
ಶಿವಮೊಗ್ಗ : ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜನರು ಬಸ್ ನಿಲ್ದಾಣವಿಲ್ಲದೆ ಪರದಾಡುತ್ತಿದ್ದಾರೆ.ದಿನನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಬಸ್ಸುಗಳು ಈ ವೃತ್ತದ ಮಾರ್ಗವಾಗಿ ಓಡಾಡುತ್ತಿದ್ದು. ಶಿವಮೊಗ್ಗದ ಪ್ರಮುಖ ವೃತ್ತಗಳಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತವು ಒಂದು ಹರಿಹರ ,ಹೊಸಪೇಟೆ, ಬಳ್ಳಾರಿ, ರಾಯಚೂರು ಮಾರ್ಗವಾಗಿ ಸಾಕಷ್ಟು ಬಸ್ ಗಳು ಇದೆ ವೃತ್ತದ ಮೂಲಕವೇ ಸಾಗುತ್ತವೆ. ಇದಲ್ಲದೆ ದಿನನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕೂಡ ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಇಲ್ಲಿ ಪ್ರಮುಖವಾಗಿ ಬಸ್ ನಿಲ್ದಾಣದ ವ್ಯವಸ್ಥೆವಿಲ್ಲದೆ ಪ್ರಯಾಣಿಕರು ಅಲೆದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ ನಿಲ್ದಾಣ ನಿರ್ಮಿಸಿಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎನ್ನುತ್ತಿರುವ ನೊಂದ ಪ್ರಯಾಣಿಕರು :
ಈ ವೃತ್ತದಲ್ಲಿ ಒಂದು ಉತ್ತಮವಾದ ಬಸ್ ನಿಲ್ದಾಣವನ್ನು ನಿರ್ಮಿಸಿಕೊಟ್ಟು ಪುಣ್ಯಕೊಟ್ಟಿಕೊಳ್ಳಿ ಇಲ್ಲವಾದಲ್ಲಿ ನಮಗೆ ಸಾಕಷ್ಟು ತೊಂದರೆವಾಗುತ್ತದೆ ಎನ್ನುವುದು ಪ್ರಯಾಣಿಕರ ಮನವಿ.
ಬಸ್ ನಿಲ್ದಾಣ ನಿರ್ಮಿಸದಿದ್ದರೆ ರಸ್ತೆ ತಡೆದು ಹೋರಾಟ ಮಾಡುವುದು ಅನಿವಾರ್ಯ:
ಆದಷ್ಟು ಬೇಗ ಬಸ್ ನಿಲ್ದಾಣ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡದಿದ್ದರೆ ರಸ್ತೆ ತಡೆದು ಹೋರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಂದು ಶೇಷಾದ್ರಿಪುರಂ ನಾಗರಿಕ ಸಮಿತಿ ಹಾಗೂ ವಿದ್ಯಾರ್ಥಿಗಳು ಮತ್ತು ನೊಂದ ಪ್ರಯಾಣಿಕರು ಆಗ್ರಹಿಸಿದ್ದಾರೆ.
ರಘುರಾಜ್ ಹೆಚ್.ಕೆ…9449553305…