
ಬೆಂಗಳೂರು: ಕನ್ನಡ ವೈದ್ಯಸಾಹಿತ್ಯಕ್ಕೆ ದಿವಂಗತ ಡಾ. ಎಚ್. ಗಿರಿಜಮ್ಮ ಅವರ ಕೊಡುಗೆ ಅಪಾರ. ಸುಲಲಿತ ಭಾಷೆಯಲ್ಲಿ ಬರೆದ ಪತ್ರಿಕಾ ಲೇಖನಗಳ ಮೂಲಕ ಆರೋಗ್ಯದ ಅರಿವನ್ನು ಮೂಡಿಸಲು ಶ್ರಮಿಸಿದರು.
ಸೃಜನಶೀಲ ಬರಹಗಾರ್ತಿಯೂ ಆಗಿದ್ದ ಡಾ. ಎಚ್. ಗಿರಿಜಮ್ಮ ತಮ್ಮ ಸುಂದರ
ಕಥೆಗಳು, ಕಾದಂಬರಿಗಳ ಮೂಲಕ ಜನಮನ ಗೆದ್ದರು.
ಡಾ. ಎಚ್. ಗಿರಿಜಮ್ಮ ಅವರ ಸ್ಮರಣೆಯಲ್ಲಿ ವೈದ್ಯರು ಬರೆದ ಆರೋಗ್ಯ ಸಾಹಿತ್ಯ ಮತ್ತು ಸೃಜನಶೀಲ ಸಾಹಿತ್ಯ ಕೃತಿಗಳಿಗೆ ಪ್ರತಿವರ್ಷ ಪ್ರಶಸ್ತಿ ನೀಡಲು ‘ಸ್ನೇಹ ಬಳಗ’ ನಿರ್ಧರಿಸಿದೆ.
2021 ರ ಸಾಲಿಗೆ ಡಾ. ಎಚ್.ಎಸ್. ಅನುಪಮಾ ಮತ್ತು ಡಾ. ಶಾಂತಲಾ ಅವರ ಕೃತಿಗಳು ‘ಡಾ. ಎಚ್. ಗಿರಿಜಮ್ಮ ಪ್ರಶಸ್ತಿ’ ಗೆ ಆಯ್ಕೆಯಾಗಿವೆ.
23 ಜುಲೈ 2022
ಸಂಜೆ 5.30 ಕ್ಕೆ ನಡೆಯುವ ಸಮಾರಂಭದಲ್ಲಿ
ಡಾ. ಮಂಜುನಾಥ್
ಶ್ರೀ ಜಯದೇವ ಹೃದಯವಿಜ್ಞಾನ
ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕ
ಸ್ಥಳ : ಕರ್ನಾಟಕ ಚಿತ್ರಕಲಾ ಪರಿಷತ್ತು.
ಡಾ. ಎಚ್. ಗಿರಿಜಮ್ಮ ಸ್ನೇಹ ಬಳಗದ ವತಿಯಿಂದ ಎಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ….
ರಘುರಾಜ್ ಹೆಚ್.ಕೆ…9449553305….