

ಶಿವಮೊಗ್ಗ: ಸಿಮ್ಸ್ ಕಾಲೇಜಿನಲ್ಲಿ ತನ್ನ ಐದುವರೆ ವರ್ಷದ ವೈದ್ಯ ವೃತ್ತಿ ಯು ವ್ಯಾಸಂಗವನ್ನು ಮುಗಿಸಿ ಏನ್ ಓ ಸಿ ಯನ್ನು ಕೇಳಲು ಶಿಕ್ಷಕರಾದ ಶಸ್ತ್ರಚಿಕಿಸ್ತಕ ಅಶ್ವಿನ್ ಹೆಬ್ಬಾರ್ ಬಳಿ ಬಂದ ಉತ್ತರ ಭಾರತ ಮೂಲದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ವಿದ್ಯಾರ್ಥಿನಿ ತನ್ನ ಶಿಕ್ಷಕರ ಮೇಲೆ ಇದೆ ತಿಂಗಳ 15 ರಂದು ಮಾಡಿದ್ದರು.
ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ಮಾಡಿದ ಶಿಕ್ಷಕರ ವಿರುದ್ಧ ದೂರು ನೀಡಿದ ವಿದ್ಯಾರ್ಥಿನಿ :
ತನ್ನ ವೈದ್ಯ ವೃತ್ತಿಯ ತರಬೇತಿಯ ಕೋರ್ಸ್ ಮುಗಿದ ನಂತರ ಎನ್, ಒ,ಸಿ ಕೇಳಲು ಶಿಕ್ಷಕರ ಹತ್ತಿರ ಹೋದಾಗ ತನ್ನ ವಿರುದ್ಧ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ ಉತ್ತರ ಭಾರತದ ಮೂಲದ ವಿದ್ಯಾರ್ಥಿನಿ.
ದೂರು ನೀಡಿದ ನಂತರ ದೂರನ್ನು ಪರಿಶೀಲನೆ ನಡೆಸಲು ಸಮಿತಿ ರಚಿಸಿದ ನಿರ್ದೇಶಕ ಡಾಕ್ಟರ್ ಓ ಎಸ್ ಸಿದ್ದಪ್ಪ :
ವಿದ್ಯಾರ್ಥಿನಿಯ ದೂರಿನ ಆಧಾರದ ಮೇಲೆ ಸಮಗ್ರ ತನಿಖೆ ನಡೆಸುವಂತೆ ಡಾ. ರೇಖಾ ಆರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಯಿತು.
ಸಮಿತಿಯಲ್ಲಿ ದೂರನ್ನು ಹಿಂಪಡೆದ ವಿದ್ಯಾರ್ಥಿನಿ ;
ಡಾ. ರೇಖಾ ಆರ್ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯಲ್ಲಿ ದೂರು ಕೊಟ್ಟ ಯುವತಿ ನನ್ನ ತಪ್ಪು ಗ್ರಹಿಕೆಯಿಂದ ಇತರ ನಡೆದಿದೆ ಹಾಗಾಗಿ ಈ ದೂರನ್ನು ನಾನು ಹಿಂದೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಯಾರ ಒತ್ತಡಕ್ಕೆ , ಒತ್ತಾಯಕ್ಕೆ ಮಣಿದು ದೂರನ್ನು ಹಿಂಪಡೆದರು ವಿದ್ಯಾರ್ಥಿನಿ ..?
ವೈದ್ಯ ವೃತ್ತಿಯನ್ನು ಪೂರ್ಣಗೊಳಿಸಿದ ಒಬ್ಬ ವಿದ್ಯಾರ್ಥಿನಿ ಸಹಜವಾಗಿಯೇ ವಿದ್ಯಾವಂತರಾಗಿರುತ್ತಾರೆ . ಅವರು ತಪ್ಪು ಗ್ರಹಿಕೆಯಿಂದ ಮಾಡಲು ಹೇಗೆ ಸಾಧ್ಯ..?
ಸಹಜವಾಗಿಯೇ ವೈದ್ಯ ವೃತ್ತಿಯನ್ನು ಪೂರೈಸಿದ ಒಬ್ಬ ವಿದ್ಯಾರ್ಥಿನಿ ವಿದ್ಯಾವಂತಳಾಗಿರುತ್ತಾರೆ. ಅವರು ಹೇಗೆ ತಪ್ಪು ಗ್ರಹಿಕೆಯಿಂದ ದೂರು ನೀಡಲು ಸಾಧ್ಯ ಎನ್ನುವ ಅನುಮಾನ ಈ ಪ್ರಕರಣದಲ್ಲಿ ಹುಟ್ಟುತ್ತದೆ.
ಒಂದು ವೇಳೆ ತಪ್ಪು ಗ್ರಹಿಕೆಯಿಂದ ದೂರು ನೀಡಿದ್ದರೆ ವೈದ್ಯರ ಮಾನ ಹರಾಜಾಗಿದೆಯಲ್ಲ ಅದಕ್ಕೆ ಶಿಕ್ಷೆ ಏನು..?
ಒಂದು ವೇಳೆ ಸಮಿತಿಯ ಪ್ರಕಾರ ತಪ್ಪು ಗ್ರಹಿಕೆಯಿಂದ ದೂರು ನೀಡಿದ್ದರೆ ಮಾನ ಹೋಗಿರುವ ಶಸ್ತ್ರ ಚಿಕಿಸ್ತಕ ಶಿಕ್ಷಕರ ಮಾನಕ್ಕೆ ಬೆಲೆ ಇಲ್ಲವೇ..?
ನಿರ್ದೇಶಕರೇ ಪ್ರಕರಣವನ್ನು ಹಾದಿ ತಪ್ಪಿಸಬೇಡಿ ಸರಿಯಾಗಿ ತನಿಖೆ ನಡೆಸುವಂತೆ ನೋಡಿಕೊಳ್ಳಿ :
ಸಿಮ್ಸ್ ನ ನಿರ್ದೇಶಕರೇ ಪ್ರಕರಣವನ್ನು ಹಾದಿ ತಪ್ಪಿಸಬೇಡಿ ಸಮಗ್ರವಾದ ತನಿಖೆ ನಡೆಯುವಂತೆ ನೋಡಿಕೊಳ್ಳಿ. ಐದುವರೆ ವರ್ಷ ವೈದ್ಯಕೀಯ ಶಿಕ್ಷಣ ತರಬೇತಿಯನ್ನು ಪೂರ್ಣಗೊಳಿಸಿ ಹೊರ ಹೋಗಿ ವೈದ್ಯ ವೃತ್ತಿಯನ್ನು ಪ್ರಾರಂಭಿಸಬೇಕಾಗಿರುವ ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ವಿದ್ಯಾರ್ಥಿನಿ ತನ್ನ ತಪ್ಪು ಗ್ರಹಿಕೆಯಿಂದ ಲೈಂಗಿಕ ಕಿರುಕುಳದ ಆರೋಪವನ್ನು ತನ್ನ ಶಿಕ್ಷಕರ ಮೇಲೆ ಹೋರಿಸಿರುವುದು ಎಷ್ಟು ಸರಿ..? ಇಂತಹ ಎಷ್ಟು ಪ್ರಕರಣಗಳು ಸಿಮ್ಸ್ ನಲ್ಲಿ ಮುಚ್ಚಿ ಹೋಗಿವೆ..? ಈ ಪ್ರಕರಣ ಸಮಗ್ರ ತನಿಖೆ ನಡೆಯಬೇಕು ನಿಜವಾದ ಆರೋಪಿಗಳಿಗೆ ಶಿಕ್ಷೆ ಆಗಬೇಕು… ಅದು ಯಾರೇ ಆಗಿರಲಿ ವಿದ್ಯಾರ್ಥಿನಿಯೇ ಆಗಲಿ ,ಶಿಕ್ಷಕನೇ ಆಗಲಿ….
ರಘುರಾಜ್ ಹೆಚ್.ಕೆ…9449553305….