
ಶಿವಮೊಗ್ಗ ನಗರದ ಫ್ರೀಡಂ ಪಾರ್ಕಿನಲ್ಲಿ ನರೇಂದ್ರ ಮೋದಿ ಕಾರ್ಯಕ್ರಮ ನಡೆಯುತ್ತಿದ್ದು ಈ ಕಾರ್ಯಕ್ರಮದಲ್ಲಿ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಬಿಜೆಪಿಯ ಹಿರಿಯ ಮುಖಂಡ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅನುಪಸ್ಥಿತಿ ಎದ್ದು ಕಾಣುತ್ತಿದೆ.
ಈ ನಡುವೆ ಬಿಜೆಪಿಯಿಯ ಹಲವು ಕಾರ್ಯಕ್ರಮಗಳಲ್ಲಿ ದೂರ ಉಳಿದಿದ್ದ ಇನ್ನೇನು ಕಾಂಗ್ರೆಸ್ ಪಕ್ಷಕ್ಕೆ ಹೋಗೇಬಿಟ್ಟರು ಎಂದು ಹಲವು ಕಡೆ ಸುದ್ದಿಯಾಗಿದ್ದ ಮಾಜಿ ಮಂತ್ರಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಇಂದು ಮೋದಿ ಕಾರ್ಯಕ್ರಮಕ್ಕೆ ಎಂಟ್ರಿ ನೀಡಿದ್ದು ಹಲವು ಗೊಂದಲಕ್ಕೆ ತೆರೆ ಎಳೆದಂತೆ ಆಗಿದೆ.

ಕುಮಾರ್ ಬಂಗಾರಪ್ಪ ಎಂಟ್ರಿ ಆದ ತಕ್ಷಣ ಜನರಲ್ಲಿ ಹರ್ಷೋದ್ಗಾರ:

ಕಾರ್ಯಕ್ರಮಕ್ಕೆ ಕುಮಾರ್ ಬಂಗಾರಪ್ಪ ಬಂದ ತಕ್ಷಣ ಜನರಲ್ಲಿ ಹರ್ಷೋದ್ಗಾರ ಎದ್ದು ಕಾಣುತ್ತಿತ್ತು ಈ ನಡುವೆ ಆತ್ಮಿಯವಾಗಿ ಕುಮಾರ್ ಬಂಗಾರಪ್ಪನ ಬರಮಾಡಿಕೊಂಡ ಬಿಜೆಪಿಯ ರಾಜ್ಯಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಸಂಸದ ರಾಘವೇಂದ್ರ ಆತ್ಮೀಯವಾಗಿ ಅಪ್ಪಿಕೊಂಡು ಬರಮಾಡಿಕೊಂಡರು.
ಒಟ್ಟಿನಲ್ಲಿ ಕುಮಾರ್ ಬಂಗಾರಪ್ಪ ಎಂಟ್ರಿಯಿಂದ ಕುಮಾರ್ ಬಂಗಾರಪ್ಪ ಮತ್ತು ಬಿಜೆಪಿ ನಡುವೆ ಉಂಟಾಗಿದ್ದ ದೊಡ್ಡ ಗ್ಯಾಪ್ ಒಂದು ಸರಿಯಾದಂತೆ ಕಾಣುತ್ತಿದ್ದು ಕುಮಾರ್ ಬಂಗಾರಪ್ಪ ಎಂಟ್ರಿ ಬಿಜೆಪಿಯಲ್ಲಿ ಮತ್ತೆ ಹೊಸ ಉತ್ಸಹ ಮೂಡಿಸಿದೆ.

ರಘುರಾಜ್ ಹೆಚ್.ಕೆ..9449553305.