
ಶಿವಮೊಗ್ಗ: ನಗರದಲ್ಲಿ ಇತ್ತೀಚೆಗೆ ಬಾರಿ ಸಂಚಲನ ಉಂಟುಮಾಡಿದ್ದ ಹಿಂದೂ ಯುವಕ ಹರ್ಷನ ಹತ್ಯೆ ದೇಶಾದ್ಯಂತ ಸುದ್ದಿ ಮಾಡಿತ್ತು. ಇಡೀ ಸರ್ಕಾರ ಹರ್ಷನ ಕುಟುಂಬದ ಬೆಂಬಲಕ್ಕೆ ನಿಂತಿತ್ತು.
ಸರ್ಕಾರದ ವತಿಯಿಂದ 25 ಲಕ್ಷ ರೂಗಳನ್ನು ನೇರವಾಗಿ ಹರ್ಷನ ಕುಟುಂಬಕ್ಕೆ ನೀಡಲಾಗಿತ್ತು.
ಇದಕ್ಕೆ ಎಡಪಂಥೀಯರಿಂದ ಹಾಗೂ ವಿವಿಧ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.
ಬಿಜೆಪಿ ,ಬಜರಂಗದಳ, ಸ್ವಾಮೀಜಿಗಳು, ಆರ್ ಎಸ್ ಎಸ್ ನವರು, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಸಹ ಹರ್ಷನ ಕುಟುಂಬಕ್ಕೆ ಸಮಾಧಾನ ಪಡಿಸುವುದರ ಜೊತೆಗೆ ಆರ್ಥಿಕ ಸಹಾಯವನ್ನು ಮಾಡಿದ್ದರು:
ಬಾರಿ ಸಂಚನವನ್ನುಂಟು ಮಾಡಿದ್ದ ಈ ಪ್ರಕರಣದಲ್ಲಿ ಹರ್ಷನ ಹತ್ಯೆಯಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿ ಜೈಲಿಗೆ ಕಳುಹಿಸಿದರು.
ಜೈಲಿನಲ್ಲಿ ಮುದ್ದೆ ಮುರಿಯುವ ಬದಲು ಮೊಬೈಲ್ ನಲ್ಲಿ ವಿಡಿಯೋ ಚಾಟ್ ಮಾಡುತ್ತಿದ್ದ ಹಂತಕರು :
ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಹರ್ಷನ ಹತ್ಯೆ ಆರೋಪಿಗಳು ಜೈಲಿನಲ್ಲಿ ಬಿಂದಾಸಾಗಿ ಓಡಾಡಿಕೊಂಡು ಮನೆಯವರ ಜೊತೆಯಲಿ ವಿಡಿಯೋ ಚಾಟ್ ಮಾಡಿಕೊಂಡು ಕಾಲ ಕಳೆಯುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಕೈದಿಗಳು ಆರಾಮಾಗಿ ಇರುವ ಬಗ್ಗೆ ವಿಡಿಯೋ ನೋಡಿದ ಹರ್ಷ ಕುಟುಂಬದಲ್ಲಿ ಆಕ್ರೋಶ :
ಜೈಲ್ ನಲ್ಲಿ ಶಿಕ್ಷೆ ಅನುಭವಿಸಬೇಕಾದ ಹಂತಕರು ಆರಾಮಾಗಿ ವಿಡಿಯೋ ಚಾಟ್ ಮಾಡಿಕೊಂಡಿರುವುದನ್ನು ನೋಡಿದ ಪ್ರತಿಯೊಬ್ಬರಲ್ಲೂ ಸರ್ಕಾರದ ಬಗ್ಗೆ ಆಡಳಿತದ ವೈಖರಿ ಬಗ್ಗೆ ಬೇಸರ ಮೂಡಿಸಿತ್ತು. ಹರ್ಷ ಕುಟುಂಬದಲ್ಲೂ ಕೂಡ ಆಕ್ರೋಶ ವ್ಯಕ್ತವಾಗಿತ್ತು.
ಗೃಹ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ ಹರ್ಷನ ಅಕ್ಕ ಅಶ್ವಿನಿ:
ತಮ್ಮನ ಹತ್ಯೆ ಮಾಡಿದ ಹಂತಕರು ಆರಾಮಾಗಿ ಜೈಲಿನಲ್ಲಿ ಇದ್ದುಕೊಂಡು ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಾ ಇರುವುದನ್ನು ನೋಡಿ ಕೆರಳಿದ ಹರ್ಷನ ಅಕ್ಕ ಅಶ್ವಿನಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರ ಬಳಿ ತಮ್ಮನ ಕೊಲೆಗೆ ನ್ಯಾಯ ಬೇಕು ಎಂದು ಕೇಳಲು ಹೋಗಿದ್ದಾರೆ.
ಗೃಹ ಸಚಿವರ ಮಾತನ್ನು ಸಮಾಧಾನದಿಂದ ಕೇಳದೆ ಆಕ್ರೋಶ ಹೊರಹಾಕುತ್ತಾ ಹೊರ ನಡೆದ ಹರ್ಷನ ಅಕ್ಕ ಅಶ್ವಿನಿ :

ಗೃಹ ಸಚಿವ ಆರಗ ಜ್ಞಾನೇಂದ್ರ : ಹರ್ಷನ ಕೊಲೆಯಾಗಿರುವುದು ನಿಮಗಷ್ಟೇ ನೋವು ತಂದಿಲ್ಲ ನಮಗೂ ಕೂಡ ನೋವು ತಂದಿದೆ. ಆದರೆ ಈ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಸರಿ ಮಾಡುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಸ್ವಲ್ಪ ತಾಳ್ಮೆಯಿಂದ ಇರಿ ಜೈಲಿನಲ್ಲಿ ಅವರಿಗೆ ಸಹಕರಿಸಿದ ಎಲ್ಲರಿಗೂ ಶಿಕ್ಷೆ ಕಾದಿದೆ. ಹಾಗೆ ಕೊಲೆ ಮಾಡಿದ ಆರೋಪಿಗಳಿಗೂ ಕೂಡ ಯಾವುದೇ ಕಾರಣಕ್ಕೂ ರಕ್ಷಣೆ ನೀಡುವುದಿಲ್ಲ. ನಮ್ಮ ಇಡೀ ಸರ್ಕಾರ ನಿಮ್ಮ ಜೊತೆ ಇದೆ ಮುಂದೆ ಕೂಡ ಇರುತ್ತದೆ ಯಾವುದೇ ಕಾರಣಕ್ಕೂ ಭಯ ಬೇಡ ಇದನ್ನು ನೀವು ಫೋನಿನಲ್ಲೇ ಮಾತನಾಡಬಹುದಿತ್ತು. ಎಂದು ಸಮಾಧಾನದಿಂದ ಉತ್ತರಿಸುತ್ತಿದ್ದ ಗೃಹ ಸಚಿವರು ಪದೇ ಪದೇ ಕೇಳಿದ್ದೆ ಕೇಳುತ್ತಿದ್ದ ಹರ್ಷನ ಅಕ್ಕ ಅಶ್ವಿನಿ ಇದ್ದಕ್ಕಿದ್ದ ಹಾಗೆ ಆಕ್ರೋಶಗೊಂಡು ಅಲ್ಲಿಂದ ಆಚೆಗೆ ಬಂದು ಆಕ್ರೋಶ ಬರಿತರಾಗಿ,
ಥ್ಯಾಂಕ್ಯು ಸೋ ಮಚ್ ಸರ್, ಎಲ್ಲೂ ನ್ಯಾಯ ಸಿಗೋದಿಲ್ಲ ಎಂಬುದು ಇವತ್ತು ಗೊತ್ತಾಯ್ತು. ನ್ಯಾಯ ಕೇಳಿದ್ದೆ ತಪ್ಪಾ, ನ್ಯಾಯ ಕೇಳಿದ್ರೆ ಜೋರು ಮಾಡಿ ಕಳಿಸಿದ್ದಾರೆ ಎಂದು ವಿಡಿಯೋವೊಂದರ ಮುಂದೆ ಹೇಳಿಕೊಂಡು ಬಂದಿದ್ದಾರೆ.
ಹರ್ಷನ ಅಕ್ಕ ಅಶ್ವಿನಿ ಆಕ್ರೋಶವೇನು ಸರಿಯಾಗಿದೆ ಆದರೆ ಗೃಹ ಸಚಿವರು ಹೇಳುತ್ತಿದ್ದ ಸಮಾಧಾನದ ಮಾತುಗಳನ್ನು ಕೇಳುವ ತಾಳ್ಮೆ ಇರಬೇಕಿತ್ತು ಅಷ್ಟೇ. ಏಕೆಂದರೆ ಇಡೀ ಸರ್ಕಾರ ಹರ್ಷನ ಕುಟುಂಬದ ಜೊತೆ ಇದ್ದಾಗ ಈ ತರಹ ಇದ್ದಕ್ಕಿದ್ದ ಹಾಗೆ ಆಕ್ರೋಶಗೊಳ್ಳಲು ಕಾರಣವೇನು? ಪರಪ್ಪನ ಅಗ್ರಹಾರದ ಕರ್ಮಕಾಂಡ ಇವತ್ತು ನಿನ್ನೆಯದಲ್ಲ ಮುಂಚಿನಿಂದಲೂ ಅಲ್ಲಿ ವ್ಯವಸ್ಥಿತ ಜಾಲವೊಂದು ಈ ತರದ ಕೆಲಸವನ್ನು ಮಾಡುತ್ತಿದೆ. ಇದು ಸೂಕ್ತ ತನಿಖೆ ಆಗಬೇಕು ಸಂಬಂಧಪಟ್ಟ ಅಧಿಕಾರಿಗಳು ವಜಗೊಳ್ಳಬೇಕು. ಇಡಿ ಜೈಲಿಗೆ ಜಾಮರ್ ಅಳವಡಿಸಬೇಕು. ಈ ತರಹ ಮರುಕಳಿಸದಂತೆ ಎಚ್ಚರ ವಹಿಸಬೇಕು. ಆರೋಪಿಗಳನ್ನು ಬೇರೆ ಸೆಲ್ ನಲ್ಲಿ ಇಡಬೇಕು ಸಾಧ್ಯವಾದರೆ ಇತರ ಜಿಲ್ಲೆಗಳಿಗೆ ಅವರನ್ನು ವರ್ಗಾವಣೆ ಮಾಡಬೇಕು. ಈ ಪ್ರಕರಣದಲ್ಲಿ ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು.
ತಮ್ಮ ವಿರುದ್ಧವೇ ಮಾತನಾಡಿದ್ದರು ಕೂಡ ಹರ್ಷನ ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ :
ಹರ್ಷನ ಕುಟುಂಬ ಒಂದಷ್ಟು ಸಮಾಧಾನದಿಂದ ಇರಬೇಕು ನ್ಯಾಯ ಖಂಡಿತ ಸಿಗುತ್ತದೆ ಎನ್ನುವುದು ಆಡಳಿತ ಪಕ್ಷ ಬಿಜೆಪಿಯ ಮುಖಂಡರುಗಳು ಹಾಗೂ ಗೃಹ ಸಚಿವರ ಭರವಸೆಯ ಮಾತುಗಳು. ತಮ್ಮ ವಿರುದ್ಧವೇ ಆಕ್ರೋಶವನ್ನು ಹೊರಹಾಕಿದ್ದರು ಕೂಡ ಇಡೀ ಕುಟುಂಬಕ್ಕೆ ಸಮಾಧಾನ ಇರಿ ಖಂಡಿತ ನಿಮಗೆ ಅನ್ಯಾಯವಾಗಲೂ ಬಿಡುವುದಿಲ್ಲ ಇಡಿ ಸರ್ಕಾರ ನಿಮ್ಮ ಜೊತೆಗೆ ಇರುತ್ತದೆ. ಈ ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಖಂಡಿತ ಶಿಕ್ಷೆ ಆಗುತ್ತದೆ. ಇದರಲ್ಲಿ ಅನುಮಾನ ಬೇಡ ಎನ್ನುವ ಸಮಾಧಾನದ ಮಾತುಗಳನ್ನು ಪತ್ರಿಕೆಯ ಮೂಲಕ ದಿವಂಗತ ಹರ್ಷನ ಕುಟುಂಬಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ…
ರಘುರಾಜ್ ಹೆಚ್.ಕೆ…9449553305….