
ಯಲ್ಲಾಪುರ :- ಯಾರೋ ಕಳ್ಳರು ದಿನಾಂಕ 18/11/2022 ರಂದು ಬೆಳಿಗ್ಗೆ 07:30 ಗಂಟೆಯಿಂದ ಸಂಜೆ 05:15 ಗಂಟೆಯ ಅವಧಿಯಲ್ಲಿ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ಗ್ರಾಮದ ಶ್ರೀ ಮಹಾಗಜ ಲಕ್ಷ್ಮಿ ದೇವಸ್ಥಾನದ ಬಾಗಿಲ ಬೀಗವನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ತೆಗೆದು ದೇವಸ್ಥಾನದ ಒಳಗೆ ಹೋಗಿ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಒಡೆದು ತೆಗೆದು ಅದರಲ್ಲಿದ್ದ ಸುಮಾರು 03 ಸಾವಿರ ರೂಪಾಯಿ ಕಾಣಿಕೆ ಹಣ ಹಾಗೂ ಸುಮಾರು 10 ಸಾವಿರ ರೂಪಾಯಿ ಬೆಲೆ ಬಾಳುವ ದೊಡ್ಡದಾದ ಎರಡೂ ಹಿತ್ತಾಳೆಯ ಗಂಟೆಗಳು ಹಾಗೂ ಸುಮಾರು 20 ಸಾವಿರ ರೂಪಾಯಿ ಬೆಲೆ ಬಾಳುವ ಒಂದೂ ತಾಮ್ರದ ಕಡಾಯಿ ಹಾಗೂ 10 ಸಾವಿರ ಬೆಲೆ ಬಾಳುವ ಡಿವಿಆರ್ ನ್ನೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನ ಮಾಡಿದ ಆರೋಪಿತರನ್ನು ಮತ್ತು ಕಳ್ಳತನವಾದ ದೇವಸ್ಥಾನದ ಸ್ವತ್ತುಗಳನ್ನು ಪತ್ತೆ ಮಾಡಿ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಅಂತಾ ಫಿರ್ಯಾದಿಯವರಾದ ಶ್ರೀ ಗಣೇಶ ತಂದೆ ನಾಗೇಶ್ ಭಂಡಾರ್ಕರ್ ಸಾ : ಪಿಯುಸಿ ಕಾಲೇಜು ಹಿಂಭಾಗ ಮಂಚಿಕೇರಿ ಯಲ್ಲಾಪುರ ಇವರು ನೀಡಿದ ದೂರನ್ನು ದಿನಾಂಕ 19/11/2022 ರಂದು 11 : 00 ಗಂಟೆಗೆ ಸ್ವೀಕರಿಸಿ ಕೊಂಡು ಠಾಣಾ ಗುನ್ನೆ ಸಂಖ್ಯೆ 255/2022 ಕಲಂ 457, 380 ಐಪಿಸಿ ರೀತ್ಯಾ ದಾಖಲಿಸಿ ಕೊಂಡು ತನಿಖೆ ಕೈಗೊಂಡಿರುತ್ತಾರೆ.
ಯಾರೋ ಕಳ್ಳರು ದಿನಾಂಕ 18/11/2022 ರಂದು ಬೆಳಿಗ್ಗೆ 09 :00 ಗಂಟೆಯಿಂದ ದಿನಾಂಕ 19/11/2022 ರಂದು ಬೆಳಿಗ್ಗೆ 08:00 ಗಂಟೆಯ ನಡುವೆಯ ಅವಧಿಯಲ್ಲಿ ಗೊಳ್ಳಾಪುರ ಶ್ರೀ ಶಿವವ್ಯಾಘ್ರಶ್ವರ ದೇವಸ್ಥಾನದ ಬಾಗಿಲ ಬೀಗವನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ತೆಗೆದು ದೇವಸ್ಥಾನದ ಒಳಗೆ ಹೋಗಿ ದೇವಸ್ಥಾನದಲ್ಲಿದ್ದ ಸುಮಾರು 13,500/- ರೂ ಬೆಲೆಯ ದೇವಸ್ಥಾನದ ಪೂಜಾ ಸಾಮಗ್ರಿಗಳನ್ನೂ ಕಳ್ಳತನ ಮಾಡಿಕೊಂಡು ಹೋಗಿದ್ದೂ ಕಳ್ಳತನ ಮಾಡಿದ ಆರೋಪಿತರನ್ನು ಮತ್ತು ಕಳ್ಳತನವಾದ ದೇವಸ್ಥಾನದ ಸ್ವತ್ತುಗಳನ್ನೂ ಪತ್ತೆ ಮಾಡಿ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಫಿರ್ಯಾದಿಯವರಾದ ಶ್ರೀ ನಾರಾಯಣ ತಂದೆ ಸೀತಾರಾಮ್ ಭಟ್ ಸಾ : ಕೂಡ್ಲಗದ್ದೆ ಯಲ್ಲಾಪುರ ಇವರು ನೀಡಿದ ದೂರನ್ನು ಸ್ವೀಕರಿಸಿ ಕೊಂಡು ಠಾಣಾ ಗುನ್ನ ಸಂಖ್ಯೆ 256/2022 ಕಲಂ 454,457,380 ಐಪಿಸಿ ರೀತ್ಯಾ ದಾಖಲಿಸಿ ಕೊಂಡು ತನಿಖೆ ಕೈಗೊಂಡಿರುತ್ತಾರೆ.
ವಿಷ್ಣುವರ್ಧನ್ ಏನ್ ಐಪಿಎಸ್, ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ರವರ ಆದೇಶದಂತೆ ಈ ಎರಡು ಪ್ರಕರಣದಲ್ಲಿ ಆರೋಪಿತರ ಪತ್ತೆ ಕುರಿತು ವಿಶೇಷ ತಂಡ ರಚಿಸಿ ಆರೋಪಿತರ ಬಗ್ಗೆ ಖಚಿತ ಮಾಹಿತಿ ತೆಗೆದು ಆರೋಪಿತರಾದ 1) ವಸಂತ ಕುಮಾರ್ @ ವಸಂತ ತಂದೆ ಶಿವಪ್ಪ ತಂಬಾಕದ ಪ್ರಾಯ 40 ವರ್ಷ ವೃತ್ತಿ : ಪ್ರಾಥಮಿಕ ಶಾಲೆ ಶಿಕ್ಷಕ ಸಾ : ಲಿಂಗದೇವರಕೊಪ್ಪ ಪೋಸ್ಟ್ ಕುಂಚೂರು ತಾಲ್ಲೂಕು ರಟ್ಟೀಹಳ್ಳಿ, ಜಿಲ್ಲೆ ಹಾವೇರಿ ಹಾಗೂ 2) ಸಲೀಮ ತಂದೆ ಜಮಲಾ ಸಾಬ ಕಮ್ಮಾರ ಪ್ರಾಯ 28 ವರ್ಷ ವೃತ್ತಿ ಹಮಾಲಿ ಮತ್ತು ಚಾಲಕ, ಸಾ || ಗುಡ್ಡದಬೇವಿನಹಳ್ಳಿ, ರಾಣಿಬೆನ್ನೂರ್ ತಾಲ್ಲೂಕು, ಜಿಲ್ಲೆ ಹಾವೇರಿ ರವರಿಗೆ ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದರಲ್ಲಿ ಆರೋಪಿತರು ಇವರಿಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಅಂಕೋಲಾ, ಶಿರಸಿ ಗ್ರಾಮೀಣ, ಬನವಾಸಿ, ಹಾಗೂ ಶಿವಮೊಗ್ಗ ಜಿಲ್ಲೆಯ ನಗರ ರಿಪ್ಪನಪೇಟೆ ಹೊಸನಗರ ಮತ್ತು ಹಾವೇರಿ ಜಿಲ್ಲೆಯ ಹಂಸಬಾವಿ ಹಿರೇಕೆರೂರ ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದೇವಸ್ಥಾನ ಕಳ್ಳತನ ಮಾಡಿ ಬಂಗಾರ ಮತ್ತು ಬೆಳ್ಳಿಯ ವಸ್ತುಗಳು ಕಾಣಿಕೆ ಹುಂಡಿ ಗಂಟೆಗಳು ಹಿತ್ತಾಳೆ ಮತ್ತು ತಾಮ್ರದ ಪೂಜಾ ಸಾಮಗ್ರಿಗಳನ್ನೂ ಹಾಗೂ ಸಿ. ಸಿ. ಟಿವಿಯ ಡಿ.ವಿ.ಆರ್ ನೇದನ್ನು ಕಳ್ಳತನ ಮಾಡಿದೆ ಬಗ್ಗೆ ತಿಳಿದು ಬಂದಿರುತ್ತದೆ.
ಆರೋಪಿತರಿಂದ 03 ಜಿಲ್ಲೆಯಲ್ಲಿ ಒಟ್ಟು 18 ದೇವಸ್ಥಾನ ಕಳ್ಳತನ ಪ್ರಕರಣಗಳನ್ನೂ ಪತ್ತೆ ಮಾಡಿ ಅವರುಗಳಿಂದ ಕೃತ್ಯಕ್ಕೆ ಬಳಸಿದ 1) ಮಾರುತಿ ನೆಕ್ಸ ಕಂಪನಿಯ ಎಸ್. ಕ್ರಾಸ್ ಕಾರು -01, ಆ || ಕಿ ||, 12,00,000/- ರೂಪಾಯಿ 2) ಬಜಾಜ್ ಪ್ಲಾಟಿನಾ ಕಂಪನಿಯ ಮೋಟಾರ್ ಸೈಕಲ್ – 01 ಅ || ಕಿ || 30,000/- (3) ನಗದು ಹಣ 2,29,000/- ರೂಪಾಯಿ (4) 09 ಗ್ರಾಂ ತೂಕದ ದೇವರ ಬಂಗಾರದ ಆಭರಣಗಳು ಅ || ಕಿ || 50,000/- (5) 03 ಕೆ.ಜಿ 400 ಗ್ರಾಂ ತೂಕದ ದೇವರ ಬೆಳ್ಳಿಯ ಆಭರಣಗಳು ಅ || ಕಿ || 1,80,400 ರೂಪಾಯಿ (6) ಹಿತ್ತಾಳೆಯ 140 ಗಂಟೆಗಳು ಅ || ಕಿ || 1,45,000 ರೂಪಾಯಿ (7) 27 ಹಿತ್ತಾಳೆಯ ದೀಪದ ಶಮೆ ಅ || ಕಿ || 39550/- ರೂಪಾಯಿ (8) 22 ಹಿತ್ತಾಳೆಯ ತೂಗು ದೀಪಗಳು ಅ || ಕಿ || 9600/- ರೂಪಾಯಿ (9) 07 ತಾಮ್ರದ ಕೊಡಗಳು ಅ || ಕಿ || 13500/- ರೂಪಾಯಿ ಹಾಗೂ (10) ಇನ್ನಿತರೇ 35 ಹಿತ್ತಾಳೆ ಹಾಗೂ ತಾಮ್ರದ ಪೂಜಾ ಸಾಮಗ್ರಿಗಳು ಆ || ಕಿ || 13235/- ರೂಪಾಯಿ (11) ಡಿ. ವಿ. ಆರ್. – 01 ಅ || ಕಿ || 10,000/- ರೂಪಾಯಿಗಳು. ಹೀಗೇ ಒಟ್ಟು 19,20,285/- ಬೆಲೆಯ ಸ್ವತ್ತನ್ನೂ ಜಪ್ತು ಪಡಿಸಿಕೊಂಡಿದ್ದು ಇರುತ್ತದೆ.
ಆರೋಪಿತರು ಕಳೆದ 03-04 ವರ್ಷಗಳಿಂದ ಈ ರೀತಿಯ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದೂ ಎಲ್ಲಿಯೂ ಸಿಕ್ಕಿ ಬಿದ್ದಿರುವುದ್ದಿಲ್ಲ ವೈಭವ /ಶೋಕಿ ಜೀವನಕ್ಕಾಗಿ ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿದ್ದಾಗಿ ಆರೋಪಿತರು ಹೇಳಿರುತ್ತಾರೆ.
ವಿಷ್ಣುವರ್ಧನ್ ಏನ್ (ಐಪಿಎಸ್ ) ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ಕಾರವಾರ, ಸಿ. ಟಿ. ಜಯಕುಮಾರ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕಾರವಾರ. ರವಿ ನಾಯಕ್ ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿರಸಿ, ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಸುರೇಶ್ ಯಳ್ಳುರಾ ಪಿ. ಎಸ್ ಐ. ಯಲ್ಲಾಪುರ, ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಪಿ. ಎಸ್. ಐ ರವರುಗಳಾದ ಮಂಜುನಾಥ ಗೌಡರ್, ಅಮೀನ ಸಾಬ್ ಅತ್ತಾರ, ಶ್ಯಾಮ ಪಾವಸ್ಕರ್, ಪ್ರೊ. ಪಿ. ಎಸ್. ಐ. ಉದಯ ಹಾಗೂ ಸಿಬ್ಬಂದಿಯವರಾದ ದೀಪಕ್ ನಾಯ್ಕ್, ಬಸವರಾಜ್ ಹಗರಿ, ಮಹ್ಮದ್ ಶಫಿ, ಗಜಾನನ ನಾಯ್ಕ್, ಪರಶುರಾಮ್ ಕಾಳೆ, ಪ್ರವೀಣ್ ಪೂಜಾರ್, ಗಿರೀಶ್, ನಂದೀಶ್, ಹಾಗೂ ಮಹಿಳಾ ಸಿಬ್ಬಂದಿ ಶೋಭಾ ನಾಯ್ಕ್ ಹಾಗೂ ಸಿ. ಡಿ. ಆರ್ ಸೆಲ್ ವಿಭಾಗದ ಉದಯ, ರಮೇಶ್ ಹಾಗೂ ಹಾವೇರಿ ಜಿಲ್ಲೆಯ ಹಂಸಬಾವಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯವರಾದ ಮೋಹನ್ ಇವರುಗಳು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.
ಸದರಿ ಪತ್ತೆ ಮಾಡಿದ ಎಲ್ಲಾ ಅಧಿಕಾರಿ / ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಕಾರವಾರ ರವರು ಶ್ಲಾಘನೀಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ಸದರಿ ಆರೋಪಿತರು ಈ ಕೆಳಗಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುತ್ತಾರೆ.
(1) ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ – 02, ಬನವಾಸಿ – 03, ಶಿರಸಿ ಗ್ರಾಮೀಣ – 01, ಅಂಕೋಲಾ – 02…
(2) ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ – 03, ನಗರ – 01, ಹೊಸನಗರ – 01…
(3) ಹಾವೇರಿ ಜಿಲ್ಲೆಯ ಹಾವೇರಿ ಗ್ರಾಮೀಣ – 02, ಹಂಸಬಾವಿ – 02, ಹಿರೇಕೆರೂರ – 01.
ಸಾರ್ವಜನಿಕರ ಜಾಗೃತಿಗಾಗಿ ವಿಶೇಷ ಸೂಚನೆಗಳು
(1) ದೇವಸ್ಥಾನಗಳಿಗೆ ಕಡ್ಡಾಯವಾಗಿ ಉತ್ತಮ ಗುಣಮಟ್ಟದ ನೈಟ್ ಕಲರ್ ವಿಜನ್ ಸಿ. ಸಿ. ಕ್ಯಾಮೆರಾಗಳನ್ನೂ ಅಳವಡಿಸುವುದು.
(2) ದೇವಸ್ಥಾನದಲ್ಲಿ ಸಿ. ಸಿ. ಕ್ಯಾಮೆರಾ ಅಳವಡಿಸುವಾಗ ಡಿ. ವಿ. ಆರ್. ಬಾಕ್ಸ್ ಯಾರಿಗೂ ಕಾಣದ ರೀತಿಯಲ್ಲಿ ಸುರಕ್ಷಿತವಾಗಿ ಅಳವಡಿಸುವುದು.
(3) ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಬೀಟ್ ಪೊಲೀಸರಿಗೆ, 112/100 ನೇದಕ್ಕೆ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
(4) ದೇವಸ್ಥಾನಕ್ಕೆ ಬೀಗ ಹಾಕಿ ಕೊಂಡು ಹೊರಗೆ ಹೋಗುವಾಗ ದೇವರ ಮೈ ಮೇಲಿನ ಬೆಲೆ ಬಾಳುವ ಆಭರಣಗಳನ್ನೂ ಸಂಬಂಧಪಟ್ಟವರು ಭದ್ರವಾಗಿ ತೆಗೆದಿರಿಸುವುದು.
(5) ದೇವಸ್ಥಾನದಲ್ಲಿಯ ಕಾಣಿಕೆ ಹುಂಡಿಯಲ್ಲಿ ಹೆಚ್ಚಿನ ಹಣವನ್ನು ಇಡದೇ ಪ್ರತಿ ವಾರಕ್ಕೊಮ್ಮೆ ಆದರೂ ತೆಗೆದಿರಿಸುವುದು.
(6) ರಾತ್ರಿ ವೇಳೆಯಲ್ಲಿ ದೇವಸ್ಥಾನದ ಒಳಗೆ ಹಾಗೂ ಸುತ್ತಮುತ್ತಲೂ ಬೆಳಕಿನ ವ್ಯವಸ್ಥೆಯನ್ನೂ ಮಾಡುವುದು.
(7) ದೇವಸ್ಥಾನದ ಬಾಗಿಲುಗಳಿಗೆ ಒಳ ಬೀಗ (INNER LOCKER ) ಬಳಸುವುದು.
ಓಂಕಾರ ಎಸ್. ವಿ. ತಾಳಗುಪ್ಪ….