
ಶಿವಮೊಗ್ಗ : ಜಿಲ್ಲೆಯ ಸಹಕಾರ ಕ್ಷೇತ್ರದಿಂದ ರಾಷ್ಟ್ರೀಯ ಮಹಾಮಂಡಲ ಉಪಾಧ್ಯಕ್ಷರು ಅಗಿ ಚಾಪು ಮೂಡಿಸುವ ಮೂಲಕ ಸುಮಾರು 30 ದಶಕಗಳ ಕಾಲ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ನೂರಕ್ಕೂ ಅಧಿಕ ಸೊಸೈಟಿಗಳನ್ನು ಹುಟ್ಟು ಹಾಕಿ ಸಹಕಾರಿ ಕ್ಷೇತ್ರದಲ್ಲಿ ಭೀಷ್ಮ ಎನಿಸಿಕೊಂಡ… ಕರ್ನಾಟಕದ ಸಹಕಾರಿ ರತ್ನ ಬಿರುದನ್ನು ಪಡೆದ ಡಾ//ಆರ್ ಎಂ ಮಂಜುನಾಥ ಗೌಡರು ಅಪೇಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 2013 ಚುನಾವಣೆಯಲ್ಲಿ ಬ್ಯಾಂಕ್ ಅಧ್ಯಕ್ಷರು ಅಗಿದ್ದ ಸಂಧರ್ಭದಲ್ಲಿ ತೀರ್ಥಹಳ್ಳಿಯಲ್ಲಿ ಚುನಾವಣೆಯಲ್ಲಿ ನಿಂತು ಅಲ್ಪ ಮತಗಳಿಂದ ಸೋತ ಬಳಿಕ ಅವರನ್ನು ಹೇಗದಾರು ಮಾಡಿ ಹಣಿಯಬೇಕು ಏಂಬ ಕೆಟ್ಟ ಉದ್ದೇಶದಿಂದ ಸರ್ಕಾರದ ಅಧಿಕಾರ ಮುಖೇನ DCC ಬ್ಯಾಂಕ್ ನಿಂದು ದೂರ ಮಾಡಿದರು ಕುತಂತ್ರಿಗಳು ಎಂದು ಈಗಲೂ ದೂರುತ್ತಾರೆ ಅವರ ಅಭಿಮಾನಿಗಳು…
ಇನ್ನು ಕೆಲವು ಜನ ಗೌಡರು DCC ಬ್ಯಾಂಕ್ ಹೊರಗೆ ಇದ್ದಾರೆ ಈಗ ಅವರ ಮಾತು ಡಿಸಿಸಿ ಬ್ಯಾಂಕಿನಲ್ಲಿ ನಡೆಯುವುದಿಲ್ಲ… ಸುಳ್ಳು ಸುದ್ದಿಯನ್ನು ಹಬ್ಬಿಸುವುದರ ಮೂಲಕ ಗೌಡರ ವರ್ಚಸ್ಸನ್ನು ಕುಗ್ಗಿಸುವ ಪ್ರಯತ್ನ ಪಟ್ಟರು..ಆದರೆ ಡಾ ಆರ್ ಎಂ ಮಂಜುನಾಥ ಗೌಡರು ನ್ಯಾಯಲಯದ ಮೋರೆ ಹೋಗಿ ಚಲಬಿಡದೆ ಸೊಸೈಟಿಯಿಂದ ಸ್ಪರ್ಧೆ ಮಾಡಿ ಡಿಸಿಸಿ ಬ್ಯಾಂಕ್ ಅಪೆಕ್ಸ್ ಬ್ಯಾಂಕ್ ರಾಷ್ಟ್ರೀಯ ಮಹಾ ಮಂಡಲ ಇನ್ನು ಹಲವಾರು ಕ್ಷೇತ್ರಕ್ಕೆ ಹೋಗುವ ಶಿವಮೊಗ್ಗ. ತಾಲ್ಲೂಕಿನ ಸೊಸೈಟಿಗೆ ಸ್ಪರ್ಧೆ ಮಾಡಿ ಅತ್ಯಧಿಕ ಮತಗಳಿಂದ ಜಯಶಾಲಿ ಅಗಿ ಸಹಕಾರ ಕ್ಷೇತ್ರದಲ್ಲಿ ಅಪಪ್ರಚಾರ ಮಾಡುತ್ತ ಇದ್ದವರಿಗೆ ತಕ್ಕ ಉತ್ತರ ಕೊಟ್ಟರು .
ಇನ್ನು ಸಹಕಾರ ಕ್ಷೇತ್ರದಲ್ಲಿ ಗೌಡರಿಂದ ಲಾಭ ಪಡೆದ ಅನೇಕ ಸೊಸೈಟಿ ಅಧ್ಯಕ್ಷರು, ಕಾರ್ಯದರ್ಶಿ ಗಳು ನಿರ್ದೇಶಕರು ಹೇಗೋ ಗೌಡರ ಕಥೆ ಮುಗಿತು ಅಂತ ಗೌಡರ ಎದುರು ಬರುವುದನ್ನ ಮರೆತರು ಆದರೆ ಯಾವಾಗ ಮತ್ತೆ ಅದೇ ಸೊಸೈಟಿಯಿಂಧ ಸ್ಪರ್ಧೆ ಮಾಡಿ ಮತ್ತೆ ತಾನು ಕಟ್ಟಿಬೆಳೆಸಿದ ಅ ಕ್ಷೇತ್ರಕ್ಕೆ ಬರುವ ಸುಳಿವು ಕೊಟ್ಟರು…
ಈಗ ಮತ್ತೆ ಶಿವಮೊಗ್ಗ ಜಿಲ್ಲೆಯ ಸಹಕಾರಿಗಳು ಆ ಸೊಸೈಟಿ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಎಲ್ಲರೂ ಗೌಡರ ಕರಕುಚ್ಚಿ ಮನೆ ತೀರ್ಥಹಳ್ಳಿಯ ಬೆಟ್ಟಮಕ್ಕಿ ಮನೆ ಏದರು ದಿನ ಮಂಜುನಾಥ ಗೌಡರ ಭೇಟಿಗಾಗಿ ಕಾದು ನಿಂತು ಬೇಟಿ ಮಾಡಿ ಅಣ್ಣ ನಮಸ್ಕಾರ ನೀವು ಗೆದ್ದಿದ್ದು ತುಂಬಾ ಖುಷಿ ಅಯಿತು ಎಂದು ಗೌರವಿಸ್ತಾ ಇದ್ದಾರೆ…
ಇಂಥ ಸಹಕಾರಿ ಕ್ಷೇತ್ರದ ದಿಗ್ಗಜ , ಸ್ನೇಹಪರ ವ್ಯಕ್ತಿತ್ವದ ಮಾನವೀಯ ಮೌಲ್ಯವುಳ್ಳ ವ್ಯಕ್ತಿ ಹಲವು ಸಂಘ ಸಂಸ್ಥೆಗಳಿಗೆ ದೇವಸ್ಥಾನಗಳಿಗೆ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ತನ್ನನ್ನು ತಾನು ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿಗೆ ನಾಳೆ ಅಭಿನಂದಿಸುವ ಅಭಿನಂದನಾ ಕಾರ್ಯಕ್ರಮ…
ರಘುರಾಜ್ ಹೆಚ್. ಕೆ…9449553305