
ಶಿವಮೊಗ್ಗ : ನಗರದ ತಿಲಕ್ ನಗರ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುರಾಯರ 351ನೇ ಆರಾಧನೆಯ ಪ್ರಯುಕ್ತ ಆಗಸ್ಟ್ 12ರ ಶುಕ್ರವಾರದಿಂದ ಆಗಸ್ಟ್ 14ರ ಭಾನುವಾರದವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು .
ಶ್ರೀಮಠದಲ್ಲಿ ವಿಶೇಷ ಪೂಜೆ ಅಭಿಷೇಕ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ .ಬೆಳಿಗ್ಗೆ ಹಾಗೂ ಸಂಜೆ ವಿಶೇಷ ಉತ್ಸವಗಳ ಜೊತೆಗೆ ಈ ಬಾರಿ ಮೂರು ದಿನಗಳ ಕಾಲ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2:30ರ ವರೆಗೆ ಪಕ್ಕದ ಕಲ್ಯಾಣ ಮಂಟಪದಲ್ಲಿ ಶ್ರೀ ಗುರುಗಳ ವಿಶೇಷ ಪ್ರಸಾದವನ್ನು ವಿತರಿಸಲಾಗುತ್ತದೆ.
ಆರಾಧನೆಯ ಪ್ರಯುಕ್ತ ನಾಳೆ ಅಂದರೆ ಆಗಸ್ಟ್ 9 ರವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಕೃತಿಗಳ ಸಂದೇಶ ಎಂಬ ಕುರಿತು ವಿಶೇಷ ಉಪನ್ಯಾಸ ನಡೆಯುತ್ತಿದ್ದು. ಆಗಸ್ಟ್ 10ರಂದು ಭಜನಾ ಮಂಡಳಿಗಳಿಂದ ನಾಮಕೀರ್ತನವು ಪ್ರತಿದಿನ ಸಂಜೆ ನಡೆಸಲಾಗುತ್ತದೆ.
ಭಕ್ತರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಮಠದ ಸೇವಾ ಸಮಿತಿ ಕೋರಿದೆ.
ರಘುರಾಜ್ ಹೆಚ್.ಕೆ..94495533305…