆಯ ರಾಮಚಂದ್ರ, ಉಪ ಅರಣ್ಯಾಧಿಕಾರಿ ರಾಜೇಂದ್ರ, ಸರ್ಕಾರಿ ನೌಕರರ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಜೆ ಆಯ್ಕೆಯಾದ ಕೃಷಿ ಅಧಿಕಾರಿ ಸುಶಾಂತ್, ಶಿಕ್ಷಣ ಇಲಾಖೆಯ ಟೀಕೇಶ್, ಪ್ರಾಥಮಿಕ ಶಾಲಾ ಶಿಕ್ಷಕರಾದ ಭಾರತಿ ಮತ್ತು ರೂಪರವರನ್ನು ಹಾರ್ದಿಕವಾಗಿ ಅಭಿನಂದಿಸಲಾಯಿತು.

 ವಿವಿಧ ಇಲಾಖೆಗಳ ನಿವೃತ್ತ ನೌಕರರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಅನಾರೋಗ್ಯದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಅರಣ್ಯ ಇಲಾಖೆಯ ನಿವೃತ್ತ ವಾಹನ ಚಾಲಕ ಜೋಸೆಫ್ ರವರನ್ನು ಅವರ ಸ್ವಗೃಹದಲ್ಲಿ ಗೌರವಿಸಿ,ಶೀಘ್ರ ಗುಣಮುಖವಾಗಲೆಂದು ಶುಭ ಹಾರಿಸಲಾಯಿತು.

ಸನ್ಮಾನಿತರ ಪರವಾಗಿ ಡಾ.ನಟರಾಜ್, ಡಾ.ಶೋಭಾದೇವಿ, ಡಾ.ರವಿಶಂಕರ್ ಉಡುಪ ಮಾತನಾಡಿದರು.

ಸಂಘದ ಕಾರ್ಯದರ್ಶಿ ರಾಮು ಬಿ, ಖಜಾಂಚಿ ಹೆಚ್ ಸಿ ಪವಿತ್ರ, ಉಪಾದ್ಯಕ್ಷರುಗಳಾದ ರಾಘವೇಂದ್ರ ಎಸ್ ,ಎಲ್ಲಪ್ಪ ವಡ್ಡರ್, ಸಂಘಟನಾ ಕಾರ್ಯದರ್ಶಿಗಳಾದ ರಮೇಶ್, ಕೌಶಿಕ್, ಮಂಜುನಾಥ ಕೆ ಆರ್, ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಕಟ್ಟೆ ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಮಹಾಬಲೇಶ್ವರ ಹೆಗಡೆ,ಅಧ್ಯಕ್ಷೆ ಶೋಭಲತಾ, ಜಿಲ್ಲಾ ಖಜಾಂಚಿ ಎಂ ಸಿ ಮಂಜುನಾಥ್,ರಾಜ್ಯ ಸರ್ಕಾರಿ ನೌಕರರ ಸಂಘ, ಆರೋಗ್ಯ ಇಲಾಖಾ ನೌಕರರ ಸಂಘ ಸೇರಿದಂತೆ, ವಿವಿಧ ವೃಂದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ರು ಸದಸ್ಯರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಪ್ರಾರ್ಥಿಸಿ, ರಾಮು ಬಿ ಸ್ವಾಗತಿಸಿ,ಎಲ್ಲಪ್ಪ ವಡ್ಡರ್ ವಂದಿಸಿ, ಹೆಚ್ ಸಿ ಪವಿತ್ರ ನಿರೂಪಿಸಿದರು. ಈಶ್ವರ್, ಕೃಷ್ಣಮೂರ್ತಿ ,ಹನುಂಮತ ರೆಡ್ಡಿ, ವಿಶ್ವನಾಥ್, ಗೀತಾ,ಅನಿತ, ಉಷಾ, ವೀರೇಶ್,ಮತ್ತಿತರರು ಸಹಕರಿಸಿದರು.

 

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..!