
ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ಖಂಡಿಕಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಹದ ಗ್ರಾಮದ ಹೊಸಳ್ಳಿ ಬಳಿಯಲ್ಲಿ ಇತ್ತೀಚಿಗಷ್ಟೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ರಸ್ತೆ ಕಾಮಗಾರಿಯನ್ನೂ ಅನುಷ್ಠಾನ ಮಾಡಿದ ಬೆನ್ನಲ್ಲೇ ಗುತ್ತಿಗೆದಾರ ಸಮರ್ಪಕವಾಗಿ ರಸ್ತೆ ಅಂಚಿನಲ್ಲಿ ಚರಂಡಿ ಸ್ವಚ್ಛತೆ ಮಾಡಲು ಒಪ್ಪಂದದಲ್ಲಿ ಇದ್ದರೂ ನಿರ್ವಹಣಾ ವೈಫಲ್ಯದಿಂದ ರಸ್ತೆಯ ಬದಿ ಕುಸಿದು ಬಿದ್ದಿದ್ದೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ದುರಸ್ಥಿ ಕಾಮಗಾರಿ ಮಾಡದೇ ಹೋದರೇ ರಸ್ತೆಯೇ ಕುಸಿದು ಬೀಳುವ ಹಂತಕ್ಕೆ ತಲುಪುತ್ತದೆ ಎನ್ನುವ ಸ್ಥಳೀಯರ ವಾದವಾಗಿದೆ.
ಕೂಡಲೇ ಈ ರಸ್ತೆ ಅವ್ಯವಸ್ಥೆ ಬಗ್ಗೆ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರ್ ಬಂಗಾರಪ್ಪ ರವರ ಸರ್ಕಾರಿ ಆಪ್ತ ಸಹಾಯಕರಾದ ಉಮೇಶ್ ಗೌಡರ್ ರವರ ಅವಗಾಹನೆಗೆ ತಂದಾಗ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸುವ ಭರವಸೆ ನೀಡಿರುತ್ತಾರೆ . ನೀಡಿದ ಭರವಸೆ ಈಡೇರಿಸ್ತಾರ ಕಾದು ನೋಡೋಣ…
ಓಂಕಾರ ಎಸ್. ವಿ. ತಾಳಗುಪ್ಪ….
#####################################
ರಘುರಾಜ್ ಹೆಚ್.ಕೆ…9449553305….