
ತೀರ್ಥಹಳ್ಳಿ/ ಹೊಸನಗರ :–ತಾಲೂಕಿನ ಯಡೂರು ಗ್ರಾಮದ ಶ್ವೇತಾ .ಜಿ .ಎ . ರವರಿಗೆ ವಿಶ್ವೇಶ್ವರಯ್ಯ ಟೆಕ್ನಾಲಜಿ ವಿಶ್ವವಿದ್ಯಾಲಯದ ವತಿಯಿಂದ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಲಾಗಿದೆ.ಶ್ವೇತಾ ರವರು ಸಲ್ಲಿಸಿದ ಪ್ರಬಂಧಕ್ಕಾಗಿ ಡಾಕ್ಟರ್ ಆಫ್ ಫಿಲಾಸಫಿ ಪದವಿಗೆ ಅರ್ಹರಾಗಿದ್ದಾರೆ. ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಡಾಕ್ಟರೇಟ್ ಪದವಿಯನ್ನು ನೀಡಲಾಗಿದೆ .ಶ್ವೇತಾರವರಿಗೆ ಪಿಹೆಚ್ ಡಿ ಪದವಿಯನ್ನು ಪಡೆಯಲು ಡಾಕ್ಟರ್ ಎಚ್. ಪಿ .ಸಚಿನ್ ಅವರು ಮಾರ್ಗದರ್ಶಕರಾಗಿದ್ದರು .ಶ್ವೇತಾ ರವರು ಯಡೂರು ನಿವಾಸಿ ಕೆಪಿಸಿ ಸಂಸ್ಥೆ ಯಲ್ಲಿ ಭದ್ರತಾ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಗೋವಿನಹಳ್ಳಿ ಅಶೋಕ್. ಜಿ .ಎಸ್ ಅವರ ಪುತ್ರಿಯಾಗಿದ್ದಾರೆ .
ಡಾಕ್ಟರ್ ಆಫ್ ಫಿಲಾಸಫಿ ಪಡೆದು ಡಾಕ್ಟರೇಟ್ ಪದವಿ ಹೊಂದಿದ್ದ ಶ್ವೇತಾರವರಿಗೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು, ಗೆಳೆಯರು ಬಳಗದಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ….
ಲಿಯೋ ಆರೋಜ….
####################################
ರಘುರಾಜ್ ಹೆಚ್. ಕೆ..9449553305….