
ಸೊರಬ :- ಸೊರಬ ರಂಗನಾಥ ಸ್ವಾಮಿ ದೇವಸ್ಥಾನದ ಹತ್ತಿರದ ಅಂಬಿಕಾ ಹೆಂಡದ ಅಂಗಡಿಯನ್ನು ಸಾರ್ವಜನಿಕರ ಆಕ್ಷೇಪಣೆಯ ಮೇರೆಗೆ ಮುಚ್ಚಲಾಗಿದೆ.
ಈ ಹಿಂದೇ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರ್ ಬಂಗಾರಪ್ಪ ರವರು ವಿಧಾನಸಭೆ ಅಧಿವೇಶನದಲ್ಲಿ ಕಾನೂನು ಬಾಹಿರವಾಗಿ ದೇವಸ್ಥಾನಕ್ಕೆ ಆಂಟಿಕೊಂಡಂತೆ ಮಧ್ಯ ಅಂಗಡಿ ತೆರೆಯಲು ಅನುಮತಿ ನೀಡಿದ್ದೂ, ಕೂಡಲೇ ಅಂಬಿಕಾ ಮಧ್ಯ ಅಂಗಡಿ ಮುಚ್ಚುವಂತೆ ಹಾಗೂ ಅಕ್ರಮವಾಗಿ ಅಂಬಿಕಾ ಮಧ್ಯ ಅಂಗಡಿ ಕಾನೂನು ಬಾಹಿರವಾಗಿ ಅನುಮತಿ ನೀಡಿದ ಸಂಬಂಧ ಪಟ್ಟ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ತನಿಖೆ ನೆಡೆಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದು ನಿಜವಾದ ಮಾದರಿ ಜನಪ್ರತಿನಿಧಿಯ ನಿಲುವನ್ನು ಇತರ ಚುನಾಯಿತ ಜನಪ್ರತಿನಿಧಿಗಳು ಕಲಿಯಬೇಕು.
ಅಕ್ರಮ ಮಧ್ಯಕ್ಕೆ ಸಾತ್ ನೀಡಿ ಬೆಂಬಲಿಸುವವರ ಮಧ್ಯೆ ಸಾರ್ವಜನಿಕರ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಮಧ್ಯದ ಅಂಗಡಿಯನ್ನು ಬಂದ್ ಮಾಡುವಂತೆ ಆಗ್ರಹಿಸಿ ಬಂದ್ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಾಸಕರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು. ಇತರ ಜನಪ್ರತಿನಿಧಿಗಳಿಗೆ ಇದು ಮಾದರಿ ಆಗಲಿ…
ಓಂಕಾರ ಎಸ್. ವಿ. ತಾಳಗುಪ್ಪ…
#####################################
ರಘುರಾಜ್ ಹೆಚ್.ಕೆ…9449553305….