
ಕರ್ನಾಟಕ ರಾಜಕೀಯ ಹಬ್ಬದಲ್ಲಿ ಬಿಜೆಪಿಯ ಚುನಾವಣಾ ಮೊದಲ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಬಹುತೇಕ ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದ್ದು. ಇನ್ನೇನು ಘೋಷಣೆ ಅಷ್ಟೇ ಬಾಕಿ ಎನ್ನುತ್ತಿವೆ ಮೂಲಗಳು ಆದರೆ ಈಗ ಮತ್ತೊಂದು ಚರ್ಚೆಯ ವಿಷಯ ಶುರುವಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಲಿಸಲು ಬಿಜೆಪಿ ಹೈಕಮಾಂಡ್ ರಣತಂತ್ರ ಹೆಣೆದಿದ್ದು ಸಿದ್ದರಾಮಯ್ಯ ವಿರುದ್ಧ ಅವರ ರಾಜಕೀಯ ಕಡುವೈರಿ ಕೆ,ಎಸ್ ಈಶ್ವರಪ್ಪ ಅವರನ್ನು ಕೋಲಾರದಿಂದ ನಿಲ್ಲಿಸಲು ಚರ್ಚೆ ಶುರುವಾಗಿದೆ ಎನ್ನಲಾಗುತ್ತಿದೆ.
ಇನ್ನೊಂದು ಕಡೆ ಸ್ಪರ್ಧಿಸಲು ನಿರ್ಧರಿಸಿರುವ ಸಿದ್ದರಾಮಯ್ಯನ ಕ್ಷೇತ್ರ ವರುಣಾದಲ್ಲಿ ವಿ ಸೋಮಣ್ಣ ಅವರನ್ನು ನಿಲ್ಲಿಸಲು ಚರ್ಚೆ ಶುರುವಾಗಿದೆ ಎನ್ನಲಾಗುತ್ತಿದೆ.
ಒಂದು ವೇಳೆ ಇದು ನಿಜವಾದರೆ 2023 ರ ಕರ್ನಾಟಕ ಚುನಾವಣೆ ಮತ್ತಷ್ಟು ರಂಗೇರುವುದರಲ್ಲಿ ಸಂಶಯವಿಲ್ಲ…
ಏಕೆಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಒಂದೇ ಸಮುದಾಯಕ್ಕೆ ಸೇರಿದವರು ಹಾಗೂ ಪರಸ್ಪರ ಸಮಯ ಸಿಕ್ಕಾಗಲೆಲ್ಲಾ ಒಬ್ಬರಿಗೊಬ್ಬರು ವಿರೋಧಿಸಿಕೂಂಡು ಬಂದವರು ಹಾಗೆ ವಿ ಸೋಮಣ್ಣ ಕಥೆಯು ಕೂಡ ಅಷ್ಟೇ…
ಹಾಗಾಗಿ ಒಂದು ವೇಳೆ ಈಶ್ವರಪ್ಪನವರಿಗೆ ಶಿವಮೊಗ್ಗ ಹಾಗೂ ಕೋಲಾರ ಎರಡು ಕ್ಷೇತ್ರ ಹಾಗೂ ಸೋಮಣ್ಣನವರಿಗೆ ವರುಣಾದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದೆ ಆದಲ್ಲಿ ಬಿಜೆಪಿ ಹೈಕಮಾಂಡ್ ಸಿದ್ದರಾಮಯ್ಯನವರನ್ನು ಸೋಲಿಸಲು ಬಿಗಿಯಾದ ರಣತಂತ್ರ ರೂಪಿಸಿದೆ ಎನ್ನಬಹುದು..
ರಘುರಾಜ್ ಹೆಚ್.ಕೆ…9449553305…