Tuesday, May 6, 2025
Google search engine
Homeರಾಜ್ಯವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ..!!!!ಗ್ರಾಹಕರು ಸಿಬ್ಬಂದಿಗಳ ಮರಣಶಾಸನ..!!!!!!! ಕೇಂದ್ರ ಸರ್ಕಾರದ...

ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ..!!!!ಗ್ರಾಹಕರು ಸಿಬ್ಬಂದಿಗಳ ಮರಣಶಾಸನ..!!!!!!! ಕೇಂದ್ರ ಸರ್ಕಾರದ ಈ ನೀತಿ ರಾಜ್ಯಕ್ಕೆ ಮಾರಕವಾಗುತ್ತಾ..?!

ಕೇಂದ್ರ ಸರ್ಕಾರ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದು ಎಷ್ಟು ಸರಿಯಾಗಿದೆ..?
ಸಂವಿಧಾನಾತ್ಮಕವಾಗಿ ವಿದ್ಯುತ್ ವಿಷಯವು ರಾಜ್ಯಗಳ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಆಡಳಿತ ಮತ್ತು ಕಾರ್ಯತಂತ್ರದಲ್ಲಿ ಆಗಬೇಕಾದ ಉದ್ದೇಶಿತ ಬದಲಾವಣೆಗಳ ಬಗ್ಗೆ ಸರ್ಕಾರಗಳು ಒಮ್ಮತ ವಾದ ನಿರ್ಧಾರಕ್ಕೆ ಬರಬೇಕಾಗಿದೆ.
ಈಗಾಗಲೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸಲು ತಯಾರಿ ನಡೆಸಿದ ಕೇಂದ್ರ ಸರಕಾರದ ನಡೆ ಅತ್ಯಂತ ಖಂಡನೀಯ ಇದು ರಾಜ್ಯಕ್ಕೆ ಮಾರಕ ಕೂಡ ಆಗಲಿದೆ.

ಈಗಾಗಲೇ ಖಾಸಗೀಕರಣ ಗೊಳಿಸಿರುವ ಹಲವಾರು ಸ್ಥಳಗಳಲ್ಲಿ ಅಲ್ಲಿನ ಪರಿಸ್ಥಿತಿ ಶೋಚನೀಯವಾಗಿದೆ.
ಒಂದು ವೇಳೆ ವಿದ್ಯುತ್ ತಿದ್ದುಪಡಿ ಮಸೂದೆ ಜಾರಿಯಾದರೆ ವಿದ್ಯುತ್ ಉತ್ಪಾದನಾ ಸರಬರಾಜು ಲಕ್ಷಾಂತರ ಕೋಟಿ ಆಸ್ತಿಪಾಸ್ತಿಗಳು ಖಾಸಗಿ ಲೂಟಿಕೋರರ ಕೈವಶ ವಾಗುವುದರಲ್ಲಿ ಎರಡು ಮಾತಿಲ್ಲ ಹಾಗೂ ಪಂಪ್ಸೆಟ್ ರೈತರಿಗೆ ಇಲಾಖೆ ನೌಕರರಿಗೆ ಭಾರಿ ಪೆಟ್ಟು ಬೀಳುವ ಸಂಭವವೇ ಹೆಚ್ಚಾಗಿದೆ .
ಜೊತೆಗೆ ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣ ಮಾಡುವ ಹುನ್ನಾರ ಕೂಡ ಆಗಿದೆ.!
ಒಂದು ಸಮಯ ತಿದ್ದುಪಡಿ ಕಾಯ್ದೆ ಜಾರಿಯಾದರೆ ರೈತರು , ಸಣ್ಣಪುಟ್ಟ ಉದ್ಯಮಿಗಳು , ಭಾಗ್ಯಜ್ಯೋತಿ , ಕುಟೀರ ಜ್ಯೋತಿ ಯೊಂದಿಗೆ ಬಡತನ ರೇಖೆಗಿಂತ ಕೆಳಗಿರುವ ಗ್ರಾಹಕರಿಗೆ ಬಾರಿ ತೊಂದರೆಯಾಗಲಿದೆ.
ಇದರ ಪರಿಣಾಮ ಅನೇಕ ಹೋರಾಟಗಳು ಆಗಬಹುದು ಸಾರ್ವಜನಿಕ ಬಂಡವಾಳದಿಂದ ವಿದ್ಯುತ್ ಕ್ಷೇತ್ರದಲ್ಲಿ ಆಸ್ತಿ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದು ಇವುಗಳನ್ನು ಖಾಸಗಿಯವರಿಗೆ ವಹಿಸುವ
ಉದ್ದೇಶವಾದರೂ ಏಕೆ.!?

“ಇದೊಂದು ಸೇವಾಕ್ಷೇತ್ರ ಇದನ್ನು ಖಾಸಗಿ ವಿತರಣೆ ವ್ಯವಸ್ಥೆಗೆ ಒಪ್ಪಿಸುವುದು ಅತ್ಯಂತ ಅಪಹಾಸ್ಯ ಕೂಡ”
ರಾಜ್ಯದಲ್ಲಿ ಸಣ್ಣ ರೈತರು ಸ್ವತಃ ಬಂಡವಾಳ ಹಾಕಿಕೊಂಡು ಪಂಪ್ಸೆಟ್ ನಿಂದ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಂಡು ಹಣ್ಣು-ತರಕಾರಿ , ಹೂವುಗಳನ್ನು ಬೆಳೆದು ಅರ್ಧಂಬರ್ಧ ಬೆಲೆಗೆ ಮಾರಾಟಮಾಡಿ ಹೇಗೋ ಬದುಕನ್ನು ಸಾಗಿಸುತ್ತಿದ್ದಾರೆ.
ಸರ್ಕಾರ ರೈತರ ಉತ್ಪನ್ನಗಳಿಗೆ ಸರಿಯಾದ ಬೆಲೆ ನೀಡಲಾಗದ ಕಾರಣ ಸರಕಾರ ರೈತರಿಗೆ ಉತ್ತೇಜನ ನೀಡಲು ಉಚಿತವಾಗಿ ಪಂಪ್ಸೆಟ್ಗಳಿಗೆ ವಿದ್ಯುತ್ ಸರಬರಾಜು ಮಾಡುತ್ತಿದೆ ಇದು ಖಾಸಗಿಯವರ ಪಾಲಾದರೆ ವ್ಯವಸ್ಥೆ ಹದಗೆಡುವುದರಲ್ಲಿ ಸಂಶಯವಿಲ್ಲ.! ಹಾಗೂ ರೈತ ನಮ್ಮ ದೇಶದ ಬೆನ್ನೆಲುಬು ಎನ್ನುವ ಸತ್ಯವನ್ನು ಸರಕಾರ ಮರೆತಂತಿದೆ..!
ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ ಮಾಡಿ ಶುಲ್ಕ ವಸೂಲಿ ಮಾಡಿ ಬಳಿಕ ನಿಧಾನವಾಗಿ ಸರಕಾರದಿಂದ ರೈತರಿಗೆ ಮರುಪಾವತಿ ಯಾಗುತ್ತದೆ ಎನ್ನುವುದು ವಿವಾದಿತ ನಿಯಮವಾಗುತ್ತದೆ.

ಹಾಗೂ ಇದೇ ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿರುವ ವಿದ್ಯುತ್ ಮಸೂದೆ 2021ರ ಪ್ರಕಾರ ಕೃಷಿ ಪಂಪ್ಸೆಟ್ಗಳಿಗೂ ವಿದ್ಯುತ್ ಮೀಟರ್ ಅಳವಡಿಕೆ ಯಾಗಲಿದೆ ಈವರೆಗೆ 10 ಎಚ್.ಪಿ ಪಂಪ್ಸೆಟ್ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದ ರೈತರು ವಿದ್ಯುತ್ ಶುಲ್ಕ ಪಾವತಿಸಬೇಕಾಗುತ್ತದೆ , ಹಾಗೂ ಶುಲ್ಕ ಪಾವತಿಯ ನಂತರ ಸರಕಾರದಿಂದ ಸಬ್ಸಿಡಿ ಪಡೆಯುವ ಕರಡು ಮಸೂದೆಯ ನಿಯಮ ಗಳಲ್ಲಿರುವ ಪ್ರಸ್ತಾಪವು ರೈತರ ಆಕ್ರೋಶಕ್ಕೆ ಕಾರಣವಾಗಬಹುದು.!
ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆಯಾದರೆ ಖಾಸಗಿ ಕಂಪನಿಗಳು ರೈತರ ಮೇಲೆ ಹೆಚ್ಚು ಶೋಷಣೆ ಮಾಡಲಿದೆ ಇದರಿಂದ ಅತಂತ್ರ ಗೊಳಗಾಗಿ ರೈತರು ಕೃಷಿ ಚಟುವಟಿಕೆಯನ್ನೇ ಮಾಡಲಾಗದ ಸ್ಥಿತಿಯನ್ನು ಸರಕಾರ ಖಾಸಗಿಕರಣ ಮಾಡಿ ತಂದೆತರುತ್ತಾರೆ.!
ಖಾಸಗೀಕರಣಕ್ಕೆ ಅಂಕಿತ ದೊರೆತರೆ ಬೀದಿ ದೀಪ , ನೀರು ಸರಬರಾಜಿಗೆ ನೇರವಾಗಿ ನೀಡುತ್ತಿರುವ ಉಚಿತ ವಿದ್ಯುತ್ ಬಂದ್ ಆಗಿ ಗ್ರಾಹಕರು ವಿದ್ಯುತ್ ಶುಲ್ಕ ಪಾವತಿಸಲೇ ಬೇಕಾಗುತ್ತದೆ ಒಂದು ಸಮಯ ಪ್ರಿಪೇಯ್ಡ್ ಮೀಟರ್ ಅಳವಡಿಕೆ ಆದರೆ ಕೃಷಿಕರು ಕೂಡ ಮೊದಲು ಹಣವನ್ನು ಪಾವತಿಸಿ ಕೃಷಿ ಪಂಪ್ಸೆಟ್ಗಳಿಗೆ ನಂತರ ಬಳಕೆ ಮಾಡಿಕೊಳ್ಳುವಂತ ಅನಿವಾರ್ಯತೆಯ ಪರಿಸ್ಥಿತಿ ಬರುತ್ತದೆ ಇಂಥ ಮಸೂದೆಯಿಂದ ಕೃಷಿಕರಿಗೆ ಮರಣ ಶಾಸನವನ್ನೇ
ಬರೆದಂತಾಗುತ್ತದೆ..!
2019 ರಿಂದಲೂ ವಿದ್ಯುತ್ ಪೂರೈಕೆಯನ್ನು ಖಾಸಗಿಯವರಿಗೆ ವಹಿಸಲು ಸರಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿರುತ್ತದೆ ಈ ಸಂಬಂಧ ಸುಪ್ರೀಂಕೋರ್ಟ್ ಒಂದುವರೆ ವರ್ಷಗಳ ಕಾಲ ರೈತರಿಗೆ ಸಂಬಂಧಿಸಿದ ಯಾವುದೇ ಕಾಯ್ದೆ ತಿದ್ದುಪಡಿ ತರದಂತೆ ತಡೆಯಾಜ್ಞೆ ನೀಡಿರುತ್ತದೆ ಇದೀಗ ನ್ಯಾಯಾಲಯದ ಗಡುವು ಮುಗಿದಿದೆ ಪರಿಣಾಮ ರೈತರ ಮೇಲೆ ಗದಾಪ್ರಹಾರ ಆಗುವ ಸಂಭವ ಕೂಡ ಇದೆ.

ಈ ಹಿಂದೆ ಕೃಷಿಗೆ ರಿಯಾಯಿತಿ ದರದಲ್ಲಿ ರಸಗೊಬ್ಬರ ನೀಡುವ ವ್ಯವಸ್ಥೆಗೆ ಬದಲಾಗಿ ರೈತರಿಗೆ ನೇರವಾಗಿ ಸಹಾಯಧನ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿತ್ತು ಇದರ ಪರಿಣಾಮ 50 ಕೆ ಜಿ ಯೂರಿಯಾ ಬೆಲೆ 75ರಿಂದ 600 ರೂ ಡಿಎಪಿ 175 ರಿಂದ ಎರಡು ಸಾವಿರ ರೂಪಾಯಿಗಳಿಗೆ ಏರಿಕೆಯಾಗಿದೆ ಇದೇ ರೀತಿ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ಯಾದರೆ ಕೃಷಿ ಕ್ಷೇತ್ರವೇ ಅಪಾಯಕ್ಕೆ ಸಿಲುಕಲಿದೆ.!
ರಾಜ್ಯದಲ್ಲಿ ವಿದ್ಯುತ್ ಮೀಟರ್ ಗಳು ಪ್ರೀಪೇಯ್ಡ್ ಆದರೆ ಮೊಬೈಲ್ ರಿಚಾರ್ಜ್ ಇರುವಂತೆ ಪ್ರೀಪೇಯ್ಡ್ ಮಾದರಿಯೇ ವಿದ್ಯುತ್ ಮೀಟರ್ ಗಳಿಗೂ ಬರಲಿದೆ ,
ಅಂದರೆ ಗ್ರಾಹಕರು ಎಷ್ಟು ವಿದ್ಯುತ್ ಬೇಕೋ ಅಷ್ಟೇ ಅವರುಗಳ ಅರ್ಹತೆಗೆ ತಕ್ಕಂತೆ ಮೊದಲೇ ಹಣ ಪಾವತಿಸಬೇಕಾಗುತ್ತದೆ.
ಕೇಂದ್ರ ಸರಕಾರದ ಏಕಪಕ್ಷೀಯ ವಿಧಾನದ ವಿರುದ್ಧ ಆಂದೋಲನಗಳು ನಡೆಯಬಹುದು .
ವಿಧೇಯಕ 2021ರ ಹಲವು ನಿಬಂಧನೆಗಳು ಜನವಿರೋಧಿ ಹಾಗೂ ಜಾರಿಗೆ ಬಂದಲ್ಲಿ ಪ್ರತಿಕೂಲ ಪರಿಣಾಮವಂತೂ ಬೀರುತ್ತದೆ.
ತಿದ್ದುಪಡಿ ಮಸೂದೆ 2021 ಅನ್ನು ತರಾತುರಿಯಲ್ಲಿ ಸಂಸತ್ತಿನಲ್ಲಿ ಅಂಗೀಕರಿಸ ಬಾರದು ಹಾಗೆ ಅದನ್ನು ಸಂಸತ್ತಿನ ಶಕ್ತಿಯ ಸ್ಥಾಯಿ ಸಮಿತಿಗೆ ಉಲ್ಲೇಖಿಸಲು ಅನುಮತಿ ಕೊಡಬೇಕು.
ವಿದ್ಯುತ್ ಕ್ಷೇತ್ರದ ಪ್ರಮುಖರೊಂದಿಗೆ, ವಿದ್ಯುತ್ ಗ್ರಾಹಕರು ಮತ್ತು ವಿದ್ಯುತ್ ಉದ್ಯೋಗಿಗಳ ಹಾಗೂ ರೈತ ಮುಖಂಡರೊಂದಿಗೆ ಚರ್ಚಿಸಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮೊದಲು ಅವರುಗಳ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸೂಕ್ತ ಅವಕಾಶವನ್ನು ನೀಡಬೇಕು ಹಾಗೂ ವಿದ್ಯುತ್ ನೌಕರರ ಅಭಿಪ್ರಾಯಕ್ಕೆ ಸೂಕ್ತ ಮನ್ನಣೆ ನೀಡಬೇಕಾಗಿದೆ.
ಇಲ್ಲಿ ಬಂಡವಾಳ ಶಾಹಿಗಳ ಕೈ ಮೇಲಾಗುವಂತೆ ನಮ್ಮ ಸರ್ಕಾರ ಅಳತೆ ಮೀರಿ ಖಾಸಗೀಕರಣವನ್ನು ವಿಸ್ತರಿಸುತ್ತಿದೆ , ಬಂಡವಾಳ ಶಾಹಿಗಳು ತಮಗಿಷ್ಟ ಬಂದಂತೆ ಬೆಳೆಗಳನ್ನು ಹೆಚ್ಚಿಸಬೇಹುದು ವಿದ್ಯುತ್ ನೌಕರರ ದುಡಿಮೆಯ ಕಾಲವನ್ನು ಏರಿಸುತ್ತಾರೆ ದುಡಿಮೆಗೆ ತಕ್ಕ ಪ್ರತಿಫಲವಿಲ್ಲದಂತೆ ಕೂಲಿಯನ್ನು ತಗ್ಗಿಸುತ್ತಾರೆ ಹಾಗೂ ಖಾಸಗಿ ಮಾಲೀಕನೆ ಸರ್ವಾಧಿಕಾರಿಯಾಗುತ್ತಾನೆ ಸಾರ್ವಜನಿಕರ ತುರ್ತು ಪರಿಸ್ಥಿತಿಗೆ ನೆರವಾಗುವುದು ಸರಕಾರಿ ಸಂಸ್ಥೆಗಳೇ ಹೊರತು ಖಾಸಗಿ ಸಂಸ್ಥೆಗಳಲ್ಲ ಇದನ್ನು ಮೊದಲು ಸರ್ಕಾರ ಮನಗಣಬೇಕಾಗಿದೆ..

ಆದರೂ ವಾಸ್ತವ ಸ್ಥಿತಿ ಬೇರೆಯೇ ಇರುತ್ತದೆ ಏನೇ ಚಳುವಳಿ , ಪ್ರತಿಭಟನೆ ,ಬಂದ್ , ಅದೋಲನಗಳನ್ನು ಎಷ್ಟೇ ಮಾಡಿದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಮಸೂದೆಗಳನ್ನು ಹಿಂಪಡೆಯುವ ಸಾಧ್ಯತೆಗಳು ಅತ್ಯಂತ ಕಡಿಮೆ ಇರುತ್ತದೆ.
ಆದ್ದರಿಂದ ಮುಖ್ಯಮಂತ್ರಿಗಳು ಈ ತಿದ್ದುಪಡಿ ಖಾಯಿದೆಗೆ ಯಾವುದೇ ಕಾರಣಕ್ಕೂ ಸಮ್ಮತಿ ಸೂಚಿಸಬಾರದು.
ಒಂದು ಸಮಯ ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದರೆ ಯಾವುದೇ ಪ್ರತಿಭಟನೆಗಳಿಗೂ ಸರ್ಕಾರಗಳು ಹೆದರಿ ಯಾವುದೇ ಖಾಯಿದೆಗಳನ್ನು ಬದಲಾಯಿಸುವುದಿಲ್ಲ ಖಾಸಗೀಕರಣ ಪರವಾಗಿ ಮಾಡಿಯೇ ತಿರುತ್ತಾರೆ.
ತಿದ್ದುಪಡಿಯಾದ ಮಸೂದೆಗಳು ತುಂಬಾ ಅಪರೂಪದ ಸಂದರ್ಭದಲ್ಲಿ ಬಿಟ್ಟರೆ ಯಾವ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ .ಆದರೆ ಇದೇ ಸರಕಾರ ಇರುತ್ತದೆ ಇಲ್ಲದೆ ಇರಬಹುದು ಆದರೆ ಆಡಳಿತ ಸರ್ಕಾರ ಮಾಡಿರುವ ಕಾನೂನುಗಳು ಮಾತ್ರ ಶಾಶ್ವತವಾಗಿ ಉಳಿಯುತ್ತದೆ ಇನ್ನೊಂದು ಸರಕಾರ ಬಂದರೆ ಮತ್ತೊಂದು ತಿದ್ದುಪಡಿ ಆಗಬಹುದು ಮತ್ತೊಮ್ಮೆ ಪ್ರತಿಭಟನೆ ಆಗುವ ಸಂಭವವೂ ಇರಬಹುದು .
ಇಲ್ಲಿ ನಿಜವಾಗಿ ರೈತರ ಹಾಗೂ ವಿದ್ಯುತ್ ಇಲಾಖೆ ನೌಕರರ ಮನಸ್ಥಿತಿಗೇ ತಕ್ಕಂತೆ ನೀತಿ ನಿಯಮಗಳು ಜಾರಿಗೆ ಬರಬೇಕಾಗಿದೆ.
ಇಲ್ಲಿ ಯಾರಿಗೆ ಲಾಭ ನಷ್ಟವಿದೆಯೋ ಯಾವುದೂ ತಿಳಿಯದಾಗಿದೆ ಈ ವಿದ್ಯುತ್ ಖಾಯಿದೆ ತಿದ್ದುಪಡಿಯ ಬಗ್ಗೆ ಸಮಗ್ರ ಚಿಂತನೆಯ ಅವಶ್ಯಕತೆ ಖಂಡಿತಾ ಇದೆ…

ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking:ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು..! Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...!