
ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರವು ಒಂದು ಇಲ್ಲಿ ಕಾಂಗ್ರೆಸ್ಗೆ ಯಾರಾಗ್ತಾರೆ ಅಭ್ಯರ್ಥಿ ಎನ್ನುವುದು ಇನ್ನೂ ಫೈನಲ್ ಆಗ್ತಾಯಿಲ್ಲ..
ಈಗಾಗಲೇ ಬಿಜೆಪಿಯಿಂದ ಆರಗ ಜ್ಞಾನೇಂದ್ರ,ಜೆಡಿಎಸ್ ನಿಂದ ಯಡೂರು ರಾಜಾರಾಮ್ ಫೈನಲ್ ಆಗಿದೆ.. ಆದರೆ ಕಾಂಗ್ರೆಸ್ ನಿಂದ ಯಾರಾಗ್ತಾರೆ ಆರ್ ಎಂ ಮಂಜುನಾಥ್ ಗೌಡ ಅವರ ಅಥವಾ ಮಾಜಿ ಸಚಿವ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅವರ ಎನ್ನುವ ಗೊಂದಲಕ್ಕೆ ಇನ್ನೂ ತೆರೆ ಬಿದ್ದಿಲ್ಲ..
ಕಿಮ್ಮನೆ ರತ್ನಾಕರ್ ಮತ್ತು ಆರ್ ಮಂಜುನಾಥ್ ಗೌಡರ ಒಮ್ಮತದ ಹೇಳಿಕೆಯ ಪ್ರಕಾರ ಈಗಾಗಲೇ ಪಕ್ಷದ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಬಳಿ ಈ ಬಗ್ಗೆ ಸಾಕಷ್ಟು ಸಲ ಚರ್ಚೆ ನಡೆದಿದೆ ಒಬ್ಬರಿಗೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಎಂಎಲ್ಎ ಟಿಕೆಟ್ ಇನ್ನೊಬ್ಬರಿಗೆ ಎಂಎಲ್ಸಿ ಟಿಕೆಟ್ ಎನ್ನುವುದು ಫೈನಲ್ ಆಗಿದೆ..
ಆದರೆ ಯಾರಿಗೆ ಎಂಎಲ್ಎ ಟಿಕೆಟ್ ಯಾರಿಗೆ ಎಂಎಲ್ಸಿ ಟಿಕೆಟ್ ಎನ್ನುವುದು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ..
ಭವಿಷ್ಯ ನಾಲ್ಕನೇ ತಾರೀಕಿನ ನಂತರ ಈ ನಿರ್ಧಾರ ಆಗಬಹುದು ಅದು ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ ಯಾರಿಗೆ ಟಿಕೆಟ್ ಕೊಟ್ಟರು ಕೂಡ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಬಿಜೆಪಿಯನ್ನು ಸೋಲಿಸುತ್ತೇವೆ ಎನ್ನುತ್ತಾರೆ ಇಬ್ಬರು ನಾಯಕರು…

ರಘುರಾಜ್ ಹೆಚ್.ಕೆ…9449553305…