
ಮೊಟ್ಟೆ:- ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರಿ ಶಾಲೆಯಲ್ಲಿ 01 ರಿಂದ 08 ನೇ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶ ಹೆಚ್ಚಿಸಲು ಬಿಸಿಯೂಟ ಜೊತೆಗೆ ಮೊಟ್ಟೆ ವಿತರಣೆ ಮಾಡುತ್ತಿರುವುದು ಹಾಗೂ ಸಸ್ಯಾಹಾರಿ ಶಾಲಾ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಹಾಗೂ ಶೇಂಗಾ ಮಿಠಾಯಿ ಒದಗಿಸುತ್ತಿರುವುದು ಶ್ಲಾಘನೆ ವಿಷಯವಾಗಿದೆ.
ಆದರೇ,
ಸರ್ಕಾರಿ ಶಾಲೆಯ ಹೆಚ್ಚಿನ ಶಾಲೆಗಳಲ್ಲಿ 01 ರಿಂದ 10 ನೇ ತರಗತಿಗಳು ನೆಡೆಯುತ್ತಿದ್ದೂ, ಆ ಶಾಲಾ ಆವರಣದಲ್ಲಿ 09 ರಿಂದ 10 ನೇ ತರಗತಿಯ ಶಾಲಾ ಮಕ್ಕಳು ಬಿಸಿಯೂಟ ಸಹ ಭೋಜನ ಮಾಡುವಾಗ 01 ರಿಂದ 08 ನೇ ತರಗತಿಯ ಶಾಲಾ ಮಕ್ಕಳಿಗೆ ಮೊಟ್ಟೆ / ಬಾಳೆಹಣ್ಣು / ಮಿಠಾಯಿ ವಿತರಣೆ ಮಾಡುತ್ತಿರುವಾಗ ಅದೇ ಬಿಸಿಯೂಟ ಸಹ ಭೋಜನದಲ್ಲಿ 09-10 ನೇ ತರಗತಿಯ ಶಾಲಾ ಮಕ್ಕಳು ತಮಗೆ ಈ ಸೌಲಭ್ಯವಿಲ್ಲದಿರುವ ಬಗ್ಗೆ ನಿರಾಸೆಯಿಂದ ಇರುವುದು ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.

ಭವ್ಯ ಭಾರತದಲ್ಲಿ ಮಕ್ಕಳನ್ನು ದೇವರೆಂದು ಭಾವಿಸುವ ರಾಷ್ಟ್ರ
ದಯವಿಟ್ಟು ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರಿ ಶಾಲೆಯಲ್ಲಿ 01 ರಿಂದ 10 ನೇ ತರಗತಿಯವರಿಗೆ ವಿದ್ಯಾಭ್ಯಾಸ ಮಾಡುವ ಎಲ್ಲಾ ಶಾಲಾ ಮಕ್ಕಳಿಗೆ ಮೊಟ್ಟೆ / ಬಾಳೆಹಣ್ಣು – ಮಿಠಾಯಿ ಒದಗಿಸುವಂತೆ ಪ್ರಜ್ಞಾವಂತರು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ .
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್.ಕೆ…9449553305….