ದಿನಾಂಕ : 02-04-2023 ರಂದು ಅನಾಮಧೇಯ ವ್ಯಕ್ತಿಯೊಬ್ಬನು ಭದ್ರಾವತಿಯ CDPO (Child Development Project Officer) ರವರ ಮೊಬೈಲ್ ನಂಬರ್ ಗೆ ಕರೆ ಮಾಡಿ ತನ್ನನ್ನು ಶಿವಮೊಗ್ಗ ಲೋಕಾಯಕ್ತ ಪೊಲೀಸ್ ಉಪಾದೀಕ್ಷಕರು ಅಂತಾ ಹೇಳಿ, ಅಂಗನವಾಡಿಗೆ ಆಹಾರ ವಿತರಿಸುವ ವಿಚಾರದಲ್ಲಿ, ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ, ಬೆಂಗಳೂರಿನಿಂದ ವಿಚಾರಣಾಧಿಕಾರಿಗಳು ಬಂದಿದ್ದಾರೆ, ಈ ಸಾರಿ ಜೀವಧಾನ ನೀಡುತ್ತೇವೆ, ರೂ 1,20,000/- ಗಳನ್ನು ಗೂಗಲ್ ಪೇ ಮಾಡಿ ಎಂದು ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡಿರುತ್ತಾನೆಂದು, ಸುರೇಶ್, ಸಿಡಿಪಿಓ ಭದ್ರಾವತಿ ರವರು ನೀಡಿದ ದೂರಿನ ಮೇರೆಗೆ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ0037/2023 ಕಲo 384, 511 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ...
ರಘುರಾಜ್ ಹೆಚ್.ಕೆ..9449553305...