
ತೀರ್ಥಹಳ್ಳಿ : ತಾಲೂಕಿನ ಜೆ ಸಿ ಆಸ್ಪತ್ರೆಯ ಉತ್ಸಾಹಿ ಶುಶ್ರೂಷಣಾಧಿಕಾರಿ ತನುಜ ಜಿ ನಾಯ್ಕ್ ಮತ್ತು ಮೂಲತಃ ತೀರ್ಥಹಳ್ಳಿಯವರಾದ ಪ್ರಸ್ತುತ ಸಾರ್ವಜನಿಕ ಆಸ್ಪತ್ರೆ ನವಲಗುಂದದಲ್ಲಿ ಶುಶ್ರೂಷಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಂದಿರಾರವರ ಸೇವೆಯನ್ನು ಗುರುತಿಸಿ ದಿ ನ್ಯಾಷನಲ್ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಸಂಸ್ಥೆಯಿಂದ ನೀಡಲಾಗುವ ಪ್ರತಿಷ್ಟಿತ ರಾಷ್ಟ್ರೀಯ ಫ್ಲಾರೆನ್ಸ್ ನೈಂಟಿಂಗೇಲ್ -2022 ರ ಪ್ರಶಸ್ತಿ ನೀಡಲಾಗಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ, ಇದು ಅವರ ಪ್ರಾಮಾಣಿಕ ಸೇವೆಗೆ ಸಂದ ಗೌರವ ಎಂದು ಶ್ಲಾಘಿಸಿದ್ದಾರೆ.
ಇಂತಹ ಪ್ರಶಸ್ತಿಗಳು ನೌಕರರನ್ನು ಇನ್ನಷ್ಟು ಉತ್ತಮ ಸೇವೆ ನೀಡುವತ್ತ ಪ್ರೇರೇಪಿಸುತ್ತವೆ. ಕಳೆದ ವರ್ಷಗಳಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಪ್ರಾ.ಆ.ಕೇಂದ್ರ ಕನ್ನಂಗಿಯ ಶುಶ್ರೂಷಣಾಧಿಕಾರಿ ಜಯಲಕ್ಷಿ, ಶ್ರೀ ಜೆ ಸಿ ಆಸ್ಪತ್ರೆಯ ಶುಶ್ರೂಷಣಾಧಿಕಾರಿ ಪ್ರಮೀಳ ಈ ಪ್ರಶಸ್ತಿ ಪಡೆದಿದ್ದು ಸತತ ಮೂರನೇ ವರ್ಷ ಈ ಪ್ರಶಸ್ತಿಯನ್ನು ನಮ್ಮ ತಾಲ್ಲೂಕಿನ ಶುಶ್ರುಷಣಾಧಿಕಾರಿಗಳು ಪಡೆಯುತ್ತಿರುವುದು ನಿಜಕ್ಕೂ ಖುಷಿ ತಂದಿದೆ. ಮುಂದೆ ಇಂತಹ ಇನ್ನಷ್ಟು ಪ್ರಶಸ್ತಿಗಳು ನಮ್ಮ ತಾಲ್ಲೂಕಿನ ದಕ್ಕುವಂತಾಗಲಿ ಎಂದು ಶುಭಹಾರೈಸಿ ಸ್ವಯಂ ಪ್ರೇರಿತವಾಗಿ ಇಲಾಖೆಯ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಗೌರವಿಸುತ್ತಿರುವ ದಿ ನ್ಯಾಷನಲ್ ಪ್ರೆಸ್ ಕ್ಲಬ್ ಆಫ್ ಇಂಡಿಯ ಸಂಸ್ಥೆಗೆ ತಾಲ್ಲೂಕು ಸರ್ಕಾರಿ ನೌಕರರ ಸಂಘ ಮತ್ತು ಆರೋಗ್ಯ ಇಲಾಖಾ ನೌಕರರ ಸಂಘದ ವತಿಯಿಂದ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
ರಘುರಾಜ್ ಹೆಚ್.ಕೆ…9449553305….