Tuesday, May 6, 2025
Google search engine
Homeರಾಜ್ಯಶಿವಮೊಗ್ಗ "ಸ್ಮಾರ್ಟ್‌ಸಿಟಿ" ಅವೈಜ್ಞಾನಿಕ, ಕಳಪೆ, ಕಾಮಗಾರಿ..!!!! ಕೋಟಿ ಕೋಟಿ, ಲೂಟಿ..!! ನ್ಯಾಯಾಂಗ ತನಿಖೆಗೆ ಒಪ್ಪಿಸಿ ಕಾಂಗ್ರೆಸ್...

ಶಿವಮೊಗ್ಗ “ಸ್ಮಾರ್ಟ್‌ಸಿಟಿ” ಅವೈಜ್ಞಾನಿಕ, ಕಳಪೆ, ಕಾಮಗಾರಿ..!!!! ಕೋಟಿ ಕೋಟಿ, ಲೂಟಿ..!! ನ್ಯಾಯಾಂಗ ತನಿಖೆಗೆ ಒಪ್ಪಿಸಿ ಕಾಂಗ್ರೆಸ್ ಮುಖಂಡ ಕೆ ದೇವೇಂದ್ರಪ್ಪ ಆಗ್ರಹ..!!! ಇಲ್ಲವಾದಲ್ಲಿ ಉಗ್ರ ಹೋರಾಟದ ಎಚ್ಚರಿಕೆ..!!!!!

ಶಿವಮೊಗ್ಗ:- ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿ ಸಂಪೂರ್ಣ ಕಳಪೆ ಮತ್ತು ಅವೈಜನಿಕವಾಗಿದ್ದು, ಕೂಡಲೇ ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.

ಶಿವಮೊಗ್ಗ ಸ್ಮಾರ್ಟ್‌ಸಿಟಿ ಕಾಮಗಾರಿಗಾಗಿ ಸಾವಿರ ಕೋಟಿಗೂ ಹೆಚ್ಚು ಅನುದಾನ ಇರುತ್ತದೆ. ಆದರೆ, ಕಾಮಗಾರಿಗಳೆಲ್ಲಾ ಕಳಪೆಯಾಗಿದೆ. ಈಗ ಸ್ಮಾರ್ಟ್‌ಸಿಟಿಯ ಕಾಮಗಾರಿ ಗಳನ್ನು ತರಾತುರಿಯಲ್ಲಿ ಮುಗಿಸಿ ಮಹಾನಗರ ಪಾಲಿಕೆಗೆ ವರ್ಗಾವಣೆ ಮಾಡುವ ಸಮಯ ಬಂದಿದೆ. ಆದರೆ, ಕಾಮಗಾರಿಗಳನ್ನು ಯಾವ ಅಧಿಕಾರಿಗಳು ಕೂಡ ಪರಿಶೀಲಿಸಿಲ್ಲ ಎಂದು ದೂರಿದರು.

ಶೇ.೭೫ರಷ್ಟು ಕಾಮಗಾರಿಗಳು ಮುಗಿದಿವೆ ಎಂದು ಸುಳ್ಳು ಹೇಳುತ್ತಿ ದ್ದಾರೆ. ಸ್ಮಾರ್ಟ್‌ಸಿಟಿ ಕಾಮಗಾರಿಗಾಗಿ ಸುಮಾರು ೫೩ ಪ್ರಾಜೆಕ್ಟ್‌ಗಳು ಬೇಕಾಗುತ್ತದೆ. ಅಂದರೆ ಡ್ರೈನೇಜ್ ಬಾಕ್ಸ್, ಒಳಚರಂಡಿ, ವಿದ್ಯುತ್, ಟೆಲಿಫೋನ್, ವಿವಿಧ ನೆಟ್‌ವರ್ಕ್ ಸಂಪರ್ಕಗಳು, ನೀರು, ಗ್ಯಾಸ್ ಹೀಗೆ ಹಲವು ಕಾಮಗಾರಿಗಳನ್ನು ಮಾಡಬೇಕಾಗುತ್ತದೆ. ಈ ಕಾಮಗಾರಿ ಗಳನ್ನು ಮಾಡಲು ಪದೇ ಪದೇ ಗುಂಡಿಯನ್ನು ತೆಗೆಯಬೇಕಾಗುತ್ತದೆ. ಆದರೆ, ೪೧ ಕಾಮಗಾರಿಗಳು ಮುಗಿದಿದೆ ಎಂದು ಸುಳ್ಳು ಮಾಹಿತಿ ನೀಡಿ, ಈಗ ಮಹಾನಗರ ಪಾಲಿಕೆಗೆ ಅದನ್ನು ವರ್ಗಾವಣೆ ಮಾಡಲು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಹೊರಟಿದ್ದಾರೆ ಎಂದು ದೂರಿದರು.

ಹೊಸಮನೆ, ಬಸವನಗುಡಿ, ವೆಂಕಟೇಶನಗರ, ದುರ್ಗಿಗುಡಿ, ಶರಾವತಿ ನಗರ ಮುಂತಾದ ಪ್ರಮುಖ ವಾರ್ಡ್‌ಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳುತ್ತಿದ್ದಾರೆ. ಆದರೆ, ಒಂದೇ ಮಳೆಗೆ ಈ ಎಲ್ಲಾ ಕಾಮಗಾರಿಗಳು ಕುಸಿದು ಬಿದ್ದಿವೆ. ಮತ್ತೆ ಮತ್ತೆ ಅಗೆದು ಕಾಮಗಾರಿ ಮಾಡಲಾಗಿದೆ. ಕೆಲವು ಕಡೆ ಕಾಮಗಾರಿ ಮಾಡದೇ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಮತ್ತೆ ಹಲವು ಕಡೆ ಕಾಮಗಾರಿಯನ್ನೇ ಮಾಡದೇ ತೇಪೆ ಹಾಕಿದ್ದಾರೆ. ತರಾತುರಿಯಲ್ಲಿ ಈಗ ವರ್ಗಾವಣೆ ಮಾಡಲು ಹೊರಟಿದ್ದಾರೆ. ಸಂಪೂರ್ಣ ಕಳಪೆ ಗುಣಮಟ್ಟದ ಕಾಮಗಾರಿ ಇದಾಗಿದೆ ಎಂದು ದೂರಿದರು.

ಕಳಪೆ ಕಾಮಗಾರಿಗೆ ಸಂಬಂಧಿಸಿ ದಂತೆ ನಮ್ಮಲ್ಲಿ ಸಾಕ್ಷಿಗಳಿವೆ. ವಿಡಿಯೋಗಳಿವೆ. ಜಿಲ್ಲಾಧಿಕಾರಿಗಳು ಬಂದರೆ ಎಲ್ಲಿ ಕಳಪೆ ಕಾಮಗಾರಿ ಇದೆ ಎಂದು ನಾವು ಸಾಕ್ಷಿ ಸಮೇತ ತೋರಿಸುತ್ತೇವೆ. ಅನೇಕ ಕಡೆ ಅಂಗಡಿ ಮತ್ತು ಮನೆಯ ಮಾಲೀಕರಿಗೆ ಅನುಕೂಲ ಮಾಡಿಕೊಟ್ಟು ಲಕ್ಷಾಂತರ ರೂ. ಭ್ರಷ್ಟಾಚಾರ ಕೂಡ ಮಾಡಿದ್ದಾರೆ. ಸರ್ಕಾರಿ ಜಾಗವನ್ನು ದೊಡ್ಡ ದೊಡ್ಡ ಅಂಗಡಿ ಮಾಲೀಕರ ಪರವಾಗಿ ನಿಂತು ಕಾಮಗಾರಿಯನ್ನೇ ಮಾಡಿಲ್ಲ. ನೀರು ಹರಿದು ಹೋಗದೆ ಇಡೀ ನಗರ ಒಂದು ಸಣ್ಣ ಮಳೆಗೆ ಜಲಾವೃತವಾಗುತ್ತದೆ ಎಂದು ದೂರಿದರು.

ಸಾವಿರ ಕೋಟಿಗಳು ಖರ್ಚಾಗಿದ್ದರು ಕೂಡ ಒಂದೇ ಒಂದು ಪ್ರಯೋಜನ ಕೂಡ ಇಲ್ಲಿ ಆಗಿಲ್ಲ. ಮಸಣಕ್ಕೆ ಹೋಗುವ ಹೆಣಕ್ಕೆ ಶೃಂಗಾರ ಮಾಡಿದಂತಾಗಿದೆ. ಈ ಬಗ್ಗೆ ನಾವು ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ. ಜಿಲ್ಲಾಧಿಕಾರಿಗಳು ಈ ತಕ್ಷಣವೇ ಅಂದರೆ ಒಂದು ವಾರದೊಳಗೆ ಎಲ್ಲ ಕಾಮಗಾರಿಗಳನ್ನ ಪರಿಶೀಲನೆ ಮಾಡಬೇಕು ಮತ್ತು ಸ್ಮಾರ್ಟ್‌ಸಿಟಿ ಕಾಮಗಾರಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿಗಳಿಂದ ಪರಿಶೀಲನೆ ಅಥವಾ ತಾಂತ್ರಿಕ ಇಲಾಖೆಯಿಂದ ಗುಣಮಟ್ಟ ಪರೀಕ್ಷೆ ಮಾಡದೆಯೇ ಮಹಾನಗರ ಪಾಲಿಕೆಗೆ ವರ್ಗಾವಣೆ ಮಾಡಬಾರದು. ಮತ್ತು ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಎಸಿಬಿ ಅಥವಾ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಕವಿತಾ ರಾಘವೇಂದ್ರ, ಸ್ಟೆಲ್ಲಾ ಮಾರ್ಟಿನ್, ಜಮೀರ್, ಬಾಲಾಜಿ, ನಿಸಾರ್ ಮುಂತಾದವರಿದ್ದರು.

ಓಂಕಾರ ಎಸ್. ವಿ. ತಾಳಗುಪ್ಪ

ರಘುರಾಜ್ ಹೆಚ್.ಕೆ…9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..!