
ಶಿವಮೊಗ್ಗ: ಜೋಗ ಜಲಪಾತದಲ್ಲಿರುವ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಪ್ರವಾಸಿಮಂದಿರ ಅವ್ಯವಹಾರ – ಸರ್ಕಾರದ ಭೋಕ್ಕಸಕ್ಕೆ ಪ್ರತಿ ತಿಂಗಳು ಲಕ್ಷಾಂತರ ರೂ ಖೋತಾ – C. C. CAMERA ಅಳವಡಿಸದೇ ಇರುವುದೇ ಪ್ರಮುಖ ಕಾರಣ – HOME STAY, LODGE ಗಳಿಗೆ C. C. CAMERA ಕಡ್ಡಾಯವಾಗಿ ಅಳವಡಿಸಿ ಎನ್ನುವ ಪೊಲೀಸ್ ಇಲಾಖೆ ಈ ಪ್ರವಾಸಿ ಮಂದಿರಕ್ಕೆ ಇದುವರೆಗೂ C. C. CAMERA ಅಳವಡಿಸಿಲ್ಲ – ಪೊಲೀಸ್ ಇಲಾಖೆ ಮೌನ ಶರಣು !!!
ಜೋಗ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ವಿಶ್ವ ವಿಖ್ಯಾತ ಜೋಗದಲ್ಲಿರುವ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಪ್ರವಾಸಿಗರ (ನಿರೀಕ್ಷಣಾ ) ಮಂದಿರದಲ್ಲಿ ಒಟ್ಟು ಎಂಟು ಕೊಠಡಿಗಳಿದ್ದೂ, ಮೂರು ಶೂಟು ಐದು ಡೀಲಕ್ಸ್ ರೂಮ್ ಆದರೆ ಈ ಹಣ ವಸೂಲಿ ಮಾಡುತ್ತಿರುವವರು ದಿನಗೂಲಿ ನೌಕರರು ಯಾವೊಬ್ಬ ನೌಕರರು ಖಾಯಂ ಇಲ್ಲ ಪ್ರತಿದಿನ ಪ್ರವಾಸಿಗರಿಗೆ ಅಥವಾ ಬೇರೆಯವರಿಗೆ ರೂಮ್ ಗಳನ್ನು ಕೊಡುತ್ತಾರೆ ಯಾವುದೇ ಬುಕ್ ಮೆಂಟೆನೆನ್ಸ್ ಇಲ್ಲ ದಾಖಲಾತಿಗಳು ಪಡೆಯುವುದಿಲ್ಲ 10 ರೂಪಾಯಿಗಳ ಜಮಾವಣೆ ಮಾಡಬೇಕಾದರೂ ಆನ್ಲೈನ್ ಮುಖಾಂತರ ಕಟ್ಟಬೇಕೆಂದು ಆದೇಶ ಮಾಡಿದೆ ಆದರೆ ಇಲ್ಲಿ ಹಣ ಪಡೆಯುವವರು ಯಾರು ತಿನ್ನುವವರು ಯಾರು ಗೊತ್ತಿಲ್ಲ ಸರ್ಕಾರಕ್ಕೆ ನಷ್ಟ ಮಾತ್ರ ತಿಂಗಳಿಗೆ ಮೂರಿಂದ ನಾಲ್ಕು ಲಕ್ಷಗಳ ವ್ಯವಹಾರ ನಡೆಯುತ್ತದೆ ಯಾರೇ ರೂಮ್ ಬುಕ್ ಮಾಡಿದರು ಆನ್ಲೈನ್ ಮುಖಾಂತರವೇ ಬುಕ್ ಮಾಡುವಂತ ವ್ಯವಸ್ಥೆ ಆಗಬೇಕು.
ಅವ್ಯವಹಾರಕ್ಕೆ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅಭಯಹಸ್ತವಿರುವ ಬಗ್ಗೆ ವ್ಯಾಪಕ ಚರ್ಚೆ ನೆಡೆಯುತ್ತಿದೆ. C. C. CAMERA ಯಾಕೇ ಇನ್ನೂ ಅಳವಡಿಸದೇ ಇರುವುದು ಮಾಸಿಕ 03 ರಿಂದ 04 ಲಕ್ಷ ಕರ್ನಾಟಕ ರಾಜ್ಯ ಸರ್ಕಾರದ ನಷ್ಟಕ್ಕೆ ಕಾರಣವಾಗಿದೆ.
ಬೇಲಿಯೇ ಎದ್ದು ಹೊಲ ಮೇಯ್ದ0ತೆ….. ಕಣ್ಣಿದ್ದು ಜಾಣ ಕುರುಡುತನದತ್ತ PWD ಅಧಿಕಾರಿಗಳು, ಪೊಲೀಸ್ ಇಲಾಖೆ ಇನ್ನು ಮುಂದಾದರು ಪ್ರವಾಸಿ ಮಂದಿರದ ಕಡೆ ಗಮನ ಹರಿಸಿ ನಡೆಯುತ್ತಿರುವ ಲಕ್ಷಾಂತರ ಅವ್ಯವಹಾರವನ್ನು ತಪ್ಪಿಸಿ ..
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್. ಕೆ..9449553305….