
ಶಿವಮೊಗ್ಗ : ನಗರದ ದೊಡ್ಡಪೇಟೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ರಾಬರಿ, ಮೊಬೈಲ್, ಬೈಕ್ , ಸರಗಳ್ಳತನ, ಮಾಡುತ್ತಿದ್ದ ನಾಲ್ವರ ಗ್ಯಾಂಗ್ ಅನ್ನು ಬಂಧಿಸಿದ್ದಾರೆ.
ಬಂದಿತರಿಂದ ಬೈಕ್, ಸರ, ಮೊಬೈಲ್, ವಶ :
ಬಂದಿತ ಆರೋಪಿಗಳಾದ ಆರ್ ಎಂ ಎಲ್ ನಗರದ ಆಪ್ಷನ್, ಸೈಯದ್ ನಿಜಾಮ್, ಜುನೇದ್, ಜೆಪಿ ನಗರದ ಖಲಂದರ್ ತಂಡದಿಂದ ಒಂದು ಸ್ಪ್ಲೆಂಡರ್ ಬೈಕ್, ಒಂದು ಹೋಂಡಾ ಡಿಯೋ ಬೈಕ್, ಒಂದು ಫ್ಯಾಷನ್ ಪ್ರೊ ಬೈಕ್, ಒಂದು ಸಿ ಆರ್ 110 ಬೈಕ್ ,10 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.ಜೊತೆಗೆ ತುಂಗಾನಗರ ಮಹಿಳಾ ಪಾಲಿಟೆಕ್ನಿಕ್ ಕಾಲೇಜ್ ಹತ್ತಿರ ಚೈನ್ ಸ್ಕ್ಯಾಚಿಂಗ್ ಮಾಡಿದ ಪ್ರಕರಣ, ನ್ಯೂ ಟೌನ್ ಠಾಣೆಯ ಒಂದು ರಾಬರಿ ಪ್ರಯತ್ನ ಪ್ರಕರಣ ಇವರ ಮೇಲೆ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಅಂಜನ್ ಕುಮಾರ್, ಎ ಎಸ್ ಐ ಚಂದ್ರಶೇಖರ, ಪಾಲಕ್ ನಾಯ್ಕ್ ಲಚ್ಚನಾಯಕ್, ನಿತಿನ್ ಕೆ, ರಮೇಶ್,ಶಶಿಧರ್, ಮನೋಹರ್ ಪಾಲ್ಗೊಂಡಿದ್ದರು...
ರಘುರಾಜ್ ಹೆಚ್. ಕೆ….9449553305…..