
ಬೆಂಗಳೂರು : ದಿನಾಂಕ 13 ಜುಲೈ 2022 ಗುರುಪೂರ್ಣಿಮೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಕಾರ್ತಿಕ್ ಯೋಗ ಗುರುಗಳು ಸತತ 30 ವರ್ಷಗಳಿಂದ ಯೋಗ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಯೋಗ ಅಭ್ಯಾಸ ಸೂರ್ಯ ನಮಸ್ಕಾರ ಎಲ್ಲ ಯೋಗ ಆಸಕ್ತರಿಗೆ ಮಾರ್ಗದರ್ಶನ ಮಾಡಲಾಯಿತು. ಈ ಒಂದು ಕಾರ್ಯಕ್ರಮವನ್ನು ಲೋಕಮಾನ್ಯ ತಿಲಕ್ ಸ್ಪೋರ್ಟ್ಸ್ ಕ್ಲಬ್ ತುಳಸಿ ತೋಟ. ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ಎದುರುಗಡೆ ಹತ್ತಿರ ಶಾಂತಲಾ ಸಿಲ್ಕ್ ಹೌಸ್ ಹತ್ತಿರ ಬೆಂಗಳೂರು. ತುಂಬಾ ಅರ್ಥಪೂರ್ಣವಾಗಿ ಆಚರಿಸಲಾಯಿತು. ಎಲ್ಲ ಯೋಗ ಶಿಬಿರಾರ್ಥಿಗಳು ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿರುತ್ತಾರೆ. ಅನೇಕ ಗಣ್ಯ ವ್ಯಕ್ತಿಗಳು ಚಲನಚಿತ್ರ ನಟರು ನಟಿಯರು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.
ರಘುರಾಜ್ ಹೆಚ್.ಕೆ…9449553305….