
ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕ್ಷೇತ್ರಗಳಲ್ಲಿ ಶಿವಮೊಗ್ಗ ಜಿಲ್ಲೆಯ ಬಿಜೆಪಿ ನಗರ ಕ್ಷೇತ್ರವು ಒಂದು ಏಕೆಂದರೆ ಬಿಜೆಪಿ ಕಟ್ಟಿ ಬೆಳೆಸಿದ ಆರ್ ಎಸ್ ಎಸ್ ನ ಪ್ರಬಲ ನಾಯಕ ಕಟ್ಟಾ ಹಿಂದೂ ಪ್ರತಿಪಾದಕ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿನಿಧಿಸುವ ಕ್ಷೇತ್ರಕ್ಕೆ ಹೈಕಮಾಂಡ್ ಒತ್ತಾಯಕ್ಕೆ ಮಣಿದು ಸ್ವಯಂಘೋಷಿತವಾಗಿ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಭುಗಿಲೆದ್ದ ಕಾರ್ಯಕರ್ತರ ಆಕ್ರೋಶ :

ದಿಡೀರ್ ಬೆಳವಣಿಗೆಯಲ್ಲಿ ಈಶ್ವರಪ್ಪನವರ ನಿವೃತ್ತಿ ಎಲ್ಲರಲ್ಲೂ ಸಂಚಲನ ಮೂಡಿಸಿದ್ದು ಕೆ ಎಸ್ ಈಶ್ವರಪ್ಪನವರ ಅಭಿಮಾನಿಗಳ ಬಳಗದಲ್ಲಿ ಇದು ಆಕ್ರೋಶ ಉಂಟು ಮಾಡಿದ್ದು. ಹಿರಿಯ ನಾಯಕನನ್ನು ಬಿಜೆಪಿ ಹೈಕಮಾಂಡ್ ನಡೆಸಿಕೊಂಡ ರೀತಿ ಸರಿಯಲ್ಲ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಹಾಗೆ ಈಶ್ವರಪ್ಪನವರಿಗೆ ಅಥವಾ ಅವರ ಮಗನಿಗೆ ಸ್ಥಾನ ನೀಡಬೇಕು ಇಲ್ಲವಾದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ರಸ್ತೆಗಳಲ್ಲಿ ಟೈರ್ ಸುಟ್ಟು ತಮ್ಮ ಪ್ರತಿಭಟನೆಯ ಬಿಸಿ ಮುಟ್ಟಿಸಿದ ಕಾರ್ಯಕರ್ತರು :
ರಸ್ತೆಗಳಲ್ಲಿ ಟೈರ್ ಗಳನ್ನು ಸುಟ್ಟು ತಮ್ಮ ಪ್ರತಿಭಟನೆಯ ಬಿಸಿಯನ್ನು ಮುಟ್ಟಿಸಿದ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರನ್ನು ಭೇಟಿಯಾದ ಈಶ್ವರಪ್ಪನವರ ಪುತ್ರ ಕೆ ಇ ಕಾಂತೇಶ್ :
ಇವೆಲ್ಲ ಬೆಳವಣಿಗೆಗಳ ಮಧ್ಯೆ ಈಶ್ವರಪ್ಪನವರ ಪುತ್ರ ಕಾಂತೇಶ್ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಎಲ್ಲಾ ಒಳ್ಳೆಯದಾಗುತ್ತದೆ ಎಂದು ಈಶ್ವರಪ್ಪ ಪುತ್ರನಿಗೆ ಭರವಸೆ ನೀಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ :
ಮುಂದೆ ಎಲ್ಲಾ ಒಳ್ಳೆಯದಾಗುತ್ತದೆ ಚಿಂತಿಸುವ ಅಗತ್ಯ ಇಲ್ಲ ಹೈಕಮಾಂಡ್ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತದೆ ಚಿಂತೆ ಮಾಡುವ ಅಗತ್ಯತೆ ಇಲ್ಲ ಎಂದು ಭರವಸೆ ನೀಡಿದ ಮಾಜಿ ಸಿಎಂ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತಿನಿಂದ ತೃಪ್ತಿ ತಂದಿದೆ ಎಂದ ಕೆಇ ಕಾಂತೇಶ್ :
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮಾತಿನಿಂದ ತೃಪ್ತಿ ತಂದಿದೆ ಹೈಕಮಾಂಡ್ ಸದ್ಯದಲ್ಲೇ ಒಳ್ಳೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಕಾದು ನೋಡೋಣ ಎಂದು ತಿಳಿಸಿದ್ದಾರೆ…
ಆದರೆ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಬಿಜೆಪಿ ಹೈಕಮಾಂಡ್ ತಲೆಯಲ್ಲಿ ಏನಿದೆ ಬಿಜೆಪಿ ಕಟ್ಟಿ ಬೆಳೆಸಿದ ನಾಯಕರಲ್ಲಿ ಒಬ್ಬರಾದ ಈಶ್ವರಪ್ಪನವರ ಪುತ್ರನಿಗೆ ಟಿಕೆಟ್ ನೀಡುತ್ತಾ..?! ಮತ್ತೆ ಬದಲಾವಣೆಯ ಬಯಸಿ ಪಕ್ಷದ ಇತರ ನಾಯಕರಿಗೆ ಅಚ್ಚರಿ ಬೆಳವಣಿಗೆಯಲ್ಲಿ ಟಿಕೆಟ್ ನೀಡುತ್ತಾ..?! ಉಳಿದಂತೆ ದತ್ತಾತ್ರಿ ,ಜ್ಯೋತಿಪ್ರಕಾಶ್, ಹರಿಕೃಷ್ಣ ಅವರಿಗೆ ಮಣೆ ಹಾಕುತ್ತಾ..?! ಒಂದು ವೇಳೆ ಈಶ್ವರಪ್ಪ ಕುಟುಂಬಕ್ಕೆ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ಪಕ್ಷದಲ್ಲಿ ಏಳುವ ಬಂಡಾಯದ ಬಿಸಿಯಿಂದ ಹೊರಬರಲು ಸಾಧ್ಯನಾ..?!
ಇದೆಲ್ಲದಕ್ಕೂ ಉತ್ತರ ಸದ್ಯದಲ್ಲೇ ದೊರೆಯಲಿದೆ ಇಂದು ಸಂಜೆ ಅಥವಾ ನಾಳೆ ಅಂತಿಮ 12 ಜನರ ಪಟ್ಟಿ ಬಿಡುಗಡೆ ಆಗಲಿದ್ದು ಆ ಪಟ್ಟಿಯಲ್ಲಿ ಶಿವಮೊಗ್ಗ ನಗರದ ಹೆಸರು ಇರಲಿದೆ ಎಲ್ಲಾ ಕುತೂಹಲಕ್ಕೂ ತೆರೆ ಬೀಳಲಿದೆ…

ರಘುರಾಜ್ ಹೆಚ್.ಕೆ…9449553305…