
ತೀರ್ಥಹಳ್ಳಿ : ತಾಲೂಕಿನ ನೇರಲಮನೆ ಗ್ರಾಮ ಸಾಲೂರು ಕಟ್ಟೆ ಗದ್ದೆ ನಿವಾಸಿಯಾದ ಕಟ್ಟೆಗದ್ದೆ ಹಾಲಪ್ಪನವರ ದ್ವಿತೀಯ ಪುತ್ರ ಆಕರ್ಷರಾಜ್ ಕೆ, ಹೆಚ್ (24ವರ್ಷ ) ಆತ್ಮಹತ್ಯೆ ಮಾಡಿಕೊಂಡಿದ್ದು.
ಕಾಂಗ್ರೆಸ್ ಪಕ್ಷದ ಧುರೀಣರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಭೂಮಿ ಬ್ಯಾಂಕ್ (ಪಿಎಲ್ ಡಿ ಬ್ಯಾಂಕ್ )ಅಧ್ಯಕ್ಷರಾಗಿದ್ದ ಕಟ್ಟೆಗದ್ದೆ ಹಾಲಪ್ಪನವರ ಮಗ ಆಕರ್ಷ ರಾಜ್ ಮೊನ್ನೆ ದಿನ ರಾತ್ರಿ ತೀರ್ಥಹಳ್ಳಿಗೆ ಬರುವಾಗ ಸಾಲೂರು– ಕೊಂಡ್ಲೂರು ಸಮೀಪದ ಕವಲೇದುರ್ಗ ರಸ್ತೆಯಲ್ಲಿ (ದುರ್ಗಾ ಕ್ರಾಸ್ ) ನ ಹತ್ತಿರ ಶಿಫ್ಟ್ ಕಾರು ವಿದ್ಯುತ್ ಕಂಬಕ್ಕೆ ಅಪಘಾತ ಮಾಡಿ, ಕಾರು ಚಲಿಸುವ ಸ್ಥಿತಿಯಲ್ಲಿ ಇಲ್ಲದೆ ಅಲ್ಲೇ ಬಿಟ್ಟು ಹೋಗಿದ್ದು, ಅಂದು ರಾತ್ರಿಯಿಂದ ನಾಪತ್ತೆಯಾಗಿದ್ದಾರೆ ತಿಳಿದು ಬಂದಿತ್ತು .

ನಿನ್ನೆ ದಿನ ಎಲ್ಲ ಕಡೆ ಕುಟುಂಬದವರು ಅವರನ್ನು ಹುಡುಕಿದ್ದು ಪತ್ತೆಯಾಗದೆ ಇಂದು ಬೆಳಿಗ್ಗೆ ಕವಲೇದುರ್ಗ ಕೆರೆಯಲ್ಲಿ ಶವ ಪತ್ತೆಯಾಗಿದೆ .
ಮೃತ ಯವಕ ಬಿಇ ಸಿವಿಲ್, ಎಂ ಟೆಕ್ ಪದವೀಧರರಾಗಿದ್ದು ಅವಿವಾಹಿತರಾಗಿದ್ದರು . ಕವಲೆ ದುರ್ಗದ ಕೋಟೆಯಲ್ಲಿ ಕಟ್ಟಡದ ಕೆಲಸ ಮಾಡಿಸುತ್ತಿದ್ದರು…
ಕಟ್ಟೆ ಗದ್ದೆ ಹಾಲಪ್ಪನವರ ಪ್ರಥಮ ಪುತ್ರ ಆಶಿಕ್ ರಾಜ್ ಕೆ.ಹೆಚ್ ವಿವಾಹ ಇತ್ತೀಚಿಗಷ್ಟೇ ನಡೆದಿತ್ತು. ಈಗ ದ್ವಿತೀಯ ಪುತ್ರನ ಮರಣದ ಸುದ್ದಿ ತೀವ್ರ ಆಘಾತ ತಂದೊಡ್ಡಿದೆ.
ಮೃದು ಸ್ವಭಾವದ, ಸರಳತೆಯ, ಎಲ್ಲರಲ್ಲೂ ಬೆರೆಯುತ್ತಿದ್ದ ಯುವಕ ಆಕರ್ಷ ರಾಜ್ ಆಕಾಲಿಕ ದುರ್ಮರಣ ಸ್ನೇಹಿತರಿಗೆ ಕುಟುಂಬದವರಿಗೆ ತೀವ್ರ ಆಘಾತ ಉಂಟು ಮಾಡಿದೆ.
ಇವರ ಸಾವಿನ ನೋವನ್ನು ಬರಿಸುವ ಶಕ್ತಿಯನ್ನು ಭಗವಂತ ಆ ಕುಟುಂಬಕ್ಕೆ ನೀಡಲಿ …
ರಘುರಾಜ್ ಹೆಚ್.ಕೆ…9449553305….