
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ನಿನ್ನೆ ಮತ್ತು ಇಂದು ಶಿವಮೊಗ್ಗ ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿಗಳು ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ವಿವಿಧಡೆ ದಾಳಿ ನಡೆಸಿ ಸಾರಾಯಿ ಕಳ್ಳಬಟ್ಟಿ ಅದಕ್ಕೆ ಬೇಕಾಗುವ ಸಾಮಗ್ರಿಗಳು ಹಾಗೂ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಅಬಕಾರಿ ಆಯುಕ್ತರಾದ ರವಿಶಂಕರ್ ಜೆ ರವರ ನಿರ್ದೇಶನದಂತೆ ಹಾಗೂ ನಾಗರಾಜಪ್ಪ ಟಿ ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗ ರವರ ಮಾರ್ಗದರ್ಶನದಲ್ಲಿ, ಹಾಗೂ ಕ್ಯಾಪ್ಟನ್ ಅಜಿತ್ ಕುಮಾರ್ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಅಬಕಾರಿ ಉಪ ಆಯುಕ್ತರ ಕಚೇರಿಯ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಸಾಗರ ಉಪ ವಿಭಾಗ ಕಚೇರಿಯ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಹಾಗೂ ಸೊರಬ ವಲಯ ನಿರೀಕ್ಷಕರು ಕಚೇರಿ ಸಿಬ್ಬಂದಿಗಳೊಂದಿಗೆ ಸೊರಬ ತಾಲ್ಲೂಕು ಹಿರೇಮಾಗಡಿ ತಾಂಡಾದಲ್ಲಿ ಅಬಕಾರಿ ದಾಳಿ ನಡೆಸಿ ಡಾಕ್ಯನಾಯ್ಕ ಬಿನ್ ಈರನಾಯ್ಕ ಎಂಬುವವರು ಉಳುಮೆ ಮಾಡುವ ಹೊಲದಲ್ಲಿ 120 ಲೀಟರ್ ಬೆಲ್ಲದ ಕೊಳೆಯನ್ನು ಜಪ್ತುಪಡಿಸಿಕೊಂಡು ಸದರಿಯವರ ವಿರುದ್ದ ಅಬಕಾರಿ ಕಾಯ್ದೆ ಅನ್ವಯ ಮೊಕದ್ದಮೆ ದಾಖಲಿಸಿ ನಂತರ. ಶಿಕಾರಿಪುರ ತಾಲ್ಲೂಕು ಚಿಕ್ಕಮಾಗಡಿ ತಾಂಡಾದಲ್ಲಿ ಅಬಕಾರಿ ದಾಳಿ ನಡೆಸಿ ಗಂಗಿಭಾಯಿ ಕೋಂ ಈಶ್ವರನಾಯ್ಕ ಎಂಬುವವರು ತಮ್ಮ ಮನೆಯಲ್ಲಿ 01 ಪ್ಲಾಸ್ಟಿಕ್ ಕೊಡಪಾನದಲ್ಲಿ ಸಂಗ್ರಹಿಸಿದ್ದ 10 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಜಪ್ತುಪಡಿಸಿಕೊಂಡು ಸದರಿಯವರ ವಿರುದ್ದ ಅಬಕಾರಿ ಕಾಯ್ದೆ ಅನ್ವಯ ಮೊಕದ್ದಮೆ ದಾಖಲಿಸಿಲಾಗಿರುತ್ತದೆ .ಸಾಗರ ತಾಲೂಕು ಗುಡ್ಡಹಳ್ಳಿ ಕಟ್ಟಿನಕರು ಗ್ರಾಮ ಕೊಗಾರುವಿನ ವಾಸಿಯಾದ ನಾರಾಯಣ ಬಿನ್ ಜಟ್ಟ ನಾಯ್ಕ ರವರಿಗೆ ಸೇರಿದ ತೋಟದ ಮೇಲೆ ದಾಳಿ ಮಾಡಲಾಗಿ ಅಲ್ಲಿ 10 ಗಾಂಜಾ ಗಿಡಗಳು (3kg) ಇರುವುದನ್ನು ಪತ್ತೆಹಚ್ಚಿ ಸದರಿ ಆಸಾಮಿಯ ಮೇಲೆ NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ….

ರಘುರಾಜ್ ಹೆಚ್.ಕೆ…9449553305…