
ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರ ತಾಳಗುಪ್ಪ ಹೋಬಳಿಯ ಶಿರವಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 206 ರಿಂದ ಸುಂಕ ದೇವರಕೊಪ್ಪ ಗ್ರಾಮದ ಮೂಲಕ ಹುಣಸೂರು ರಾಂಪುರ ಹೋಗುವ ಗ್ರಾಮ ಪಂಚಾಯಿತಿ ರಸ್ತೆ ಕಳೆದ ಎರಡು ವರ್ಷಗಳಿಂದ ಸಂಪೂರ್ಣವಾಗಿ ಮಳೆಯಿಂದ ಕೊಚ್ಚಿ ಹೋಗಿದ್ದು, ಕೆಸರು ಗದ್ದೆ ಆಗಿರುತ್ತದೆ. ಈ ರಸ್ತೆಯ ಕಡೆಗೆ ಸ್ಥಳೀಯ ಅಧಿಕಾರಿಗಳಾಗಲಿ, ತಾಲೂಕು ಆಡಳಿತವಾಗಲಿ, ಮಾನ್ಯ ಶಾಸಕರಾಗಲಿ ರಸ್ತೆ ದುರಸ್ತಿ ಮಾಡುವ ಕಡೆ ಗಮನ ಹರಿಸಿಲ್ಲ. ರಸ್ತೆಯು ಸಂಪೂರ್ಣ ಹಾಳಾಗಿದ್ದೂ, ಕೆಸರುಮಯವಾಗಿದೆ. ಶಾಲಾ-ಕಾಲೇಜಿಗೆ ಹೋಗುವ ಮಕ್ಕಳಿಗೆ ಸಾರ್ವಜನಿಕರಿಗೆ ರೈತರಿಗೆ ತೀವ್ರ ತೊಂದ್ರೆ ಆಗಿರುತ್ತದೆ. ಈ ರಸ್ತೆ ಹಾಳಾಗಿರುವುದರಿಂದ ಸುಮಾರು ಮೂರರಿಂದ ನಾಲ್ಕು ಕಿಲೋಮೀಟರ್ ಸುತ್ತುಹಾಕಿ ಶಾಲೆಗೆ ಹೋಗುವ ಪರಿಸ್ಥಿತಿ ಬಂದಿರುತ್ತದೆ. ಆದಷ್ಟು ಬೇಗನೆ ಸರ್ಕಾರದ ವತಿಯಿಂದ ತುರ್ತು ಕಾಮಗಾರಿ ಕೈಗೊಂಡು ಸಾರ್ವಜನಿಕ ಅನುಕೂಲಕರ ರಸ್ತೆಯತ್ತ ಕ್ರಮಕ್ಕೆ ಆಡಳಿತ ರೂಢರು ಮುಂದಾಗುವೀರಾ…..?! ನಿತ್ಯ ಕೆಸರುಮಯವಾದ ರಸ್ತೆಯಲ್ಲಿ ಸಂಚರಿಸುವ ಶಾಲಾ ಮಕ್ಕಳು, ಗ್ರಾಮಸ್ಥರು ಆಡಳಿತ ರೂಢರಲ್ಲಿ ಮನವಿ ಮಾಡಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್.ಕೆ…9449553305….