
ಶಿವಮೊಗ್ಗ: ನಗರದ ಸಿಮ್ಸ್ ಕಾಲೇಜಿನ ಒಂದೊಂದೇ ಪ್ರಕರಣಗಳು ನಿಧಾನವಾಗಿ ಬೆಳಕಿಗೆ ಬರುತ್ತಿವೆ. ಮೊನ್ನೆ ಅಷ್ಟೇ ಉತ್ತರ ಭಾರತೀಯ ಮೂಲದ ವಿದ್ಯಾರ್ಥಿನಿ ಒಬ್ಬರಿಗೆ ಅಶ್ವಿನ್ ಹೆಬ್ಬಾರ್ ಎಂಬ ವೈದ್ಯರು ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ಬಹುತೇಕ ಮುಚ್ಚಿ ಹಾಕಲಾಗಿತ್ತು. ಪತ್ರಿಕೆ ಆ ಪ್ರಕರಣವನ್ನು ಸಮಗ್ರವಾಗಿ ತನಿಕಾ ವರದಿ ಮಾಡಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಜಿಲ್ಲಾಧಿಕಾರಿಗಳು ಅದನ್ನು ಮರುತನಿಕೆ ನಡೆಸಿ ಸರ್ಕಾರದ ಆದೇಶಕ್ಕೆ ಕಳುಹಿಸಿದ್ದರು . ನಂತರ ಸರ್ಕಾರದ ಕಾರ್ಯದರ್ಶಿಗಳು ಸಂಬಂಧ ಪಟ್ಟ ವೈದ್ಯರಿಗೆ ಅಮಾನತ್ತು ಆದೇಶ ನೀಡಿದ್ದರು. ಹೀಗೆ ಬಹುತೇಕ ಮುಚ್ಚಿ ಹೋಗಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ಪತ್ರಿಕೆ ಹೊರತಂದು ಆ ವೈದ್ಯರಿಗೆ ಅಮಾನತ್ತು ಆದೇಶ ಹೊರಡಿಸುವುದರಲ್ಲಿ ಪತ್ರಿಕೆ ಪ್ರಮುಖ ಪಾತ್ರ ವಹಿಸಿತ್ತು.ಈಗ ಮತ್ತೆ ಅಂತದ್ದೇ ಒಂದು ಪ್ರಕರಣ ಬಯಲಿಗೆ ಬಂದಿದೆ….
ಏನಿದು ಪ್ರಕರಣ :
ಸಿಮ್ಸ್ ಕಾಲೇಜಿನಲ್ಲಿ ಕಲಿಯಲು ಬಂದ ವಿದ್ಯಾರ್ಥಿನಿ ಜೊತೆಗೆ (Staff Nurse ) ಶುಶ್ರೂಷಣಾದಿಕಾರಿ ಅಸಭ್ಯವಾಗಿ ವರ್ತಿಸಿದ್ದು , ಲೈಂಗಿಕ ಕಿರುಕುಳ ನೀಡಿದ್ದಾರೆ. ಎನ್ನುವ ಆರೋಪಗಳು ಕಾಲೇಜಿನ ಕ್ಯಾಂಪಸ್ಸಿನ ತುಂಬಾ ಮೂರು ದಿನದಿಂದ ಹರಿದಾಡುತ್ತಿದೆ.
ಆಡಳಿತದ ವೈಫಲ್ಯ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆಯಾ…?
ಸಿಮ್ಸ್ ಕಾಲೇಜಿನ ವ್ಯಾಪ್ತಿಯಲ್ಲಿ ನಿರಂತರವಾಗಿ ಈ ತರದ ಪ್ರಕರಣಗಳು ನಡೆಯುತ್ತಿದ್ದು ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಆಡಳಿತದ ಚುಕ್ಕಾಣಿ ಹಿಡಿದಿರುವ ನಿರ್ದೇಶಕರ ನಿರ್ಲಕ್ಷ ಇದಕ್ಕೆಲ್ಲ ನೇರ ಹೊಣೆ ಎನ್ನಬಹುದು. ಅಧಿಕಾರಿಗಳು ನಿರ್ದೇಶಕರ ಮಾತುಗಳನ್ನು ಪಾಲಿಸುತ್ತಿಲ್ಲ ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ.
ಈಗ ನಡೆದಿರುವ ಪ್ರಕರಣವನ್ನು ಮುಚ್ಚಿ ಹಾಕದೆ ಸಮಗ್ರವಾಗಿ ತನಿಖೆ ನಡೆಸಿ ಸಂಬಂಧ ಪಟ್ಟವರಿಗೆ ಶಿಕ್ಷೆ ಆಗಬೇಕು :
ಈಗ ನಡೆದಿದೆ ಎನ್ನಲಾಗುತ್ತಿರುವ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಿ ಸಂಬಂಧಪಟ್ಟವರಿಗೆ ಶಿಕ್ಷೆ ಆಗಬೇಕು. ಮುಖ್ಯವಾಗಿ ನಿರ್ದೇಶಕರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಮತ್ತೊಮ್ಮೆ ಜಿಲ್ಲಾಧಿಕಾರಿಗಳವರೆಗೆ ಹೋಗುವರೆಗೂ ನೋಡಿಕೊಳ್ಳಬಾರದು. ಇಲ್ಲವಾದಲ್ಲಿ ಪತ್ರಿಕೆ ಇದರ ವಿರುದ್ಧ ನಿರಂತರ ಹೋರಾಟ ನಡೆಸುತ್ತದೆ.
ರಘುರಾಜ್ ಹೆಚ್.ಕೆ…9449553305….