
ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್ ನಲ್ಲಿ ಅದ್ದೂರಿಯಾಗಿ ನಡೆದ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕನ್ನಡದಲ್ಲಿ ವಂದನೆಗಳು ಸಲ್ಲಿಸಿ ಸಿಗಂದೂರು ಚೌಡೇಶ್ವರಿ ದೇವಿಗೆ ನಮಸ್ಕಾರಗಳನ್ನು ತಿಳಿಸಿದರು.
28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸಿ ಎಂದು ಕರೆ ನೀಡಲು ಬಂದಿದ್ದೇನೆ ಎಂದ ಮೋದಿ :
ಭ್ರಷ್ಟಾಚಾರ ಮತ್ತು ತುಳಸಿಕರಣದ ನೀತಿಯಲ್ಲಿ ತೊಡಗಿಕೊಂಡಿರುವ ಇಂಡಿಯಾ ಒಕ್ಕೂಟಕ್ಕೆ ನಿದ್ದೆ ಹಾರಲಿದೆ.ಜನ ಸಂಘದ ಕಾಲದಲ್ಲಿ ಬಿಜೆಪಿಯ ಹೆಸರು ಇಲ್ಲದ ಸಂದರ್ಭದಲ್ಲಿ ಬಿಜೆಪಿ ಪಕ್ಷ ಕಟ್ಟಲು ಮುಡಿಪಾಗಿಟ್ಟರು ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸಿ ಎಂದು ಕರೆ ನೀಡಲು ಬಂದಿದ್ದೇನೆ ಎಂದ ಮೋದಿ ಬಿಜೆಪಿ 400 ತಲುಪಲು ರಾಜ್ಯದ ನಿಮ್ಮ ಪಾತ್ರ ಅಮೂಲ್ಯವಾಗಿದೆ ಎಂದರು .
ಕಾಂಗ್ರೆಸ್ ಹಗಲು ರಾತ್ರಿ ಸುಳ್ಳುಗಳನ್ನು ಹೇಳುವ ಅಜೆಂಡಾ ಹೊಂದಿದೆ :
ವಿಕಸಿತ ಭಾರತಕ್ಕಾಗಿ 400 ಸ್ಥಾನಗಳನ್ನು ಗೆಲ್ಲಿಸಬೇಕಿದೆ ಈ ಬಾರಿ 400 ಮೀರಿ ಎಂದೂ ಕನ್ನಡದಲ್ಲಿ ಹೇಳಿದ ಮೋದಿ ಕಾಂಗ್ರೆಸ್ ಅಭಿವೃದ್ಧಿ ರಾಜಕಾರಣ ಮಾಡುವುದಿಲ್ಲ ಕಾಂಗ್ರೆಸ್ ಸುಳ್ಳಿನ ಅಜೆಂಡ ಹೊಂದಿದೆ ಬೆಳಗ್ಗೆ ಮಧ್ಯಾಹ್ನ ರಾತ್ರಿ ಸುಳ್ಳು ಹೇಳುತ್ತಾರೆ .
ಕಾಂಗ್ರೆಸ್ ಸುಳ್ಳು ಪ್ರಚಾರ ಮುಂದುವರಿಸಿ ಅದರಲ್ಲಿ ಎಕ್ಸ್ಪರ್ಟ್ ಆಗಿದೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಮೋದಿಯ ಮೇಲೆ ಆರೋಪಗಳನ್ನು ಮಾಡುತ್ತಿದೆ ಕಾಂಗ್ರೆಸ್ ಎಂದು ಜನರಿಗೆ ಒಳ್ಳೆಯದನ್ನು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲ್ಲ ಕಾಂಗ್ರೆಸ್ ನಾಯಕರು ಕರ್ನಾಟಕವನ್ನು ತಮ್ಮ ಎಟಿಎಂ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಲೂಟಿಯಿಂದ ಸರ್ಕಾರ ನಡೆಸಲು ಹಣವಿಲ್ಲ :
ಕಾಂಗ್ರೆಸ್ನವರ ಲೂಟಿ ಎಷ್ಟು ನಡೆದಿದೆ ಎಂದರೆ ಸರ್ಕಾರ ನಡೆಸಲು ಅವರ ಬಳಿ ಹಣವಿಲ್ಲ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿಎಂ, ಭವಿಷ್ಯದ ಸಿಎಂ, ಸೂಪರ್ ಸಿಎಂ ಶ್ಯಾಡೋ ಸಿಎಂ ಇದ್ದಾರೆ . ಇವರ ಮಧ್ಯೆ ಕಲೆಕ್ಷನ್ ಏಜೆಂಟ್ ಇದ್ದಾರೆ .ಮಹಾರಾಷ್ಟ್ರದ ಮುಂಬೈನಲ್ಲಿ ಇಂಡಿಯಾ ಒಕ್ಕೂಟ ಒಂದು ಬಹಿರಂಗ ಹೇಳಿಕೆ ನೀಡಿದೆ ಹಿಂದೂ ಶಕ್ತಿಯನ್ನು ಸಮಾಪ್ತಿ ಮಾಡುವುದಾಗಿ ಹೇಳಿದ್ದಾರೆ .ದೇಹದ ಕಣ ಕಣದ ಶಕ್ತಿಯನ್ನು ಉಪಾಸನೆ ಮಾಡುವ ಮೂಲಕ ಇವರ ಹೇಳಿಕೆಯಿಂದ ಬಾಳ ಸಾಹೇಬ ಠಾಕ್ರೆಯವರ ಆತ್ಮಕ್ಕೆ ಎಷ್ಟೊಂದು ದುಃಖ ವಾಗಿರುತ್ತದೆ ಛತ್ರಪತಿ ಶಿವಾಜಿ ಮಹಾರಾಜರ ಪಾರ್ಕ್ ನಲ್ಲಿ ಹಿಂದುತ್ವದ ಶಕ್ತಿ ವಿನಾಶದ ಮಾತನಾಡಿದ್ದಾರೆ ಎಂದ ಮೋದಿ ಸ್ವಾತಂತ್ರ್ಯ ನಂತರ ನಾರಿ ಶಕ್ತಿಯ ಬಗ್ಗೆ ಇಷ್ಟೊಂದು ಬಲವನ್ನು ಯಾವ ಸರ್ಕಾರವು ನೀಡಿರಲಿಲ್ಲ ಚಂದ್ರಯಾನದಲ್ಲಿ ತಲುಪಿದ ಜಾಗವನ್ನು ಶಿವಶಕ್ತಿ ಪಾಯಿಂಟ್ ಎಂದು ಕರೆದಿದೆ ನಾರಿ ಶಕ್ತಿಯು ತಾಯಿ ಸ್ವರೂಪದ ಶಕ್ತಿಯಾಗಿದ್ದು ನನ್ನ ರಕ್ಷಾ ಕವಚವಾಗಿದೆ ಮಂತ್ರ ಕಣ, ತಾಯಿ ಕಣ, ಶಕ್ತಿ ಕಣ ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದರು ಎಂದು ರಾಷ್ಟ್ರಕವಿ ಕುವೆಂಪು ಕವನವನ್ನು ಉಚ್ಚರಿಸಿದರು.
ಹಾರ್ದಿಕ ಶಕ್ತಿ ಪರ್ವ ಶಕ್ತಿಯ ವಿರುದ್ಧ ಎಂದರೆ ನಾರಿ ಶಕ್ತಿಯ ವಿರುದ್ಧವಾಗಿದೆ ಇಂಡಿಯಾ ಒಕ್ಕೂಟದ ಕಾಂಗ್ರೆಸ್ ಇದರ ವಿರುದ್ಧವಾಗಿದೆ ಜೂನ್ ನಾಲ್ಕರಂದು ಶಕ್ತಿಯ ಮುಟ್ಟಿದ್ದಕ್ಕೆ ಅದರ ಪರಿಣಾಮ ಏನಾಗುತ್ತದೆಂದು ಕಾಂಗ್ರೆಸ್ಗೆ ತಿಳಿಯಲಿದೆ ಬ್ರಿಟಿಷರು ಭಾರತವನ್ನು ತೊರೆದಿದ್ದರೂ ಅವರ ಮಾನಸಿಕತೆ ಕಾಂಗ್ರೆಸ್ ನಲ್ಲಿ ಇದೆ ಕಾಂಗ್ರೆಸ್ ನವರು ಮೊದಲು ದೇಶವನ್ನು ಇಬ್ಭಾಗ ಮಾಡಿದರು ಜಾತಿ ಧರ್ಮ ಎಲ್ಲವನ್ನು ಇಬ್ಭಾಗ ಮಾಡಿದರು ಇಷ್ಟಾದರೂ ಕಾಂಗ್ರೆಸ್ ನವರಿಗೆ ಸಮಾಧಾನ ಇಲ್ಲ ದೇಶವನ್ನು ಇಬ್ಭಾಗ ಮಾಡಲು ಹೊರಟಿದ್ದಾರೆ ಕರ್ನಾಟಕದ ಸಂಸದ ದೇಶವನ್ನು ಮತ್ತೊಮ್ಮೆ ಇಬ್ಭಾಗ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ ಕಾಂಗ್ರೆಸ್ ಪಕ್ಷ ಇಂತಹ ಸಂಸದ ಉಚ್ಚಾಟಿಸುವ ಬದಲು ಅವರ ಸಮರ್ಥನೆಗೆ ನಿಂತಿದೆ.
ದೇಶವನ್ನು ವಿಭಜಿಸುವ ಕಾಂಗ್ರೆಸ್ ಪಕ್ಷಕ್ಕೆ ಹುಡುಕಿ ಹುಡುಕಿ ಸ್ವಚ್ಛಗೊಳಿಸಿಏಪ್ರಿಲ್ 26 ಮತ್ತು ಮೇ 7ರಂದು ಕಾಂಗ್ರೆಸ್ ಪಕ್ಷದ ವಿಭಜನಕಾರಿ ಮನಸತ್ವವನ್ನು ಕರ್ನಾಟಕದಲ್ಲಿ ಆರೋಗ್ಯದ ಸಮಸ್ಯೆ ಬಂದರೆ ಬಡವ ಮತ್ತಷ್ಟು ಬಡವನಾಗುತ್ತಾನೆ ಅದಕ್ಕಾಗಿ ಕೇಂದ್ರ ಸರ್ಕಾರ 5 ಲಕ್ಷ ಉಚಿತ ಆರೋಗ್ಯ ಸೌಲಭ್ಯ ನೀಡುವ ಆಯುಷ್ಮಾನ್ ಕಾರ್ಡ್ ಜಾರಿಗೆ ತಂದಿದ್ದೇವೆ.
ಶಿವಮೊಗ್ಗದ ಹಕ್ಕಿಪಿಕ್ಕಿ ಜನಾಂಗದ ನಡುವೆ ನಡೆದ ಸಂವಾದವನ್ನು ನೆನಪಿಸಿಕೊಂಡ ಮೋದಿ :
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 5 ಲಕ್ಷ ಆಯುಷ್ಮಾನ್ ಭಾರತ್ ಕಾರ್ಡ ಒಂಬತ್ತು ಲಕ್ಷ ಜನರಿಗೆ ಉಚಿತ ಅಕ್ಕಿ ನೀಡಲಾಗಿತ್ತು ಶಿವಮೊಗ್ಗದ ಹಕ್ಕಿಪಿಕ್ಕಿ ಜನಾಂಗದವರನ್ನು ಆಪರೇಷನ್ ಸೂಡಾನ್ ಮೂಲಕ ರಕ್ಷಣೆ ಮಾಡಲಾಗಿತ್ತುಭಾರತವನ್ನು ಈಗ ಆಧುನಿಕ ತಂತ್ರಜ್ಞಾನದ ಮೂಲಕ ಗುರುತಿಸಲಾಗುತ್ತದೆ.
ರಾಷ್ಟ್ರೀಯ ಹೆದ್ದಾರಿಗಳಿಗೆ 6,000 ಕೋಟಿ ಮೀಸಲಿಟ್ಟ ಕೇಂದ್ರ ಸರ್ಕಾರ :
ತುಮಕೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ
6,000 ಕೋಟಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗುತ್ತಿದೆಶಿವಮೊಗ್ಗ ತಾಳಗುಪ್ಪ ಜಂಬಗಾರು ರೈಲ್ವೆ ನಿಲ್ದಾಣಗಳನ್ನು ಉನ್ನತಿಕರಣ ಮಾಡಲಾಗುತ್ತಿದೆಮುಂದಿನ ಐದು ವರ್ಷಗಳಲ್ಲಿ ಯುವಕರಿಗೆ ಹೊಸ ಮಾರ್ಗ ಒದಗಿಸಲಾಗುವುದು ಎಂದರು.
ನಾಲ್ಕು ಜನ ಸಂಸದರನ್ನು ಗೆಲ್ಲಿಸಿ ಎಂದು ಕರೆ ನೀಡಿದ ಮೋದಿ :
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶ್ರೀನಿವಾಸ್ ಪೂಜಾರಿ, ದಕ್ಷಿಣ ಕನ್ನಡದಲ್ಲಿ ಬ್ರೀಜೇಶ ಚೌಟಾಲ, ದಾವಣಗೆರೆ ಯಲ್ಲಿ ಗಾಯತ್ರಿ ಸಿದ್ದೇಶ್ವರ ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ ಗೆಲುವಿಗೆ ಮೋದಿ ಕರೆ ನೀಡಿದರು.
