
ಶಿವಮೊಗ್ಗ:- ಶಿವಮೊಗ್ಗ ನಗರದಲ್ಲಿ ಟ್ರಾಫಿಕ್ ಪೊಲೀಸರು ಬರೀ ದ್ವಿಚಕ್ರ, ಆಟೋ, ಕಾರು, ಲಾರಿ ಇನ್ನಿತರ ವಾಹನ ಸವಾರರ (ಖಾಸಗಿ ಸಿಟಿ ಬಸ್ ಹೊರತು ಪಡಿಸಿ ) ಮೇಲೆಯೇ ದಂಡ ವಿಧಿಸುತ್ತಿದ್ದಾರೆ.
ಶಿವಮೊಗ್ಗ ನಗರದಲ್ಲಿ ಚಲಿಸುವ ಖಾಸಗಿ ಸಿಟಿ ಬಸ್ ಗಳು ಪ್ರಯಾಣಿಕರ ತಂಗುದಾಣಗಳಲ್ಲಿ ಬಸ್ ನಿಲುಗಡೆ ಮಾಡುವುದಲ್ಲದೇ, ದಿಢೀರನೇ ಯಾವುದೇ ಮುನ್ಸೂಚನೆ ನೀಡದೇ ತಿರುವುಗಳಲ್ಲಿ, ವೃತ್ತಗಳಲ್ಲಿ ನಿಲ್ಲಿಸುವುದರಿಂದ ದಿನನಿತ್ಯ ಶಿವಮೊಗ್ಗ ನಗರದಲ್ಲಿ ಅಪಘಾತಗಳು ಹೆಚ್ಚುವುದು ಅಷ್ಟೇ ಅಲ್ಲದೇ ಶಿವಮೊಗ್ಗ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದೇ ದುಸ್ಥರವಾಗಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಲಕ್ಷ್ಮಿ ಪ್ರಸಾದ್ ರವರು ಶಿವಮೊಗ್ಗ ನಗರದಲ್ಲಿ ಸಿಟಿ ಬಸ್ ರವರಿಂದ ನಗರದ ಟ್ರಾಫಿಕ್ ಸಮಸ್ಯೆಗೆ ಸ್ಪಂದನೆ ನೀಡಿ, ಟ್ರಾಫಿಕ್ ಕಿರಿಕಿರಿ ಉಂಟು ಮಾಡುವ ಸಿಟಿ ಬಸ್ ಮಾಲೀಕರು, ಚಾಲಕರು, ನಿರ್ವಾಹಕರುಗಳ ಮೇಲೆ ನಿರ್ಧಾಕ್ಷಣ್ಯವಾಗಿ ಸೂಕ್ತ ಕಾನೂನು ಕ್ರಮ ಕೈಗೊಂಡು, ಶಿವಮೊಗ್ಗ ನಗರದಲ್ಲಿ ದಿನನಿತ್ಯ ಖಾಸಗಿ ಬಸ್ ಸಂಚಾರದಿಂದ ಕಿರಿಕಿರಿಗೆ ಮುಕ್ತಿಯನ್ನಾಗಿ ಕ್ರಮ ಕೈಗೊಂಡು ಸುಲಲಿತವಾಗಿ, ಸುಗಮವಾಗಿ, ಸುರಕ್ಷಿತವಾಗಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ರಘುರಾಜ್ ಹೆಚ್.ಕೆ…9449553305….