ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ : ಗನ್ ನ ಹಿಂಭಾಗದಿಂದ, ತಲೆ ಮತ್ತು ಮೈ ಕೈಗೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿ, ಗನ್ ತೋರಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದವನ ಬಂಧನ..!!
ಮೊಹಮ್ಮದ್ ರಿಯಾಬ್, 24 ವರ್ಷ, ಅಣ್ಣಾನಗರ, ಶಿವಮೊಗ್ಗ ಈತನು ತನ್ನ ಪರಿಚಯಸ್ಥನಾದ ಅಜರ್ ನಿಗೆ ದ್ವಿ ಚಕ್ರ ವಾಹನವನ್ನು ಮಾರಾಟ ಮಾಡಿದ್ದು, ಅಜರ್ ನು ಬೈಕ್ ನ ಹಣವನ್ನು ಕೊಡದೇ ಸತಾಯಿಸುತ್ತಿದ್ದು, ದಿನಾಂಕಃ 08-04-2023 ರಂದು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಇಲಿಯಾಜ್ ನಗರದ ನ್ಯಾಮತ್ ಶಾದಿ ಮಹಲ್ ಬಳಿ ಅಜರ್ ನಿಂತಿದ್ದಾಗ ಬೈಕ್ ನ ಹಣವನ್ನು ಕೊಡು ಎಂದು ಮೊಹಮ್ಮದ್ ರಿಯಾಬ್ ನು ಕೇಳಿದ್ದಕ್ಕೆ, ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಅಜರ್ ನು ತನ್ನ ಬಳಿ ಇದ್ದ ಗನ್ ನ ಹಿಂಭಾಗದಿಂದ, ತಲೆ ಮತ್ತು ಮೈ ಕೈಗೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿ, ಗನ್ ತೋರಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0118/2023 ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣ ದಾಖಲಿಸಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿತನ ಪತ್ತೆ ಬಗ್ಗೆ ಜಿಲ್ಲಾ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ.ಕೆ, ಮತ್ತು ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಬಾಲರಾಜ್ ಪೊಲೀಸ್ ಉಪಾಧಿಕ್ಷಕರು, ಶಿವಮೊಗ್ಗ – ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಅಂಜನ್ ಕುಮಾರ್ ಪೊಲೀಸ್ ನಿರೀಕ್ಷಕರು, ದೊಡ್ಡಪೇಟೆ ಪೊಲೀಸ್ ಠಾಣೆ, ವಸಂತ್ ಪೊಲೀಸ್ ಉಪ ನಿರೀಕ್ಷಕರು, ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಮಂಜುನಾಥ್, ಎಎಸ್ಐ, ಪೂರ್ವ ಸಂಚಾರಿ ಪೊಲೀಸ್ ಠಾಣೆ, ಶಿವಮೊಗ್ಗ, ದೊಡ್ಡಪೇಟೆ ಪೊಲೀಸ್ ಠಾಣೆಯ ಎಎಸ್ಐ ಚೂಡಾಮಣಿ, ಪಿಸಿ ರಮೇಶ್ ಮತ್ತು ರೌಡಿ ನಿಗ್ರಹ ದಳದ ಸಿಬ್ಬಂಧಿಗಳಾದ ಹೆಚ್.ಸಿ ಹಾಲಪ್ಪ, ಅಶೋಕ ಮತ್ತು ಮನೋಹರ್ ಹಾಗೂ ಸಿಪಿಸಿ ಗುರುನಾಯ್ಕ, ನಾಗಪ್ಪ, ಹರೀಶ್ ನಾಯ್ಕ, ವಸಂತ, ರಮೇಶ್, ಆಕಾಶ್, ಶರತ್ ಮತ್ತು ತಮ್ಮಣ್ಣ ರವರುಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿರುತ್ತದೆ.
ಸದರಿ ತನಿಖಾ ತಂಡವು ಇಂದು ಸದರಿ ಪ್ರಕರಣದ ಆರೋಪಿತನಾದ ಅಜರ್ @ ಮೊಹಮ್ಮದ್ ಅಜರ್, 25 ವರ್ಷ, 3ನೇ ಕ್ರಾಸ್ ಇಲಿಯಾಜ್ ನಗರ, ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ, ವಿಚಾರಣೆಗೊಳಪಡಿಸಿದ್ದು, ತಾನು ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ಹೊಂದಿರುವುದಾಗಿ ಮಾಹಿತಿ ನೀಡಿದ ಮೇರೆಗೆ, ಆರೋಪಿತನಿಂದ ಒಂದು ಕಂಟ್ರಿ ಮೇಡ್ ಪಿಸ್ತೂಲ್, ಒಂದು ಮೇಡ್ ಇನ್ ಬೆಂಗಳೂರು ಇಂಡಿಯಾ ಏರ್ ಗನ್, ಏರ್ ಗನ್ ಗುಂಡುಗಳು, 100 ಎಂಎಲ್ ನ ಡ್ರಗ್ ಮಿಶ್ರಿತವಿರುವ ಮೋನೋಕಾಫ್ ಪ್ಲಸ್ ನ ಒಟ್ಟು 156 ಬಾಟಲಿಗಳನ್ನುಅಮಾನತ್ತು ಪಡಿಸಿಕೊಂಡಿರುತ್ತಾರೆ.
ಸದರಿ ತನಿಖಾ ತಂಡದ ಉತ್ತಮ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ ಕೆ ಅವರು ಅಭಿನಂದಿಸಿದ್ದಾರೆ....