
ಬೆಂಗಳೂರು: ಜಾಗೃತಿ ಟ್ರಸ್ಟ್ ಸಂಸ್ಥಾಪಕರಾದ ನಾಗೇಶ್.ಬಿ ರವರು ತಮ್ಮ ಸಂಸ್ಥೆ ಮುಖೇನ ಉದಯೋನ್ಮುಖ ಕವಿಗಳ ಕವನಗಳನ್ನು ಪರಿಚಯಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಈಗಾಗಲೇ ಹಲವಾರು ಕವನ ಸಂಕಲನಗಳನ್ನು ಪ್ರಕಟಿಸಿದೆ. “ಬಯಲು ಭಾವನೆಗಳ ಸಾಗರ” ಕವನ ಸಂಕಲನ ಪತ್ರಕರ್ತೆ, ಸಾಹಿತಿ ಶ್ರೀಮತಿ ಡಾ. ಮಂಜುಳ ಪಾವಗಡ ರವರ ಮೊದಲ ಕವನ ಸಂಕಲನವನ್ನು ಜಾಗೃತಿ ಟ್ರಸ್ಟ್ ದಿನಾಂಕ 23/7/2022 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳ ಅಮೃತಾಸ್ತಾದಿಂದ ಬಿಡುಗಡೆ ಮಾಡಲಿದೆ. ನಂತರ ಸುರೇಂದ್ರ ಹೆಗಡೆಯವರ ನೇತೃತ್ವದಲ್ಲಿ ಧರ್ಮಸ್ಥಳದ ನೇತ್ರಾವತಿ ಸಭಾಂಗಣದಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ಸಾಹಿತಿಗಳು, ಕವಿಗಳು ಭಾವಹಿಸಿಲಿದ್ದಾರೆ. ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ. ಡಾ.ವೀರೇಂದ್ರ ಹೆಗಡೆಯವರು ಸರ್ವರನ್ನು ಆಶೀರ್ವದಿಸಲಿದ್ದಾರೆ.

ಜಾಗೃತಿ ಟ್ರಸ್ಟ್ ಸಂಸ್ಥೆಯು ಇನ್ನಷ್ಟು ಕನ್ನಡದ ಕೆಲಸಗಳನ್ನು ಮಾಡಲು ಉದ್ದೇಶಿಸಿದೆ. ಇದುವರೆಗೂ ಹತ್ತು ಹಲವು ಸಾಕ್ಷ್ಯಚಿತ್ರಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದೆ. 2021 ರ ನವೆಂಬರ್ ತಿಂಗಳಲ್ಲಿ ಕವಿ ಮುರಳಿ ಕೃಷ್ಣ ಬೆಳಾಲು ರಚಿಸಿದ ‘ಮೊಳಗಲಿ ಕನ್ನಡ ಜಯಭೇರಿ’ ಕವಿತೆಗೆ ಖ್ಯಾತ ಗಾಯಕ ಶಶಿಧರ್ ಕೋಟೆರವರ ಸಂಗೀತ ನಿರ್ದೇಶನ ಮತ್ತು ಗಾಯನದೊಂದಿಗೆ ಹೊಸದೊಂದು ಕನ್ನಡ ಗೀತೆಯನ್ನು ಜಾಗೃತಿ ಸಂಸ್ಥೆ ನೀಡಿದೆ. ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ‘ಮಾತಾಡ್ ಮಾತಾಡ್ ಕನ್ನಡ’ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿರುತ್ತದೆ.

2021 ರ ನವೆಂಬರ್ ನಲ್ಲಿ ಕುವೆಂಪು ಜನಿಸಿದ ಪುಣ್ಯ ಸ್ಥಳದಲ್ಲಿ “ಕುಪ್ಪಳ್ಳಿಯಲ್ಲಿ ಕುವೆಂಪು ಕನ್ನಡದ ಕಂಪು” ಎಂಬ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಮಾನ್ಯ ಗೃಹ ಸಚಿವರಾದ ಜ್ಞಾನೇಂದ್ರ ಆರಗರವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಗಿದೆ. ಅಂತರ್ ರಾಜ್ಯದಲ್ಲೂ, ಕನ್ನಡದ ಕಂಪನ್ನು ಪಸರಿಸುವ ಸಲುವಾಗಿ ‘ಕನ್ಯಾಕುಮಾರಿಯಲ್ಲಿ ಕನ್ನಡದ ತೇರು ‘ ಅಂತರ್ ರಾಜ್ಯ ಮಟ್ಟದ ಕವಿಗೋಷ್ಠಿ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಿದೆ. ಈ ಕಾರ್ಯಕ್ರಮಕ್ಕೆ ಪುಟ್ಪರ್ತಿ ಸಾಯಿಬಾಬಾರವರು ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಾದಿಸಿದ್ದು ವಿಶೇಷ.

ಸುಮಾರು 20 ವರ್ಷಗಳಿಂದ ನಿರಂತರ ಕನ್ನಡ ನಾಡು ನುಡಿಯ ಸೇವೆಯ ಮೂಲಕ ಸಂಸ್ಥೆಯು ಇದುವರೆಗೆ ಸಾಕಷ್ಟು ತೆರೆಮರೆಯ ಪ್ರತಿಭಾವಂತ ಕಲಾವಿದರನ್ನು, ಕವಿಗಳನ್ನ, ಸಾಹಿತಿಗಳನ್ನ ಪರಿಚಯಿಸುತ್ತಾ, ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಬಹಳ ಯಶಸ್ವಿಯಾಗಿ ಮಾಡುತ್ತಾ ಸಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹದ ಮೇರೆಗೆ ಇನ್ನಷ್ಟು ಕೆಲಸಗಳನ್ನು ಮಾಡಲು ಸಹಕಾರ ಬಯಸುತ್ತಿದೆ .
ರಘುರಾಜ್ ಹೆಚ್.ಕೆ…9449553305….