
ಬೆಂಗಳೂರಿನ ಜಯನಗರದ ‘ಸಂಗಾತಿ ಸಂಘ’ ಮಹಿಳಾ ಸ್ವ-ಸಹಾಯ ಸಂಘದ 25 ನೇ ವಾರ್ಷಿಕೋತ್ಸವದ ನಿಮಿತ್ತ ಸನಾತನ ಸಂಸ್ಥೆಯ ವತಿಯಿಂದ ಗುರುಪೂರ್ಣಿಮೆ ಮಹತ್ವದ ಪ್ರವಚನವನ್ನು ನೀಡಲಾಯಿತು, 250 ಕ್ಕೂ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದು ಈ ಪ್ರವಚನದ ಲಾಭ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಶ್ರೀಮತಿ ಧನಲಕ್ಷ್ಮೀ ವಿ.ಕೆ ಇವರು ಮಾತನಾಡಿ, ಆಷಾಢ ಹುಣ್ಣಿಮೆಯಂದು ಗುರುಪೂರ್ಣಿಮೆ ಮಹೋತ್ಸವವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ವರ್ಷಾದ್ಯಂತ ಪ್ರತಿಯೊಬ್ಬ ಗುರುಗಳು ತಮ್ಮ ಭಕ್ತರಿಗೆ ಅಧ್ಯಾತ್ಮದ ಬೋಧಾಮೃತವನ್ನು ನೀಡುತ್ತಿರುತ್ತಾರೆ. ಆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಉದ್ದೇಶವಾಗಿದೆ. ಇಂದು ಸಮಾಜದಲ್ಲಿ ಅನ್ಯಾಯ, ಅತ್ಯಾಚಾರ, ಕೊಲೆ, ದರೋಡೆ, ಭ್ರಷ್ಠಾಚಾರ, ಸುಲಿಗೆ, ಧಂಗೆ ಮುಂತಾದ ಘಟನೆಗಳು ಮೀತಿ ಮೀರಿದೆ. ಇದನ್ನು ತಡೆಯುವುದು ಇದರ ವಿರುದ್ಧ ಹೋರಾಟ ಮಾಡುವುದು ನಮ್ಮ ಧರ್ಮಕರ್ತವ್ಯವೇ ಅಗಿದೆ. ಹಾಗಾಗಿ ಹಿಂದೂ ಧರ್ಮದ ಆಚರಣೆಯನ್ನು ಅರ್ಥ ಮಾಡಿಕೊಳ್ಳೋಣ, ನಮ್ಮ ಮಕ್ಕಳಿಗೆ ಧರ್ಮಶಿಕ್ಷಣವನ್ನು ನೀಡೋಣ ಮತ್ತು ಅನ್ಯಾಯದ ವಿರುದ್ಧ ಹೋರಾಡೋಣ ಎಂದು ಕರೆ ನೀಡಿದರು. ಪ್ರತಿಯೊಬ್ಬರು ಸಹ ಜುಲೈ 13 ರಂದು ಭವಾನಿ ಕಲ್ಯಾಣ ಮಂಟಪದಲ್ಲಿ ನಡೆಯುವ ಗುರುಪೂರ್ಣಿಮಾ ಮಹೋತ್ಸವದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿ ಮಾಡೋಣ ಎಂದು ಸಂಕಲ್ಪ ಮಾಡಿದರು.
ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸೌ. ಮಾಧುರಿ, ಶ್ರೀಮತಿ ಧನಲಕ್ಷ್ಮೀ ವಿ.ಕೆ, ‘ಸಂಗಾತಿ ಸಂಘ’ ದ ಕಾರ್ಯದರ್ಶಿಗಳಾದ ಸೌ. ರೇವತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ವಿನೋದ ಕಾಮತ,
ವಕ್ತಾರರು, ಸನಾತನ ಸಂಸ್ಥೆ,
ಸಂಪರ್ಕ : ೯೩೪೨೫ ೯೯೨೯೯….
ರಘುರಾಜ್ ಹೆಚ್.ಕೆ…9449553305….