
ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣ ವರದಿಯಾಗಿದ್ದೂ, ಲಕ್ಷ್ಮಿ ಪ್ರಸಾದ್ ಐ ಪಿ ಎಸ್ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಮತ್ತು ವಿಕ್ರಂ ಅಮಟೆ ಮಾನ್ಯ ಹೆಚ್ಚುವರಿ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರು ಮನೆ ಕಳ್ಳತನ ಪತ್ತೆ ಹಚ್ಚಲು ಅದೇಶಿಸಿದ ಮೇರೆಗೆ ರೋಹನ್ ಜಗದೀಶ್ ಐಪಿಎಸ್ ಮಾನ್ಯ ಸಹಾಯಕ ಪೊಲೀಸ್ ಅಧೀಕ್ಷಕರು ಸಾಗರ ಉಪ ವಿಭಾಗ ಸಾಗರ, ಶಿವಾನಂದ ಮದರ ಬಂಡಿ ಶಿಕಾರಿಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಸಾಗರ ನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸೀತಾರಾಮ್ ಜೆ. ಬಿ. ಮತ್ತು ಕಾರ್ಗಲ್ ಠಾಣಾ ವೃತ್ತ ನಿರೀಕ್ಷಕರು ಕೃಷ್ಣಪ್ಪ ರವರ ನೇತೃತ್ವದಲ್ಲಿ ಸಾಗರ ನಗರ ಪೊಲೀಸ್ ಠಾಣಾ ಪಿಎಸ್ಐ ಟಿ. ಡಿ. ಸಾಗರ್ ಕರ್, ಕಾರ್ಗಲ್ ಪೊಲೀಸ್ ಠಾಣಾ ಪಿ.ಎಸ್. ಐ ಶ್ರೀ ತಿರುಮಲೇಶ್. ಜೆ. ಸಿಬ್ಬಂದಿಗಳಾದ ರತ್ನಾಕರ್, ಸದಾನಂದ, ನಾಗರಾಜ್ ನಾಯ್ಕ್, ಮೈಲಾರಿ, ವಿಶ್ವನಾಥ್, ಲೋಕೇಶ್ ರವರನ್ನು ಒಳಗೊಂಡ ಪೊಲೀಸ್ ತಂಡ ದಿನಾಂಕ – 06-08-2022 ರಂದು ಮುಂಜಾನೆ 09-00 ಗಂಟೆ ಸುಮಾರಿಗೆ ಮನೆ ಕಳ್ಳತನ ಆರೋಪಿಗಳಾದ ಶಿವರಾಜ್ ತಂದೆ ಮಂಜುನಾಥ್ 23 ವರ್ಷ, ಕೂಲಿ ಕೆಲಸ , ವಾಸ ಶ್ರೀಧರ ನಗರ, ಮತ್ತು ದೊರೆರಾಜ ತಂದೆ ಹೊಳೆಯಪ್ಪ 22 ವರ್ಷ ಚಾಲಕ ವೃತ್ತಿ, ವಾಸ ಸೂರನಗದ್ದೆ ಗ್ರಾಮ ಸಾಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ ಇವರನ್ನು ದಸ್ತಗಿರಿ ಮಾಡಿ, ವಿಚಾರಣೆ ಮಾಡಿದಾಗ, ಆರೋಪಿತರು ಮನೆ ಕಳ್ಳತನ ಮಾಡಿದ್ದಾಗಿ ಹೇಳಿಕೆ ನೀಡಿದ್ದರಿಂದ, ಆರೋಪಿತರಿಂದ 3,30,000/- ಬೆಲೆಯ ಬಂಗಾರದ ವಸ್ತುಗಳು 8000/- ಮೌಲ್ಯದ ಬೆಳ್ಳಿಯ ವಸ್ತುಗಳು ಹಾಗೂ 4000/- ರೂ ನಗದು ಸೇರಿದಂತೆ ಒಟ್ಟು 3,42,000/- ಮೌಲ್ಯದ ಬೆಳ್ಳಿ ಬಂಗಾರದ ವಸ್ತುಗಳು ಮತ್ತು ನಗದು ಹಣವನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಸಾಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಲಕ್ಷ್ಮಿ ಪ್ರಸಾದ್ ಐ ಪಿ ಎಸ್ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಮತ್ತು ವಿಕ್ರಂ ಅಮಟೆ ಮಾನ್ಯ ಹೆಚ್ಚುವರಿ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರು ರೋಹನ್ ಜಗದೀಶ್ ಐಪಿಎಸ್ ಮಾನ್ಯ ಸಹಾಯಕ ಪೊಲೀಸ್ ಅಧೀಕ್ಷಕರು ಸಾಗರ ಉಪ ವಿಭಾಗ ಸಾಗರ, ಶಿವಾನಂದ ಮದರ ಬಂಡಿ ಶಿಕಾರಿಪುರ ಉಪ ವಿಭಾಗ ರವರುಗಳು ಅಭಿನಂದಿಸಿದರು….
ಓಂಕಾರ ಎಸ್. ವಿ. ತಾಳಗುಪ್ಪ…
ರಘುರಾಜ್ ಹೆಚ್.ಕೆ …9449553305….