
ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ಸೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಸನಗದ್ದೆ ಗ್ರಾಮ ಅತೀ ಹೆಚ್ಚಿನ ಮಳೆಯಿಂದಾಗಿ ಸುಮಾರು 25 ಕ್ಕೂ ಮಿಕ್ಕಿದ ಕುಟುಂಬಗಳೂ ನಡುಗಡ್ಡೆಯಲ್ಲಿದ್ದು, ಸಾಗರ ತಾಲ್ಲೂಕು ಆಡಳಿತ ಬೀಸನಗದ್ದೆಯ ಗ್ರಾಮಸ್ಥರಿಗೆ ಓಡಾಡಲು ದೋಣಿ ವ್ಯವಸ್ಥೆ ಮಾಡಿದ್ದೂ ಸರಿಯಷ್ಟೇ ದೋಣಿ ಚಲಾಯಿಸಲು ಯಾವೊಬ್ಬ ಅನುಭವಿ ಚಾಲಕನನ್ನು ನೇಮಿಸದೇ ಬೀಸನಗದ್ದೆ ಗ್ರಾಮಸ್ಥರೇ ಅನಿವಾರ್ಯವಾಗಿ ದೋಣಿ ಚಲಾವಣೆ ಮಾಡುತ್ತಿದ್ದೂ, ಸಾಗರ ತಾಲ್ಲೂಕು ಆಡಳಿತ LIFE JOCKET ಕೂಡ ನೀಡದೇ ಇರುವುದು ಶಿವಮೊಗ್ಗ ಜಿಲ್ಲಾ ಆಡಳಿತ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.
ಅಪ್ರಾಪ್ತ ಬಾಲಕರೇ LIFE JOCKET ಬಳಸದೇ ದೋಣಿಯಲ್ಲಿ ಓಡಾಡುತ್ತಿದ್ದೂ, ಮುಂದೇನಾದರೂ ಅವಘಡ ಸಂಭವಿಸಿ ಪ್ರಾಣಹಾನಿಯಾದರೇ ಯಾರು ಜವಾಬ್ದಾರರು
ಶಿವಮೊಗ್ಗ ಜಿಲ್ಲಾ ಸಂಸದರಾದ ಬಿ. ವೈ. ರಾಘವೇಂದ್ರ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರ್ ಬಂಗಾರಪ್ಪ ಇಂತಹ ತುರ್ತು ಸಂದರ್ಭದಲ್ಲಿ ಬೇಜವಾಬ್ದಾರಿತನ ಸಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ ನೀರಾವರಿ ನಿಗಮದಿಂದ ಕಳೆದ 06 ತಿಂಗಳಲ್ಲಿ 01 ಕೋಟಿ ರಸ್ತೆ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಉದ್ಘಾಟನೆಗೂ ಮುನ್ನವೇ 01 ಕೋಟಿ ರಸ್ತೆ ನೀರಲ್ಲಿ ಕೊಚ್ಚಿ ಹೋಗಿರುವುದು ಕರ್ನಾಟಕ ನೀರಾವರಿ ನಿಗಮದ 40% ಕಮಿಷನ್ ಗೆ ತುತ್ತಾಗಿರುವುದು. ಕಣ್ಮುಚ್ಚಿ ಕುಳಿತ ಜವಾಬ್ದಾರಿ ಸ್ಥಾನದಲ್ಲಿರುವ ಶಿವಮೊಗ್ಗ ಜಿಲ್ಲಾ ಸಂಸದರು ಹಾಗೂ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರು ಮೌನಕ್ಕೆ ಶರಣಾಗಿರುವ ಹಿಂದಿನ ಮರ್ಮವೇನು……..?!
ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಇತ್ತ ಗಮನ ಹರಿಸಿ ನ್ಯಾಯ ಹಾಗೂ ಸೂಕ್ತ ರಕ್ಷಣೆ ನೀಡುವಂತೆ ಬೀಸನಗದ್ದೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್.ಕೆ…9449553305….