
ತೀರ್ಥಹಳ್ಳಿ : ರಾಜಕೀಯವಾಗಿ ಪ್ರಬಲ ವಿರೋಧಿಗಳಾಗಿರುವ ಒಂದೇ ಪಕ್ಷದಲ್ಲಿದ್ದರೂ ಪರಸ್ಪರ ವಿರೋಧ ವ್ಯಕ್ತಪಡಿಸುತ್ತಿದ್ದ ಹಲವು ಸಲ ಒಂದಾಗಿ ಮತ್ತೆ ಬೇರ್ಪಟ್ಟಿದ್ದ ಜೋಡಿ ಇದೀಗ ತೀರ್ಥಹಳ್ಳಿಯಲ್ಲಿ ಒಂದಾಗಿ ಪ್ರತಿಭಟನೆ ನಡೆಸಿದ್ದಾರೆ.
ಆ ಜೋಡಿ ಬೇರ್ಯಾರು ಅಲ್ಲ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಅಪೇಕ್ಸ್ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಮಂಜುನಾಥ್ ಗೌಡರು ಈ ಬೆಳವಣಿಗೆ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದ್ದು ನಿಜವಾಗಿಯೂ ಈ ಜೋಡಿ ಒಂದಾದಾರ ಎನ್ನುವ ಕುತೂಹಲ ಬಿಜೆಪಿಯ ಪಾಳಯದಲ್ಲಿ ಮೂಡಿದೆ.
ಏಕೆಂದರೆ, ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ್ ಗೌಡರು ಒಂದಾಗಿ ತೀರ್ಥಹಳ್ಳಿಯಲ್ಲಿ ಸ್ಪರ್ಧೆ ಮಾಡಿದರೆ ಬಿಜೆಪಿಗೆ ಸಹಜವಾಗಿಯೇ ಕಷ್ಟವಾಗುತ್ತದೆ. ಇದರ ಅರಿವು ತೀರ್ಥಹಳ್ಳಿಯ ಬಿಜೆಪಿಯ ನಾಯಕರಲ್ಲಿ ಇದೆ.
ತೀರ್ಥಹಳ್ಳಿಯ ಮೇಲಿನ ಕುರುವಳ್ಳಿಯ ಪಿಡಿಒ ಸರಿತಾ ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿ ಬರುತ್ತಿದ್ದು ಸಾಕಷ್ಟು ಸಲ ಪ್ರತಿಭಟನೆಯನ್ನು ಇಲ್ಲಿನ ಸದಸ್ಯರುಗಳು ಮಾಡಿದ್ದಾರೆ ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದ ಪಿಡಿಒ ಸರಿತಾ ತನ್ನ ಪಾಡಿಗೆ ತಾನು ಏನೂ ಆಗಿಲ್ಲವೆಂಬಂತೆ ಇದ್ದಾರೆ ಇದನ್ನು ಗಂಭೀರವಾಗಿ ತೆಗೆದುಕೊಂಡ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಆರ್ ಎಂ ಮಂಜುನಾಥ್ ಗೌಡ ನೇತೃತ್ವದ ತೀರ್ಥಹಳ್ಳಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಮಾಡುವುದರ ಮೂಲಕ ಅಧಿಕಾರದ ಅಹಂ ಅನ್ನು ಬಿಟ್ಟು ಜನರ ಜೊತೆ ಉತ್ತಮ ಸಂಪರ್ಕದಲ್ಲಿದ್ದರೆ ಮಾತ್ರ ಅಧಿಕಾರ ನಡೆಸಲು ಸಾಧ್ಯ ಎನ್ನುವ ಬಿಸಿ ಮುಟ್ಟಿಸಿದ್ದಾರೆ…

ರಘುರಾಜ್ ಹೆಚ್.ಕೆ…9449553305…


1 comment
**mitolyn**
Mitolyn is a carefully developed, plant-based formula created to help support metabolic efficiency and encourage healthy, lasting weight management.