ತೀರ್ಥಹಳ್ಳಿ: ದಿನಾಂಕ:17-07-2022 ರಂದು ರಾತ್ರಿ ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿರುವ ಖಾಸಗಿ ಬಸ್ಸಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಸಾಗಿಸುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ಡಿ ವೈಎಸ್ ಪಿ ತೀರ್ಥಹಳ್ಳಿ ಮತ್ತು ಸಿಬ್ಬಂದಿಗಳ ತಂಡವು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೈ ಮರ ಬಸ್ ಸ್ಯಾಂಡ್ ಗೆ ತಲುಪಿ ಅಲ್ಲಿಗೆ ಬಂದ ಬಸ್ ಅನ್ನು ತಪಾಸಣೆಗೊಳಪಡಿಸಿ ಬಸ್ ನಲ್ಲಿದ್ದ ಅಂದಾಜು ಮೌಲ್ಯ 70,000/- ರೂ ಗಳ ಒಟ್ಟು 2 ಕೆ.ಜಿ 300 ಗ್ರಾಂ ತೂಕದ ಒಣ ಗಾಂಜಾವನ್ನು ವಶಪಡಿಸಿಕೊಂಡಿಸಿಕೊಂಡು ಗುನ್ನೆ ಸಂಖ್ಯೆ:- 0141/2022 ಕಲಂ 20 (b) (ii) (B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಪಿ.ಐ. ತೀರ್ಥಹಳ್ಳಿ ಪೊಲೀಸ್ ಠಾಣೆರವರು ಸದರಿ ಪ್ರಕರಣದ ತನಿಖೆ ಕೈಗೊಂಡು ದಿನಾಂಕ:- 22-07-2022 ರಂದು ಮೇಲ್ಕಂಡ ಪ್ರಕರಣದ *ಆರೋಪಿತರಾದ 1) ನಿಸಾರ್ @ ವಿಲ್ಸನ್ ಜೇಮ್ಸ್, 55 ವರ್ಷ, ಶಿವಮೊಗ್ಗ ಮತ್ತು 2) ಅಲೆಕ್ಸ್ @ ಅಲೆಕ್ಸಾಂಡರ್ , 42 ವರ್ಷ, ಬೆಂಗಳೂರು ರವರನ್ನು* ದಸ್ತಗಿರಿ ಮಾಡಲಾಗಿರುತ್ತದೆ.
ನಂತರ ಸದರಿ ಆರೋಪಿತರನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಈ ಹಿಂದಿನಿಂದಲೂ ಕೇರಳದ ಎಂಪರರ್ ಇಮ್ಯಾನುಯಲ್ ಚರ್ಚ್ ಗೆ ಪ್ರಾರ್ಥನೆಗೆ ಹೋಗುತ್ತಿದ್ದು, 06 ತಿಂಗಳ ಹಿಂದೆ ಕೇರಳ ರಾಜ್ಯದ ಅಜೀಲ್ 37 ವರ್ಷ ಮತ್ತು ಸಜ್ಜು ಫ್ರಾನ್ಸಿಸ್ 40 ವರ್ಷ ರವರು ಸದರಿ ಚರ್ಚ್ ನ ವಿರುದ್ಧವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆಂದು ಅಜೀಲ್ ನ ಮೇಲೆ ಸುಳ್ಳು ಪ್ರಕರಣವನ್ನು ದಾಖಲಿಸಲು ಸಂಚು ರೂಪಿಸಿ ಅಜೀಲ್ ನನ್ನು ಶಿವಮೊಗ್ಗಕ್ಕೆ ಬರುವಂತೆ ಮಾಡಿ, ಅಜೀಲ್ ನ ಮೇಲೆ ಗಾಂಜಾ ಸಾಗಾಟ ಪ್ರಕರಣ ದಾಖಲಾಗುವ ರೀತಿಯಲ್ಲಿ, ಆತನು ಪ್ರಯಾಣಿಸುತ್ತಿದ್ದ ಬಸ್ ನಲ್ಲಿ ಮಾದಕ ವಸ್ತು ಗಾಂಜಾವನ್ನು ಇರಿಸಿರುತ್ತೇವೆ ಮತ್ತು ಸಜ್ಜು ಫ್ರಾನ್ಸಿಸ್ ನನ್ನು ಕೊಲೆ ಮಾಡಿಸಲು ಸ್ನೇಹಿತನಾದ ಅಫ್ರೋಜ್ ಅಹಮ್ಮದ್ ನಿಗೆ 80,000/- ರೂ ಗಳನ್ನು ಮತ್ತು ಸಜ್ಜು ಫ್ರಾನ್ಸಿಸ್ ನ ಫೋಟೋ ವಿಳಾಸವನ್ನು ಕೊಟ್ಟು ಗಾಡಿಯಲ್ಲಿ ಗುದ್ದಿ ಕೊಲೆ ಮಾಡಲು ಹೇಳಿರುತ್ತೇವೆ. ಆದರೆ ಕೊಲೆಯ ಸಂಚನ್ನು ಕಾರ್ಯಗತಗೊಳಿಸಲು ಸಾದ್ಯ ವಾಗಿರುವುದಿಲ್ಲವೆಂದು ನೀಡಿದ ಹೇಳಿಕೆಯ ಮೇರೆಗೆ ಠಾಣಾ ಗುನ್ನೆ ಸಂಖ್ಯೆ 0146/2022 , ಕಲಂ 120 (ಬಿ), 307, 115 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಆರೋಪಿ ಅಫ್ರೋಜ್ ಅಹಮ್ಮದ್, 37 ವರ್ಷ, ಬೆಂಗಳೂರು ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ 80,000/- ರೂ ನಗದು ಹಣ ಮತ್ತು ಮೊಬೈಲ್ ಫೊನ್ ಅನ್ನು ವಶಕ್ಕೆ ಪಡೆದು ಸದರಿ ಮೂರು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ.
ರಘುರಾಜ್ ಹೆಚ್. ಕೆ... 9449553305.....