
ತೀರ್ಥಹಳ್ಳಿ : ತಾಲೂಕಿನ ಗುಡ್ಡೇಕೇರಿ ಸಮೀಪ ನಾಲೂರ ವಾಸಿ ಮುರುಳಿಧರ್ ಭಟ್ ತಂದೆ ರಾಮಕೃಷ್ಣ (42 ವರ್ಷ) ಎನ್ನುವ ಬಿಜೆಪಿಯ ಮುಖಂಡನೋರ್ವ ಸುಮಾರು 8 ತಿಂಗಳ ಹಿಂದೆ ಹಸಲರು ಜನಾಂಗಕ್ಕೆ ಸೇರಿದ ಎಸ್, ಟಿ ಸಮುದಾಯದ 20 ವರ್ಷದ ಯುವತಿಯನ್ನು ನಂಬಿಸಿ ಮೋಸ ಮಾಡಿ ಅತ್ಯಾಚಾರ ಮಾಡಿ ಆಕೆ ಗರ್ಭವತಿಯಾಗಲು ಕಾರಣನಾಗಿದ್ದಾನೆ.

ಏನಿದು ಪ್ರಕರಣ :
ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೇರಿ ಸಮೀಪ ನಾಲೂರು ಎಂಬ ಊರಿನಲ್ಲಿ ಸುಮಾರು 42 ವರ್ಷದ ಮುರಳಿಧರ್ ಭಟ್ ತಂದೆ ರಾಮಕೃಷ್ಣ ಎನ್ನುವ ವ್ಯಕ್ತಿ ತನ್ನ ಮನೆಯ ಸಮೀಪ ಇರುವ ಎಸ್ ಟಿ ಸಮುದಾಯಕ್ಕೆ ಸೇರಿದ 20 ವರ್ಷದ ಯುವತಿಯನ್ನು ಎಂಟು ತಿಂಗಳ ಹಿಂದೆ ಅತ್ಯಾಚಾರ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾಯಿಗೆ ಅನುಮಾನ ಬಂದು ಚಿಕಿತ್ಸೆಗೆ ಕರೆದುಕೊಂಡು ಹೋದಾಗ ಗರ್ಭವತಿ ಆಗಿರುವುದು ದೃಢಪಟ್ಟಿತ್ತು :
ಮಗಳ ಚಲನವಲನಗಳು, ಅವಳ ದೇಹದಲ್ಲಿ ಆಗುತ್ತಿದ್ದ ಏರುಪೇರುಗಳನ್ನು ಗಮನಿಸಿದ ತಾಯಿ ಉಜ್ವಲ ಕೇಂದ್ರದಲ್ಲಿ ಸೇರಿಸಿ ಪರೀಕ್ಷೆ ಮಾಡಿಸಿದಾಗ ಆಕೆ ಗರ್ಭವತಿ ಆಗಿರುವುದು ದೃಢಪಟ್ಟಿದ್ದು. ನಂತರ ಆಕೆಗೆ ಕೌನ್ಸಿಲಿಂಗ್ ಮಾಡಿದಾಗ ಆಕೆ ಗರ್ಭವತಿ ಆಗಿರುವ ಹಿನ್ನೆಲೆಯನ್ನು ಬಾಯಿಬಿಟ್ಟಳು. ಈ ಗರ್ಭಕ್ಕೆ ಕಾರಣನಾದವನು ಮುರಳಿದರ್ ಭಟ್ ಎನ್ನುವ ಸಂಗತಿ ಆಗ ಬಯಲಿಗೆ ಬಂತು.
ಸ್ಥಳೀಯ ಆಗುಂಬೆ ಠಾಣೆಗೆ ದೂರು ನೀಡಿದ ನೊಂದ ಯುವತಿ ಹಾಗೂ ಪೋಷಕರು :
ಅತ್ಯಾಚಾರ ಮಾಡಿದ ಆರೋಪಿ ಮುರಳಿಧರ್ ಭಟ್ ವಿರುದ್ಧ ಸ್ಥಳೀಯ ಠಾಣೆ ಆಗುಂಬೆಯಲ್ಲಿ ದೂರು ನೀಡಿದ ನೊಂದ ಯುವತಿ ಹಾಗೂ ಆಕೆಯ ಪೋಷಕರು.
ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿ ಆರೋಪಿ ಮೇಲೆ ಕೇಸು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಆಗುಂಬೆ ಠಾಣೆಯ ಪೊಲೀಸರು :
ಯುವತಿ ಹಾಗೂ ಆಕೆಯ ಪೋಷಕರು ನೀಡಿದ ದೂರಿನ ಮೇಲೆ ಆರೋಪಿ ಮುರುಳಿಧರ್ ಭಟ್ ಮೇಲೆ ರೇಪ್ ಹಾಗೂ ಅಟ್ರಾಸಿಟಿ ಕೇಸ್ ಗಳನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ...
ರಘುರಾಜ್ ಹೆಚ್.ಕೆ…9449553305…