
ಶಿವಮೊಗ್ಗ : ಸಿಮ್ಸ್ ಕಾಲೇಜಿನಲ್ಲಿ MALE STAFF NURSE ಶುಶ್ರೂಷಣಾಧಿಕಾರಿ ಕಲಿಕೆಗೆ ಬಂದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪವು ಕಳೆದ ನಾಲ್ಕೈದು ದಿನಗಳಿಂದ ಕೇಳಿ ಬರುತ್ತಿತ್ತು. ಇದನ್ನು ಪತ್ರಿಕೆ ಸಮಗ್ರವಾಗಿ ವರದಿ ಮಾಡಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಈ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ಆದೇಶ ನೀಡಿದ್ದಾರೆ.
ನಿಷ್ಪಕ್ಷಪಾತವಾದ ತನಿಖೆ ನಡೆಸಿ ನೊಂದ ವಿದ್ಯಾರ್ಥಿನಿಗೆ ಸೂಕ್ತ ನ್ಯಾಯ ಒದಗಿಸಬೇಕು :
ನಿಷ್ಪಕ್ಷಪಾತವಾದ ತನಿಖೆ ನಡೆಸಿ ಈ ಪ್ರಕರಣದಲ್ಲಿ ನೊಂದ ವಿದ್ಯಾರ್ಥಿನಿಗೆ ಸೂಕ್ತ ನ್ಯಾಯ ಒದಗಿಸಬೇಕು. ಈ ಮೂಲಕ ಇನ್ನು ಮುಂದೆ ಈ ತರದ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು.
ಮೆಘನ್ ಆಸ್ಪತ್ರೆಯಲ್ಲಿ ಲಂಚದ ಹಾವಳಿ :
ಮೆಘನ್ ಆಸ್ಪತ್ರೆಯಲ್ಲಿ ಲಂಚಾವತಾರ ತಾಂಡವಾಡುತ್ತಿದ್ದು. ಹುಟ್ಟಿದ ಕೂಸು ಗಂಡಾದರೆ 2,000/ಮಗು ಹೆಣ್ಣಾದರೆ 1500/ ಎನ್ನುವ ಲೆಕ್ಕಾಚಾರದಲ್ಲಿ ಲಂಚಾವತಾರ ನಡೆಯುತ್ತಿದೆ. ಇಂದು ಕೂಡ ಲಂಚ ತೆಗೆದುಕೊಳ್ಳುತ್ತಿದ್ದ ಡಿ ಗ್ರೂಪ್ ನೌಕರ ಸಿಕ್ಕಿಬಿದ್ದಿದ್ದು ಆತನ ವಿರುದ್ಧ ತನಿಖೆ ನಡೆಯುತ್ತಿದೆ. ಇದರ ಬಗ್ಗೆ ಹಾಗೂ ಲೈಂಗಿಕ ಕಿರುಕುಳದ ಪ್ರಕರಣದ ಬಗ್ಗೆ ಅಧೀಕ್ಷಕರಾದ ಶ್ರೀಧರ್ ಅವರು ಮಾತನಾಡಿದ ವಿಡಿಯೋ..
ರಘುರಾಜ್ ಹೆಚ್.ಕೆ..9449553305…