
ಶಿವಮೊಗ್ಗ: ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿಯಿಂದ ಯಾರಾಗ್ತಾರೆ ಅಭ್ಯರ್ಥಿ ಎನ್ನುವ ಗೊಂದಲಕ್ಕೆ ಒಂದು ಹಂತದಲ್ಲಿ ತೆರೆ ಬಿದ್ದಿದ್ದು ಬಿಜೆಪಿಯ ಅಲಿಖಿತ ನಿಯಮದ ಪ್ರಕಾರ ವಯಸ್ಸಿನ ಆಧಾರದ ಮೇಲೆ ಮಾಜಿ ಸಚಿವ ಹಾಲಿ ಶಾಸಕರಾದ ಕೆ ಎಸ್ ಈಶ್ವರಪ್ಪನವರಿಗೆ ಟಿಕೆಟ್ ನೀಡುವುದು ಬೇಡ ಎನ್ನುವುದು ಹಲವರ ಅಭಿಪ್ರಾಯ ಆದರೆ ಬಿಜೆಪಿ ಪಕ್ಷ ಕಟ್ಟಿ ಬೆಳೆಸುವಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆಗೆ ಸಾಥ್ ನೀಡಿರುವ ಈಶ್ವರಪ್ಪನವರಿಗೆ ಕೊನೆಯ ಅವಕಾಶ ನೀಡಬೇಕು ಎನ್ನುವುದು ಇನ್ನೊಂದು ಬಣದ ಅಭಿಪ್ರಾಯ ಒಂದು ವೇಳೆ ಅವರಿಗೆ ನೀಡದಿದ್ದರೆ ಅವರ ಮಗ ಕಾಂತೇಶ್ ಗೆ ನೀಡಬೇಕು ಎನ್ನುವುದು ಕಾರ್ಯಕರ್ತರ ಕೂಗು …
ಈ ಬೆಳವಣಿಗೆಯ ಮಧ್ಯದಲ್ಲಿಯೇ ಎಂ ಎಲ್ ಸಿ ಆಯನೂರು ಮಂಜುನಾಥ್ ಈಶ್ವರಪ್ಪ ನವರ ವಿರುದ್ಧ ರೆಬೆಲ್ ಆಗಿದ್ದು ಸತತವಾಗಿ ಈಶ್ವರಪ್ಪನವರಿಗೆ ಟಿಕೆಟ್ ನೀಡಿರುವುದು ಸಾಕು ಇನ್ನು ಬೇರೆಯವರಿಗೆ ನೀಡಿ ಇಲ್ಲದಿದ್ದರೆ ನಾನು ಕೂಡ ಪ್ರಬಲ ಆಕಾಂಕ್ಷಿ ನನಗೆ ಬಿಜೆಪಿ ಟಿಕೆಟ್ ನೀಡಿ ಎಂದು ಬಹಿರಂಗವಾಗಿ ತಮ್ಮ ಅಸಮಾಧಾನ ಹಾಗೂ ಬೇಡಿಕೆಯನ್ನು ಬಿಜೆಪಿ ಹೈಕಮಾಂಡ್ ಮುಂದೆ ಇಟ್ಟಿದ್ದಾರೆ…
ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ನೀಡದಿದ್ದರೆ ಆಯನೂರು ಮಂಜುನಾಥ್ ಮುಂದಿನ ನಡೆ ಏನು..?!
ಬಿಜೆಪಿಯಿಂದ ಟಿಕೆಟ್ ನೀಡದಿದ್ದರೆ ನಾನು ಸ್ಪರ್ಧೆ ಮಾಡುವುದಂತೂ ಖಚಿತ ಇನ್ನಿತರ ಪಕ್ಷಗಳಲ್ಲಿ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಅದರಲ್ಲಿ ಎರಡು ಮಾತಿಲ್ಲ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಾರೆ ಆಯನೂರು ಮಂಜುನಾಥ್…
ಆಯನೂರು ಮಂಜುನಾಥ್ ಜೊತೆ ಕಾಂಗ್ರೆಸ್ ಹೈಕಮಾಂಡ್ ಸಂಪರ್ಕದಲ್ಲಿ : ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿರುವ ಕಾಂಗ್ರೆಸ್ ಗೆ ಆಯನೂರು ಮಂಜುನಾಥ್ ಬಿಜೆಪಿಯ ವಿರುದ್ಧ ರೆಬೆಲ್ ಆಗಿರುವುದು ವರದಾನವಾಗಿದೆ ಆಯನೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಲು ತೆರೆಮರೆಯಲ್ಲಿ ಎಲ್ಲಾ ರೀತಿಯ ಕಸರತ್ತು ಶುರುವಾಗಿದೆ..
ಕಾಂಗ್ರೆಸ್ ಗೆ ಆಯನೂರು ಮಂಜುನಾಥ್ ಕರೆ ತರಲು ಕಾರಣವೇನು..,?! ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರುವ ಆಯನೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಿದರೆ ಲಿಂಗಾಯತ್ ಮತಗಳನ್ನು ಸೆಳೆಯಬಹುದು. ಹಾಗೆ ಬಿಜೆಪಿ ವಿರುದ್ಧದ ಮುಸ್ಲಿಂ ಮತಗಳು ಕೂಡ ಆಯನೂರು ಗೆ ಬೀಳಬಹುದು ಬಹುಮುಖ್ಯವಾಗಿ ಕಳೆದ ಚುನಾವಣೆಯಲ್ಲಿ 50,000 ಅಂತರ ಗಳಿಂದ ಕೆಎಸ್ ಈಶ್ವರಪ್ಪ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆದ್ದಿದ್ದರು. ಈ ಅಂತರದ 50,000 ಮತಗಳನ್ನು ಈ ಬಾರಿ ಕಾಂಗ್ರೆಸ್ ಗೆ ತರಬಲ್ಲ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್ ಇದೆ ಹಾಗೂ ಮಾಸ್ ನಾಯಕತ್ವ ಹೊಂದಿರುವ ಮಂಜುನಾಥ್ ಅವಶ್ಯಕತೆ ಕಾಂಗ್ರೆಸ್ ಗೆ ಇದೆ ಈ ಸಮಯದಲ್ಲಿ ಎನ್ನುವುದು ಕೆಲವರ ಅಭಿಪ್ರಾಯ…
ಕಾಂಗ್ರೆಸ್ ನ ಒಂದು ಬಣ ಒಗ್ಗಟ್ಟಿನಿಂದ ವರಿಷ್ಠರ ಮುಂದೆ ಹೋಗಿ ಸ್ವ ಪಕ್ಷದವರನ್ನೇ ಅಭ್ಯರ್ಥಿಯನ್ನಾಗಿ ಮಾಡಿ ಹೊರಗಿಂದ ಬಂದವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದೆ.
ಆದರೆ ಕಾಂಗ್ರೆಸ್ ನ ಕೆಲವರು ಬಹಿರಂಗವಾಗಿಯೇ ಹೋದವರೆಲ್ಲರೂ ಮತವನ್ನು ಸೆಳೆಯುವವರು ಅಲ್ಲ ಅವರೆಲ್ಲರೂ ಹೊಂದಾಣಿಕೆಯ ರಾಜಕೀಯದವರು ಅವರಿಂದ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ ಕಾಂಗ್ರೆಸ್ ಏನಾದರು ಗೆಲ್ಲುವುದಾದರೆ ಅದು ಆಯನೂರು ಮಂಜುನಾಥ್‌ಗೆ ಟಿಕೆಟ್ ನೀಡಿದರೆ ಮಾತ್ರ ಎನ್ನುವುದನ್ನು ಕೆಲವರು ಬಹಿರಂಗವಾಗಿ ಹೇಳಿದ್ದಾರೆ…
ಹೀಗೆ ಹಲವು ಲೆಕ್ಕಾಚಾರಗಳು ನಡೆಯುತ್ತಿವೆ ಒಟ್ಟಿನಲ್ಲಿ ಸದ್ಯದಲ್ಲಿಯೇ ಶೀತಲ ಸಮರಕ್ಕೆ ತೆರೆ ಬೀಳಬಹುದು…
ಒಂದು ವೇಳೆ ಕೆ,ಎಸ್ ಈಶ್ವರಪ್ಪ v/s ಆಯನೂರು ಮಂಜುನಾಥ್ ಸ್ಪರ್ಧೆ ಏರ್ಪಟ್ಟರೆ ಶಿವಮೊಗ್ಗ ರಾಜಕೀಯದಲ್ಲಿ ಹೊಸ ಸಂಚಲನ ಮಾಡುವುದಂತೂ ನಿಜ ಇವೆಲ್ಲ ಬೆಳವಣಿಗೆಯ ಮಧ್ಯೆ ಪ್ರಾದೇಶಿಕ ಪಕ್ಷ ಜೆಡಿಎಸ್ ಅಭ್ಯರ್ಥಿ ಇನ್ನೂ ಯಾರೆಂದು ನಿರ್ಧಾರವಾಗಿಲ್ಲ ಜೆಡಿಎಸ್ ನಿಲುವು ಇನ್ನೂ ಸ್ಪಷ್ಟ ಇಲ್ಲ..
ಒಟ್ಟಿನಲ್ಲಿ 2023ರ ಕದನ ಕುತೂಹಲದಲ್ಲಿ ಶಿವಮೊಗ್ಗ ಕ್ಷೇತ್ರ ಮಹತ್ವ ಪಡೆದುಕೊಂಡಿದೆ… ಎಲ್ಲಾ ಗೊಂದಲಗಳಿಗೂ ಸದ್ಯದಲ್ಲೇ ತೆರೆ ಬೀಳಲಿದೆ…

ರಘುರಾಜ್ ಹೆಚ್.ಕೆ…9449553305…