Home ಶಿವಮೊಗ್ಗಜಂತುಹುಳು ನಿವಾರಣೆಯಿಂದ ಉತ್ತಮ ಆರೋಗ್ಯ ಸಾಧ್ಯ:ಸಿಇಓ ಎಂ.ಎಲ್.ವೈಶಾಲಿ..!!!!

ಜಂತುಹುಳು ನಿವಾರಣೆಯಿಂದ ಉತ್ತಮ ಆರೋಗ್ಯ ಸಾಧ್ಯ:ಸಿಇಓ ಎಂ.ಎಲ್.ವೈಶಾಲಿ..!!!!

by EDITOR NEWS WARRIORS
0 comments

ಶಿವಮೊಗ್ಗ, : ಜಂತು ಹುಳುವಿನಿಂದಾಗಿ ರಕ್ತ ಹೀನತೆ ಉಂಟಾಗಿ ಆರೋಗ್ಯದಲ್ಲಿ ಸಮರ್ಪಕ ಬೆಳವಣಿಗೆ ಆಗುವುದಿಲ್ಲ. ಅದ್ದರಿಂದ ಜಂತುಹುಳು ಮಾತ್ರೆಗಳನ್ನು ಸರಿಯಾಗಿ ಸೇವಿಸಿ ಜಂತು ಹುಳಗಳನ್ನು ನಿವಾರಣೆ ಮಾಡಿದರೆ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ಹೇಳಿದರು.

ಅವರು ಬುಧವಾರ ನಗರದ ಗಾಡಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ಅಯೋಜಿಸಲಾದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಉದ್ಘಾಟಿಸಿ ಮಾತನಾಡಿದರು.

ರಕ್ತ ಹೀನತೆಯು ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಹೆಚ್ಚಾಗಿದ್ದು, ಸೂಕ್ತವಾಗಿ ಜಂತುಹುಳು ಮಾತ್ರೆ ಸೇವಿಸುವ ಮೂಲಕ ರಕ್ತಹೀನತೆಯನ್ನು ತಡೆಗಟ್ಟಬಹುದು. ಮಕ್ಕಳು ಶುಚಿತ್ವವನ್ನು ಕಾಯ್ದುಕೊಳ್ಳುವುದು ಅತಿ ಮುಖ್ಯ. ಉಗುರು ನಿಯಮಿತವಾಗಿ ಕತ್ತರಿಸಿ, ಆಹಾರ ಸೇವಿಸುವ ಸಂದರ್ಭದಲ್ಲಿ ಕೈಯನ್ನು ಸರಿಯಾಗಿ ತೊಳೆಯುವ ಮೂಲಕ ಸ್ವಚ್ಛತೆಯನ್ನು ಕಾಪಾಡಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ ಅವರು ಮಾತನಾಡಿ, ಜಂತುಹುಳು ಮಾತ್ರೆಯನ್ನು 6 ತಿಂಗಳಿಗೊಮ್ಮೆ ಸೇವಿಸಿದರೆ ನಮ್ಮ ದೇಹದಲ್ಲಿರುವ ಜಂತುಹುಳುಗಳನ್ನು ಸಂಪೂರ್ಣ ನಿರ್ಮೂಲನೆ ಸಾಧ್ಯವಿದೆ. ಮಾತ್ರೆ ಸೇವಿಸುವುದರಿಂದ ಒಂದು ವೇಳೆ ಹೊಟ್ಟೆ ನೋವು ಕಾಣಿಸಿಕೊಂಡರೆ ನಿಮ್ಮ ಶಾಲಾ ಶಿಕ್ಷಕರಿಗೆ ತಿಳಿಸಬೇಕು. ಜಿಲ್ಲೆಯಾದ್ಯಂತ ಅಂಗನವಾಡಿ, ಶಾಲೆಗಳಲ್ಲಿ ಮತ್ತು ಪದವಿ ಪೂರ್ವ ಕಾಲೇಜು ಸೇರಿದಂತೆ 01ರಿಂದ 19 ವರ್ಷದ ಮಕ್ಕಳಿಗೆ ಉಚಿತವಾಗಿ ಜಂತುಹುಳು ಮಾತ್ರೆಗಳನ್ನು ನೀಡಲಾಗುವುದು. ಇದರ ಉಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದರು.

ಎಂ.ಎಲ್.ವೈಶಾಲಿ ಅವರು ಮಕ್ಕಳಿಗೆ ಜಂತು ಹುಳು ಮಾತ್ರೆ ನೀಡುವ ಮೂಲಕ ದಿನಾಚರಣೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚಂದ್ರಪ್ಪ, ಆರ್‌ಸಿಎಚ್‌ಓ ಡಾ. ನಾಗರಾಜ ನಾಯ್ಕ್ ಎಲ್ , ಎಫ್,ಡಬ್ಲೂ.ಓ ಡಾ. ಮಂಜುನಾಥ್ ನಾಗಲಿಕರ್, ಡಾ.ಉಮಾ ಹೆಚ್,ಎಂ ಹನುಮಂತಪ್ಪ, ಶ್ರೀಮತಿ ಭುವನೇಶ್ವರಿ, ಡಿಎಸ್‌ಓ ಡಾ.ಮಲ್ಲಪ್ಪ, ಟಿಹೆಚ್‌ಓ ಡಾ.ಚಂದ್ರಶೇಖರ್ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು….

ರಘುರಾಜ್ ಹೆಚ್. ಕೆ…9449553305….

Related Articles

Leave a Comment

Latest news
ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..!